LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

"ಧೈರ್ಯಂ ಧರ್ಮಂ ದೇಶಂ ಇವು ಸಮಾಜದ ಅಂಗಗಳು"

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ DDD ಚಿತ್ರದ ಟ್ರೇಲರ್ ಮತ್ತು ನಾಲ್ಕು ಹಾಡುಗಳ ಬಿಡುಗಡೆ ಕಾರ್ಯಕ್ರಮ ಎಸ್‌ಆರ್‌ವಿ ಪ್ರಿವ್ಯೂ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಹೊಸರುದಲ್ಲಿ ಸಗಟು ತರಕಾರಿ ವ್ಯಾಪಾರ ಮಾಡುತ್ತಿರುವ ಕೆ.ಬಿ.ಮಂಜುನಾಥ್ ಸಿನಿಮಾಕ್ಕೆ ಕಥೆ,ನಿರ್ದೇಶನ ಅಲ್ಲದೆ
ಕೆಬಿಎಂ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಮಹೇಶ್ ಹಾಗೂ ಚಂದ್ರಣ್ಣ ಸಹ ನಿರ್ಮಾಪಕರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು
ಇಲ್ಲಿಯವರೆಗೆ ಎರಡು ಕಿರುಚಿತ್ರಗಳನ್ನು ಮಾಡಿದ್ದೇನೆ. ಇದು ನನಗೆ ಮೊದಲ ಹಿರಿತೆರೆಯ ಅನುಭವ. ಸಾಮಾನ್ಯ ಪ್ರಜೆಯಾದವನು ಧೈರ್ಯ ಮಾಡಬೇಕು.

ಅಧಿಕಾರಿಗಳು ಧರ್ಮವನ್ನು ಕಾಪಾಡಬೇಕು. ಯೋಧನಾದವನು ದೇಶವನ್ನು ಕಾಪಾಡಬೇಕು. ಇವುಗಳು ಸಮಾಜದ ಮೂರು ಅಂಗಗಳಾಗಿದೆ. ಅದಕ್ಕಾಗಿ ಆಆಆ ಎಂದು ಶೀರ್ಷಿಕೆ ಇಡಲಾಗಿದೆ. ನಾವುಗಳು ಸಮಾಜವನ್ನು ಹೇಗೆ ನೋಡಿಕೊಳ್ಳಬೇಕು. ಅವಘಡಗಳು ಆದಾಗ ಅದನ್ನು ಯಾವ ರೀತಿ ಎದುರಿಸಬೇಕು ಎಂಬುದನ್ನು ಹೇಳಲಾಗಿದೆ. ಮಾನವಿಯತೆ, ಪ್ರೀತಿ, ಸಂಬAಧಗಳ ಬೆಲೆ ಇನ್ನು ಮುಂತಾದವನ್ನು ಐದು ಹಾಡುಗಳಲ್ಲಿ ತೋರಿಸಲಾಗಿದೆ. ಇದು ಸಾರ್ವತ್ರಿಕ
ವಿಷಯವಾಗಿರುವುದರಿಂದ ಐದು ಭಾಗಗಳಿಗೆ ಈಗಾಗಲೇ ಚಿತ್ರಕಥೆ ಸಿದ್ದಪಡಿಸಿದ್ದೇನೆ.

ಮೊದಲನೆ ಭಾಗ ಇದಾಗಿರುತ್ತದೆ. ಮಾಧ್ಯಮದ ಸಹಕಾರ ಬೇಕೆಂದು ಕೋರಿಕೊಂಡರು. ಅರುಣ್‌ವೆAಕಟರಾಜು ನಾಯಕನಾಗಿ ಎರಡನೇ ಅವಕಾಶ.
ಶಿವಮೊಗ್ಗದ ಗಗನಮಲ್ನಾಡ್ ನಾಯಕಿ. ಇನ್ಸ್ಪೆಕ್ಟರ್  ಆಗಿ ರಘುಶಿವಮೊಗ್ಗ, ಉಳಿದಂತೆ ಚಾರ್ಲ್್ಸ ಟೋನಿ, ಸುರೇಶ್‌ಬಾಬು, ಡಿವಿ.ನಾಗರಾಜು, ಸುರೇಶ್‌ಬಾಬು,
ರೋಹಿಣಿ ಮುಂತಾದವರು ಅಭಿನಯಿಸಿದ್ದಾರೆ. ಬಹದ್ದೂರ್ ಚೇತನ್‌ಕುಮಾರ್, ಗಜೇಂದ್ರ, ಸAಜಯ್ ಮತ್ತು ಲಕ್ಷಿದಿನೇಶ್ ಸಾಹಿತ್ಯದ ಐದು ಗೀತೆಗಳಿಗೆ
ಸೂರಜ್‌ಜೋಯಿಸ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಎಸ್.ಕೆ.ಮಸ್ತಾನ್ ಷರೀಫ್, ಸಂಕಲನ ಧನುಷ್.ಎಲ್.ಬೇಡಿ ಅವರದಾಗಿದೆ. ಬೆಂಗಳೂರು,
ಮAಗಳೂರು, ಕೊಳ್ಳೆಗಾಲ ಗಡಿಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಚಿತ್ ಫಿಲಿಂಸ್‌ನ ವೆಂಕಟ್‌ಗೌಡ ಸಾರಥ್ಯದಲ್ಲಿ ನವೆಂಬರ್ ತಿಂಗಳಲ್ಲಿ ಸುಮಾರು ೪೦
ಕೇಂದ್ರಗಳಲ್ಲಿ ಸಿನಿಮಾವು ತೆರೆ ಕಾಣಲಿದೆ.

 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು