LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಧುರಂಧರ್ 2' ಅಬ್ಬರಕ್ಕೆ ಮಕಾಡೆ ಮಲಗಿದ ಪವನ್ ಕಲ್ಯಾಣ್ ಸಿನಿಮಾ; ಹೀನಾಯ ಕಲೆಕ್ಷನ್

ಪವನ್ ಕಲ್ಯಾಣ್ ಅವರು ರಾಜಕೀಯದಲ್ಲಿ ಬ್ಯುಸಿ ಇರುವುದರಿಂದ ಅವರ ಸಿನಿಮಾ ಅಭಿಮಾನಿಗಳಿಗೆ ಅಷ್ಟು ಸಂತೋಷ ಸಿಗುತ್ತಿಲ್ಲ. ಅವರು ಒಪ್ಪಿಕೊಂಡ ಮೂರು ಸಿನಿಮಾಗಳನ್ನು ಹೇಗೋ ಮುಗಿಸಿಕೊಟ್ಟರು. ಆದರೆ, ಯಾವ ಸಿನಿಮಾದಲ್ಲೂ ಬದ್ಧತೆ ಕಾಣಿಸಿಲ್ಲ. ಕಾಟಾಚಾರಕ್ಕೆ ಅವರು ಸಿನಿಮಾ ಶೂಟ್ ಮುಗಿಸಿಕೊಟ್ಟರು. `ಓಜಿ', `ಹರಿ ಹರ ವೀರ ಮಲ್ಲು' ಸಿನಿಮಾ ಸಾಧಾರಣ ಪ್ರದರ್ಶನ ನೀಡಿದ ಬಳಿಕ ಅವರ ನಟನೆಯ `ಉಸ್ತಾದ್ ಭಗತ್ ಸಿಂಗ್' ಚಿತ್ರವು `ಧುರಂಧರ್ 2' ಅಬ್ಬರದಿಂದ ತತ್ತರಿಸಿದೆ.
`ಧುರಂಧರ್ 2' ಸಿನಿಮಾ ಅಬ್ಬರದ ಕಲೆಕ್ಷನ್ ಮಾಡುತ್ತಿದೆ. ಗುರುವಾರ 49 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಾರದ ದಿನವೂ ಇಷ್ಟು ಅಬ್ಬರದ ಗಳಿಕೆ ಆಗುತ್ತಿರುವುದು ನಿಜಕ್ಕೂ ಶಾಕಿಂಗ್ ಎನಿಸಿದೆ. ಈ ಸಿನಿಮಾಗೆ ಗುರುವಾರ ಬರೋಬ್ಬರಿ 19,493 ಶೋಗಳನ್ನು ನೀಡಲಾಗಿತ್ತು. ಈ ಚಿತ್ರದ ಭಾರತದ ನೆಟ್ ಕಲೆಕ್ಷನ್ 674 ಕೋಟಿ ರೂಪಾಯಿ ಆಗಿದೆ. ಭಾರತದ ಗ್ರಾಸ್ ಕಲೆಕ್ಷನ್ 805 ಕೋಟಿ ರೂಪಾಯಿ ಆಗಿದೆ. ಈ ಸಿನಿಮಾಗೆ ವಿಶ್ವ ಮಟ್ಟದಲ್ಲಿ 1067 ಕೋಟಿ ರೂಪಾಯಿ ಗಳಿಕೆ ಆಗಿದೆ.
ಗುರುವಾರ `ಧುರಂಧರ್ 2' ಸಿನಿಮಾದ ತೆಲುಗು ವರ್ಷನ್‌ಗೆ 2.50 ಕೋಟಿ ರೂಪಾಯಿ ಗಳಿಕೆ ಆಗಿದೆ. ಆದರೆ, ಇದೇ ದಿನ `ಉಸ್ತಾದ್ ಭಗತ್ ಸಿಂಗ್' ಸಿನಿಮಾ ಗಳಿಕೆ ಮಾಡಿದ್ದು ಕೇವಲ 1 ಕೋಟಿ ರೂಪಾಯಿ ಮಾತ್ರ. ಇದು ಚಿತ್ರಕ್ಕೆ ಭಾರೀ ಹಿನ್ನಡೆ ತಂದಿದೆ.
ಪವನ್ ಕಲ್ಯಾಣ್ ಸಿನಿಮಾ ಭಾರತದಲ್ಲಿ 66 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರಲ್ಲಿ ಅರ್ಧದಷ್ಟು ಗಳಿಕೆ ಮೊದಲ ದಿನವೇ ಬಂದಿತ್ತು. ಆ ಬಳಿಕ ಸಿನಿಮಾದ ಗಳಿಕ ಸಂಪೂರ್ಣವಾಗಿ ತಗ್ಗಿ ಹೋಗಿದೆ. ಮುಂದಿನ ದಿನಗಳಲ್ಲಿ `ಉಸ್ತಾದ್ ಭಗತ್ ಸಿಂಗ್' ಪರಿಸ್ಥಿತಿ ಮತ್ತಷ್ಟು ಹೀನಾಯ ಆಗಬಹುದು.
ಪವನ್ ಕಲ್ಯಾಣ್ ಅವರು ಸದ್ಯಕ್ಕಂತೂ ಸಿನಿಮಾ ಮಾಡುತ್ತಿಲ್ಲ. ಅವರು ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಆಗಿದ್ದು, ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬಂದರೆ ಅವರು ಸಿನಿಮಾ ರಂಗದಿಂದಲೇ ದೂರ ಆಗಬಹುದು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು