LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸಜ್ಜು


ಬೆಂಗಳೂರು : ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶದ ವಿರುದ್ಧ ಮತ್ತು ಸಕಾಲಕ್ಕೆ ಮಳೆ ಬಾರದೆ ಇರುವ ಕಾರಣ ಜಲಭಾದೆ ರಾಜ್ಯದಲ್ಲಿ ಉಂಟಾಗಿರುವುದರಿAದ ಅದರಲ್ಲೂ ವಿಶೇಷವಾಗಿ ಕಾವೇರಿ ನದಿಯಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದನ್ನು ಮನಗಂಡು ಕನ್ನಡ ಪಕ್ಷಗಳು ಕಾವೇರಿ ನದಿಯ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ಖಂಡಿಸಿ ಆಗಸ್ಟ್ 13 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಗಳಲ್ಲಿಯೂ ಸಹ ವಹಿವಾಟುಗಳನ್ನು ನಡೆಸದಂತೆ ಕನ್ನಡ ಪಕ್ಷಗಳು ನೀಡಿರುವ ಕರೆಯನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಸಜ್ಜುಗೊಂಡಿದೆ.
 ಅಗಸ್ಟ್ 12ನೇ ತಾರೀಕು ಮಧ್ಯರಾತ್ರಿಯಿಂದ ತಮಿಳುನಾಡು ರಾಜ್ಯಕ್ಕೆ ಸೇರುವ ಹೊಸೂರ್ ರಸ್ತೆ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಬೆಂಗಳೂರು ಗ್ರಾಮಾಂತರ,ಬೆAಗಳೂರು ದಕ್ಷಿಣ ಜಿಲ್ಲೆಗಳಲ್ಲಿರುವ ರಾಜ್ಯ ಹೆದ್ದಾರಿಗಳಲ್ಲಿ ಓಡಾಡುವ ತಮಿಳುನಾಡು ರಾಜ್ಯದ ವಾಹನಗಳು ಸೇರಿದಂತೆ ಜನಗಳನ್ನು ಸಹ ಸುರಕ್ಷಿತವಾಗಿ ಓಡಾಡಲು ಮತ್ತು ಸಹಜ ಸ್ಥಿತಿಯಲ್ಲಿ ವಹಿವಾಟು ನಡೆಸಲು ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸೌಲತ್ತು ಹಾಗೂ ಸೌಕರ್ಯಗಳನ್ನು ಒದಗಿಸಲು ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
 ಕೆ ಎಸ್ ಆರ್ ಪಿ, ಜಿಲ್ಲೆಗಳಲ್ಲಿರುವ ಜಿಲ್ಲಾ ಪೊಲೀಸ್ ಶಸ್ತçದಳ, ಬೆಂಗಳೂರಿನ ಸಿ ಎ ಆರ್ ಹಾಗೂ ನಗರ ಪೊಲೀಸ್ ಸೇರಿದಂತೆ ಇನ್ನೂ ಹೆಚ್ಚುವರಿಯಾಗಿ ಪೊಲೀಸರನ್ನು ಆಯಕಟ್ಟಿನ ಸ್ಥಳಗಳಲ್ಲಿ ಅಂದಾಜು ರೂ.10,000ಕ್ಕೂ ಅಧಿಕ ಪೊಲೀಸರನ್ನು ನೇಮಕ ಮಾಡಿ ಯಾವುದೇ ತರಹದ ಗಲಾಟೆ ಹಾಗೂ ದೊಂಬಿ ಸೇರಿ ಅಂಗಡಿ ಮುಗ್ಗಟ್ಟುಗಳಿಗೆ ಬೆಂಕಿ ಇಡುವುದು, ತಮಿಳುನಾಡು ರಾಜ್ಯದ ವಾಹನಗಳನ್ನು ತಡೆದು ಬೆಂಕಿ ಇಡುವುದು ಸೇರಿದಂತೆ ಎಲ್ಲಾ ತಡೆಯಲು ಪೊಲೀಸರಿಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿರುತ್ತಾರೆ.
 ಹೆಚ್ಚುವರಿ ಆಗಿ ಪೊಲೀಸರನ್ನು ನೇಮಿಸುವುದಲ್ಲದೆ, ಅವರಿಗೆ ಗಲಾಟೆಯ ಸಮಯದಲ್ಲಿ ಕಲ್ಲು ತೂರಾಟದಲ್ಲಿ ಯಾವುದೇ ತರಹ ಗಾಯ ಸಂಭವಿಸಿದAತೆ ಇಲಾಖೆ ನೀಡಿರುವ ಕವಚಗಳನ್ನು ಮೈ ಮೇಲೆ ಹೇರಿಕೊಳ್ಳಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ನಿರ್ದೇಶನವಾಗಿರುತ್ತದೆ.
 ಯಾವುದೇ ಸಮಸ್ಯೆ ಎದುರಾದರು ಗುಂಡಿನ ದಾಳಿ ನಡೆಸಿದಂತೆ ಮುಂಜಾಗ್ರತಾ ಕ್ರಮವಾಗಿ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಗಲಾಟೆಯನ್ನು ಹದ್ದುಬಸ್ತಿನಲ್ಲಿ ಇಡಲು ಸೂಚಿಸಿರುತ್ತಾರೆ.
 ಆಗಸ್ಟ್ 12ನೇ ತಾರೀಕು ಮಧ್ಯರಾತ್ರಿಯಿಂದ 13ನೇ ತಾರೀಕು ಮಧ್ಯರಾತ್ರಿ ತನಕ ಮೈಸೂರು ವಲಯದ ಐಜಿಪಿ ಬೋರ್ಲಿಂಗಯ್ಯ ಸೇರಿದಂತೆ ಚಾಮರಾಜನಗರ, ಮಂಡ್ಯ, ಹಾಸನ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರದ ಎಲ್ಲಾ ಹಿರಿಯ ಅಧಿಕಾರಿಗಳು ವಿಶೇಷ ಕರ್ತವ್ಯದಲ್ಲಿ ತೊಡಗಿಕೊಂಡಿರಲು ಪೊಲೀಸ್ ಮಹಾ ನಿರ್ದೇಶಕರು ಆದೇಶಿಸಿರುತ್ತಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST