LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಸ್ಕೂಬಾ ಡೈವಿಂಗ್ ಸರ್ಟಿಫಿಕೇಷನ್ ಪಡೆದ ಡ್ಯಾನ್ಸರ್ ಕಿಶನ್ ಬಿಳಗಲಿ !

ಹೌದು ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಏಳರ ಖ್ಯಾತ ಸ್ಪರ್ಧಿ, ಡ್ಯಾನ್ಸರ್ ಕಿಶನ್ ಯಾರಿಗೆ ಗೊತ್ತಿಲ್ಲ ಹೇಳಿ? ರಿಯಾಲಿಟಿ ಶೋವಿನ ಮೂಲಕ ತಮ್ಮ ಡಾನ್ಸ್ ಸ್ಕಿಲ್‍ಗಳನ್ನು ಇಡೀ ಕರ್ನಾಟಕದ ಜನತೆಗೆ ತೋರಿಸಿಕೊಂಡು ಬಂದಿದ್ದಾರೆ ಕಿಶನ್.ಇದೀಗ ಕಿಶನ್ ಅವರು ಸ್ಕೂಬಾ ಡೈವಿಂಗ್ ಸರ್ಟಿಫಿಕೇಟ್ ಅನ್ನು ಪಡೆದಿದ್ದಾರೆ.

ಸ್ಕೂಬಾ ಡೈವಿಂಗ್ ಇದೊಂದು ಅಡ್ವೆಂಚರ್ ಕ್ರೀಡೆ ಆಗಿದ್ದು ಸರ್ಟಿಫಿಕೇಟ್ ಗಿಟ್ಟಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಧೈರ್ಯ ತಾಳ್ಮೆ ಹಾಗೂ ಕಲಿಯುವ ಆಸಕ್ತಿ ಇರಬೇಕು. ಇದೆಲ್ಲವನ್ನು ಹೊಂದಿರುವ ನೃತ್ಯಗಾರ ಕಿಶನ್ ಬೆಳಗಲಿ ಅವರು ಸ್ಕೂಬಾ ಡೈವಿಂಗ್ ನಲ್ಲಿ ಪರಿಣತಿಯನ್ನು ಪಡೆದಿದ್ದಾರೆ. ಮಾತ್ರವಲ್ಲದೇ ನಾಲ್ಕು ದಿನಗಳ ಕಾಲ ನೀರಿನ ಒಳಗಿನ ಸೌಂದರ್ಯವನ್ನೆಲ್ಲಾ ಕಣ್ಣಾರೆಯಾಗಿ ಸವಿದಿದ್ದಾರೆ.

ಅಂದ ಹಾಗೇ ಸಮುದ್ರದೊಳಗಿನ ಜಲಚರ ಜೀವಿಗಳನ್ನು ಹತ್ತಿರದಿಂದ ಕಾಣುವ ಅತ್ಯದ್ಭುತ ಅವಕಾಶವನ್ನು ಕೊಡುವ ಈ ಕ್ರೀಡೆಯನ್ನು ಕಲಿತಿರುವುದು ಸಾಹಸವೇ ಸರಿ. ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟೀವ್ ಇರುವ ಕಿಶನ್ ಬಿಳಗಲಿ ಅವರು ತಮ್ಮ ಹೊಸ ಹೊಸ ಡಾನ್ಸ್ ಮೂವ್ ಗಳನ್ನು ಅಭಿಮಾನಿಗಳಿಗೆ ಪ್ರೇಕ್ಷಕರಿಗೆ ತೋರಿಸುತ್ತಿರುತ್ತಾರೆ.

ಸ್ಕೂಬಾ ಡೈವಿಂಗ್ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಖುಷಿಯಿಂದ ಹಂಚಿಕೊಂಡಿದ್ದು ಪ್ರೇಕ್ಷಕರು ಅಭಿಮಾನಿಗಳು ಹಾಗೂ ಸೋಶಿಯಲ್ ಮೀಡಿಯಾ ಫಾಲೋವರ್ಸ್ ನಿಂದ ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ತಮ್ಮ ಪೋಟೋಗಳನ್ನಷ್ಟೇ ಹಾಕಿಕೊಳ್ಳದೇ ನೀರಿನೊಳಗಿನ ಜಲಚರ ಸೌಂದರ್ಯದ ಬಗ್ಗೆಯೂ ವಿಡಿಯೋ ಹಂಚಿಕೊಂಡಿದ್ದು, ಅದೀಗ ಎಲ್ಲರ ಕಣ್ಮನ ಸೆಳೆಯುತ್ತಿದೆ.

"ನಾನು ಡ್ಯಾನ್ಸ್ ಅನ್ನು ಕಲಿಯುತ್ತಿದ್ದ ಶುರುವಿನ ದಿನಗಳು ನೆನಪಾಯಿತು. ಡ್ಯಾನ್ಸ್ ಕಲಿಯುತ್ತಿದ್ದ ಆರಂಭದ ದಿನಗಳಲ್ಲಿ ಹೊಸ ಹೊಸ ಮೂಮೆಂಟ್ ಗಳನ್ನು ಕಲಿತಾಗಲು ಕೂಡಾ ನನಗೆ ಇಷ್ಟೇ ಖುಷಿಯಾಗುತ್ತಿತ್ತು. ಅದೇ ರೀತಿ ಸ್ಕೂಬಾ ಡೈವಿಂಗ್ ಕೂಡ ಕಲಿಯುವಾಗಲೂ ಕೂಡಾ ನನಗೆ ಖುಷಿಯಾಗಿದೆ. ಒಟ್ಟಿನಲ್ಲಿ ಸ್ಕೂಬಾ ಡೈವಿಂಗ್ ನನ್ನ ಮನಸ್ಸಿಗೆ ಹತ್ತಿರವಾದಂತಹ ವಿಚಾರ" ಎಂದು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಕಿಶನ್ ಬಿಳಗಲಿ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು