LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಯಶಸ್ವಿ 25ನೇ ದಿನದಲ್ಲಿ ಧೀರ ಸಾಮ್ರಾಟ್

ವರ್ಷದ ಎರಡನೇ ಚಿತ್ರ ಧೀರ ಸಾಮ್ರಾಟ್ ಯಶಸ್ವಿ 25 ದಿನಗಳನ್ನು ಪೂರೈಸಿದ ಹಿನ್ನಲೆಯಲ್ಲಿ ನಿರ್ಮಾಪಕ ಗುಡಿಬಂಡೆ ಸಂತೋಷ ಕೂಟ ಏರ್ಪಡಿಸಿ ಕಲಾವಿದರು, ತಂತ್ರಜ್ಘರುಗಳಿಗೆ ಪಾರಿತೋಷಕವನ್ನು ವಿತರಣೆ ಮಾಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಪವನ್‍ಕುಮಾರ್ 25 ಎನ್ನುವುದು ಸುಲುಭವಾದುದಲ್ಲ.

ನಮ್ಮ ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಎಲ್ಲಾ ಭಾಷೆ ಸೇರಿದಂತೆ 21 ಚಿತ್ರಗಳು ತೆರೆ ಕಂಡಿದ್ದವು. ಇದರ ಮಧ್ಯೆ ನಮ್ಮದು ಸತತ ಪ್ರದರ್ಶನ ಕಂಡಿರುವುದು ಖುಷಿಯ ವಿಚಾರ. ಮುಖ್ಯವಾಗಿ ನಿರ್ಮಾಪಕರಿಗೆ ಥ್ಯಾಂಕ್ಸ್ ಹೇಳಬೇಕು. ಸಮಸ್ಯೆ ಏನೇ ಬಂದರೂ ಅವರು ತಲೆಕೆಡಿಸಿಕೊಳ್ಳದೆ ಎಲ್ಲರನ್ನು ಹುರಿದುಂಬಿಸುತ್ತಿದ್ದರು. ಅದ್ವಿತಿಶೆಟ್ಟಿ ನಾವು ಕರೆದಾಗಲೆಲ್ಲಾ ಬಂದು ಮಾತು ಉಳಿಸಿಕೊಂಡಿದ್ದಾರೆ.

ನಮ್ಮಂತಹ ಹೊಸ ಚಿತ್ರಕ್ಕೆ ಸ್ಟಾರ್ ನಟರು ಪ್ರೋತ್ಸಾಹ ನೀಡಿದರೆ ಇನ್ನಷ್ಟು ಪ್ರಚಾರ ಸಿಗುತ್ತಿತ್ತು. ಗೆಳೆಯ ಧ್ರುವಸರ್ಜಾ ಮುಹೂರ್ತಕ್ಕೆ ಆಗಮಿಸಿ, ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದಂತೆ ಶ್ರೀಮುರಳಿ ಪೋಸ್ಟರ್ ಅನಾವರಣಗೊಳಿಸಿದ್ದರು. ಅವರೆಲ್ಲರಿಗೂ ನಮ್ಮ ಕಡೆಯಿಂದ ತುಂಬು ಹೃದಯದ ಕೃತಜ್ಘತೆ ಸಲ್ಲಿಸಬೇಕು. ತಮಿಳು,ತೆಲುಗು ಡಬ್ಬಿಂಗ್ ರೈಟ್ಸ್ ಆಗಿದೆ. ಹಿಂದಿ, ಒಟಿಟಿ ಮಾತುಕತೆಯಲ್ಲಿದೆ. ಒಟ್ಟಿನಲ್ಲಿ ಒಂದು ಹಂತದಲ್ಲಿ ನಿರ್ಮಾಪಕರು ಸೇಫ್ ಆಗಿದ್ದಾರೆ ಎಂದರು.

ಅವಕಾಶ ವಂಚಿತರಾಗಿ, ಇನ್ನೇನು ಉದ್ಯಮ ಬಿಡಬೇಕು ಅಂತ ನಿರ್ಧಾರ ಮಾಡಿದ ಸಂದರ್ಭದಲ್ಲಿ ಈ ಸಿನಿಮಾಕ್ಕೆ ಆಫರ್ ಬಂತು. ಇದರಲ್ಲಿ ನಟಿಸುತ್ತಿರುವಾಗಲೇ ಎರಡು ಚಿತ್ರಗಳಿಗೆ ಸಹಿ ಹಾಕಿದೆ. ಒಬ್ಬ ಕಲಾವಿದೆಗೆ 25 ದಿನ ಪ್ರದರ್ಶನದ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವುದು ಅಂದರೆ ಅದಕ್ಕಿಂತ ಸಂತಸ ಬೇರೆ ಇಲ್ಲ. ಇದು ಮುಂದೆ 50,100 ಆಗಲಿ, ಮತ್ತೆ ನಾವೆಲ್ಲರೂ ಸೇರೋಣ. ಅಪ್ಪ ಇದ್ದರೆ ತುಂಬ ಖುಷಿಪಡುತ್ತಿದ್ದರು ಎಂದು ಹೇಳುವಾಗ ಅವರ ಕಣ್ಣುಗಳು ಒದ್ದೆಯಾಗಿದ್ದವು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು