LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಚೆಸ್: ಗುಕೇಶ್ ಮರಳಿ ಅಗ್ರಸ್ಥಾನಕ್ಕೆ

ಟೊರೊಂಟೊ: ಭಾರತದ ವಿದಿತ್ ಗುಜ್ರಾತಿ ಅವರನ್ನು ಸೋಲಿಸುವ ಮೂಲಕ ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿಯಲ್ಲಿ ಡಿ. ಗುಕೇಶ್ ಮರಳಿ ಜಂಟಿ ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

8ನೇ ಸುತ್ತಿನ ಫಲಿತಾಂಶದ ಬಳಿಕ ಅವರು ರಷ್ಯಾದ ಇಯಾನ್ ನೆಪೋಮ್ನಿಯಾಚಿ ಜತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಇಬ್ಬರೂ 5 ಅಂಕ ಹೊಂದಿದ್ದಾರೆ.
ನಿಜತ್ ಅಬಸೋವ್ ವಿರುದ್ಧ ನೆಪೊಮ್ನಿಯಾಚಿ ಡ್ರಾ ಸಾಧಿಸಿದರು. ಆರ್. ಪ್ರಜ್ಞಾನಂದ ಮತ್ತು ಫ್ರಾನ್ಸ್‍ನ ಫಿರೌಝ ಅಲಿರೇಝ ನಡುವಿನ ಪಂದ್ಯ ಕೂಡ ಡ್ರಾದಲ್ಲಿ ಕೊನೆಗೊಂಡಿತು. ಇನ್ನೂ 6 ಸುತ್ತುಗಳ ಸ್ಪರ್ಧೆ ನಡೆಯಲಿಕ್ಕಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST