ಬೆಂಗಳೂರು: ಬೆಂಗಳೂರಿನ ಖಲೀನ್ ಜೋಶಿ ಅವರು ಕೆಜಿಎಯಲ್ಲಿ ನಡೆದ ರೂ.1 ಕೋಟಿ ಬಹುಮಾನ ಮೊತ್ತದ ಬೆಂಗಳೂರು ಓಪನ್ 2026 ಪವರ್ಡ್ ಬೈ ಇಂಡಿಯನ್‌ಆಯಿಲ್ ಟೂರ್ನಿಯಲ್ಲಿ ತಂತಿ-ತಂತಿಯಾಗಿ (ವೈರ್-ಟು-ವೈರ್) ಮುನ್ನಡೆ ಕಾಯ್ದುಕೊಂಡು ಐದು ಶಾಟ್‌ಗಳ ಭರ್ಜರಿ ಗೆಲುವು ದಾಖಲಿಸಿದರು. ಅಂತಿಮ ಸುತ್ತಿನಲ್ಲಿ ಎರಡು ಅಂಡರ್ 70 ಸ್ಕೋರ್ ಮಾಡಿದ ಜೋಶಿ, ಒಟ್ಟು 20 ಅಂಡರ್ 268 ಸ್ಕೋರ್‌ನೊಂದಿಗೆ ಪ್ರಶಸ್ತಿ ಗೆದ್ದರು.34 ವರ್ಷದ ಜೋಶಿ, 61-68-69-70 ಸ್ಕೋರ್ಗಳೊಂದಿಗೆ ಒಟ್ಟು 268 ಸ್ಟ್ರೋಕ್‌ಗಳನ್ನು ದಾಖಲಿಸಿದರು. ಐದು ಬರ್ಡಿಗಳು ಮತ್ತು ಮೂರು ಬೋಗಿಗಳೊಂದಿಗೆ ಅಂತಿಮ ಸುತ್ತು ಪೂರ್ಣಗೊಳಿಸಿದ ಅವರು, ತಮ್ಮ 10ನೇ ಡಿಪಿ ವರ್ಲ್ಡ್ ಪಿಜಿಟಿಐ ಪ್ರಶಸ್ತಿ ಹಾಗೂ ಈ ಋತುವಿನ ನಾಲ್ಕನೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.2018ರಲ್ಲಿ ಏಷ್ಯನ್ ಟೂರ್ ಪ್ರಶಸ್ತಿ ಗೆದ್ದಿದ್ದ ಜೋಶಿ, ಕಳೆದ ವಾರ ನಡೆದ ಎಸ್‌ಇಸಿಎಲ್ ಪ್ರೆಸೆಂಟ್ಸ್ ನವಾ ರಾಯ್ಪುರ ಓಪನ್ ಬಳಿಕ ಸತತ ಎರಡನೇ ಪ್ರಶಸ್ತಿ ಗೆದ್ದಿದ್ದಾರೆ. ಈ ಗೆಲುವಿನಿಂದ ಅವರು ರೂ.15 ಲಕ್ಷ ಬಹುಮಾನ ಪಡೆದಿದ್ದು, 2026ರ ಡಿಪಿ ವರ್ಲ್್ಡ ಪಿಜಿಟಿಐ ಆರ್ಡರ್ ಆಫ್ ಮೆರಿಟ್‌ನಲ್ಲಿ ಏಳನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಅವರ ಒಟ್ಟು ಋತುಮಾನದ ಆದಾಯ ರೂ.67,34,225ಕ್ಕೆ ಏರಿಕೆಯಾಗಿದೆ.ಗೆಲುವಿನ ಬಳಿಕ ಮಾತನಾಡಿದ ಜೋಶಿ, ಇತ್ತೀಚಿನ ಯಶಸ್ಸಿಗೆ ತಮ್ಮ ಮಾನಸಿಕ ದೃಢತೆ ಮತ್ತು ಒತ್ತಡದ ಸಂದರ್ಭಗಳಲ್ಲಿ ಶಾಂತವಾಗಿ ಆಡುವ ಸಾಮರ್ಥ್ಯ ಪ್ರಮುಖ ಕಾರಣ ಎಂದು ಹೇಳಿದರು.