ಬೆಂಗಳೂರು: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ಸಂಬAಧ ಮಳೆ ಆರಂಭವಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಆದರೆ ಈ ತಿಂಗಳ 13ರಂದು ಕರೆದಿರುವ ಕರ್ನಾಟಕ ಬಂದ್ ನಡೆಯುವುದೋ ಇಲ್ಲವೋ ಎಂಬ ಗೊಂದಲದಲ್ಲಿದೆ. ಈ ನಡುವೆ ಇಂದು ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣ ಹಾಗೂ ನೀರು ನಿಯಂತ್ರಣ ಸಮಿತಿ ಸಭೆಗಳು ನಡೆದಿವೆ. ಈ ಸಭೆಯಲ್ಲಿ ತಮಿಳುನಾಡು ಹಾಗೂ ಕರ್ನಾಟಕ ರಾಜ್ಯದ ಪ್ರತಿನಿಧಿಗಳು ಭಾಗಿಯಾಗಿದ್ದಾರೆ. ರಾಜ್ಯದಿಂದ ಕಾವೇರಿ ನೀರು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಭಾಗಿಯಾಗಿದ್ದಾರೆ. ಈಗಾಗಲೇ ಕಳೆದ ಬಾರಿ ನಡೆದ ಸಭೆಯ ನಿರ್ದೇಶನದಂತೆ ರಾಜ್ಯದಿಂದ ತಮಿಳುನಾಡಿಗೆ15 ದಿನದಲ್ಲಿ 4.5 ಟಿಎಂಸಿ ನೀರು ಬಿಡುವ ಬದಲಿಗೆ ಹೆಚ್ಚುವರಿಯಾಗಿ 3 ಟಿಎಂಸಿ ನೀರು ಹರಿದುಹೋಗಿದೆ ಎಂದು ಹೇಳಲಾಗಿದೆ. ಇಂದಿನ ಸಭೆಯಲ್ಲಿ ತಮಿಳುನಾಡು ತನ್ನ ಪಾಲಿನ ಆಗಸ್ಟ್ ತಿಂಗಳ ನೀರು ಬಿಡುವಂತೆ ಒತ್ತಾಯಿಸಲಿದೆ ಎಂದು ಹೇಳಲಾಗುತ್ತಿದೆ. ಸಭೆಯ ನಂತರ ಯಾವ ನಿರ್ಧಾರ ಹೊರ ಬೀಳುತ್ತದೆ ಎಂಬ ನಿರ್ಧಾರ ಮನೆ ಮಾಡಿದೆ. ನಾಡಿದ್ದು ಕರ್ನಾಟಕ ಬಂದ್ ನಡೆದೆ ತೀರುತ್ತದೆ ಎಂದು ಕನ್ನಡ ಸಂಘಟನೆಗಳ ಒಕ್ಕೂಟದ ವಾಟಾಳ್ ನಾಗರಾಜ್ ಬಿಗಿಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಮತ್ತೆ ನೀರು ಬಿಡಲು ದೆಹಲಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ನಿರ್ಧಾರ ಏನಾದರೂ ಹೊರ ಬಿದ್ದರೆ ಅದಕ್ಕೆ ವ್ಯತಿರಿಕ್ತವಾಗಿ ರಾಜ್ಯದಿಂದ ಮತ್ತೆ ಪ್ರತಿಭಟನೆ ನಡೆಯುವ ಅವಕಾಶಗಳೇ ಹೆಚ್ಚಾಗಿವೆ. ಒಟ್ಟಾರೆ ಇಂದು ನಡೆಯುವ ಸಭೆಯತ್ತ ಚಿತ್ತ ಮನೆ ಮಾಡಿದೆ.