LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಭುವನಂ ಗಗನಂ ಟೀಸರ್ ರಿಲೀಸ್

ಭುವನಂ ಗಗನಂ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ನಟ ನೆನಪಿರಲಿ ಪ್ರೇಮ್, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಟೀಸರ್ ರಿಲೀಸ್ ಬಳಿಕ ಧ್ರುವ ಸರ್ಜಾ ಮಾತನಾಡಿ, ಚಿತ್ರದ ಟೈಟಲ್ ಕೇಳಿದ ತಕ್ಷಣ ನನಗೆ ನೆನಪಾಗಿದ್ದು, ಭುವನಂ ಗಗನಂ ಸಾಂಗ್. ವಂಶಿ ಚಿತ್ರದ್ದು. ಅಂದರು.

ನಟ ಪ್ರಮೋದ್ ಮಾತನಾಡಿ, ಭುವನಂ ಗಗನಂ ತುಂಬಾ ಇಷ್ಟಪಟ್ಟು ಒಪ್ಪಿಕೊಂಡ ಸಿನಿಮಾ. ಯಾಕಂದರೆ ನಾನು ಲವ್ ಸ್ಟೋರಿ ಮಾಡಿರಲಿಲ್ಲ. ಗಿರೀಶ್ ಕಥೆ ಹೇಳಿದಾಗ, ಸೀನ್ಸ್ ಹೇಳಿದಾಗ ಖುಷಿಯಾಯ್ತು. ಅಂದರೆ ಈ ತರಹದ್ದು ಸಿನಿಮಾ ಮಾಡಿದರೆ ತುಂಬಾ ಜನ, ಫ್ಯಾಮಿಲಿ, ಹೆಣ್ಮಕ್ಕಳಿಗೆ ರೀಚ್ ಆಗುತ್ತದೆ. ಅಂತಾ ಖುಷಿಪಟ್ಟು ಒಪ್ಪಿಕೊಂಡಿದ್ದೇನೆ.

ಗಿರೀಶ್ ಶೂಟ್ ಮಾಡಿದಾಗ ಯಾಕೆ ಇಷ್ಟು ಇವರು ನಿಧಾನ ಇದ್ದಾರೆ ಎಂದು ಗಾಬರಿಯಾಗಿತ್ತು. ಡಬ್ಬಿಂಗ್ ಶುರುವಾಗಿದೆ. ಸಿನಿಮಾ ನೋಡುತ್ತಿದ್ದೇವೆ. ಈಗ ಅವರು ಯಾಕೆ ನಿಧಾನ ಶೂಟ್ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ಪ್ರತಿಯೊಬ್ಬರು ಅವರು ಅಂದುಕೊಂಡಂತೆ ಬರಲು ತಡವಾಗಿದೆ ಎಂದು ಅರ್ಥವಾಯ್ತು. ಎಲ್ಲರಿಗೂ ಸಿನಿಮಾ ಇಷ್ಟವಾಗುತ್ತದೆ ಅಂದರು.

ನಿರ್ದೇಶಕ ಗಿರೀಶ್ ಮಾತನಾಡಿ, ಭುವನಂ ಗಗನಂ ಟೀಸರ್ ಲಾಂಚ್ ಮಾಡಲಾಗಿದೆ. ಸಿನಿಮಾ ಜರ್ನಿ ಬಗ್ಗೆ ಹೇಳಲು ತುಂಬಾ ಇದೆ. ಇದು ಜಸ್ಟ್ ಟೀಸರ್. ಮುಂದೆ ಸಾಂಗ್ ಇದೆ. ಟ್ರೇಲರ್ ಇದೆ. ಸಿನಿಮಾ ಚೆನ್ನಾಗಿದೆ. ಅದರಲ್ಲೂ ಯೂತ್ಸ್ ಗೆ ಕನೆಕ್ಟ್ ಆಗುತ್ತದೆ. ಫ್ಯಾಮಿಲಿ ಎಂಟರ್ ಟೈನರ್ ಕಥೆ ಇದೆ ಅಂದರು.

ಗಿರೀಶ್ ಮೂಲಿಮನಿ ಕಥೆ, ಚಿತ್ರಕಥೆ ಬರೆದು ಭುವನಂ ಗಗನಂ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಭುವನಂ ಗಗನಂ ಮೂಲಕ ಫ್ರೆಶ್ ಕಥೆಯನ್ನು ಹೇಳೋದಿಕ್ಕೆ ಬರ್ತಿದ್ದಾರೆ ಅಂದರು.ಭುವನಂ ಗಗನಂ ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರ ಸಿನಿಮಾವಾಗಿದ್ದು, ನಗರ, ಹಳ್ಳಿ ಎರಡು ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಕಥೆಯಾಗಿದ್ದು, ಪ್ರಮೋದ್ ಗೆ ಜೋಡಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸ್ತಿದ್ದಾರೆ.

ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ತಾರಾಬಳಗದಲ್ಲಿದ್ದಾರೆ. ಉದಯ್ ಲೀಲಾ ಕ್ಯಾಮೆರಾ ಕೈಚಳಕ, ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಕಿಕ್, ಸುನೀಲ್ ಕಶ್ಯಪ್ ಸಂಕಲನ ಸಿನಿಮಾಕ್ಕಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು