LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಎಜುಕೇಟಡ್ ಬುಲ್ಸ್ ಟ್ರೈಲರ್

ಕಳೆದ ನಾಲ್ಕು ದಶಕಗಳಿಂದ ಡಾ.ಅಂಬರೀಷ್, ದೇವರಾಜ್, ಜಗ್ಗೇಶ್ ಶಶಿಕುಮಾರ್ ಮುಂತಾದ ಸ್ಟಾರ್ ನಟರ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಹಿರಿಯ ತಂತ್ರಜ್ಞ ಜಿ.ಕೆ. ಮುದ್ದುರಾಜ್ ಅವರು ಹತ್ತು ವರ್ಷಗಳ ನಂತರ ನಿರ್ದೇಶಿಸಿರುವ ಚಿತ್ರ ಎಜುಕೇಟಡ್ ಬುಲ್ಸ್. ಈ ಚಿತ್ರದ ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳುವ ಜತೆಗೆ ಎಂ.ಎಸ್. ಎಂಟರ್‌ಪ್ರೈಸಸ್ ಲಾಂಛನದಲ್ಲಿ ನಿರ್ಮಾಣ ಮಾಡಿದ್ದಾರೆ. ಮುದ್ದುರಾಜ್ ಅವರ ನಿರ್ದೇಶನದ 41ನೇ ಚಿತ್ರ ಇದಾಗಿದ್ದು ಇದರ ಟ್ರೈಲರ್ - ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು.
ನೀರಜ್, ಪೂರ್ವಿಕಾ (ಸ್ವಪ್ನ) ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದು, ಅಜಯ್ ಕುಮಾರ್, ತೇಜಸ್‌ಕುಮಾರ್, ರಾಕೇಶ್ ಅಲ್ಲದೆ ಪಾಪ ಪಾಂಡು ಖ್ಯಾತಿಯ ಚಿದಾನಂದ್, ಹಿರಿಯ ನಟಿ ಭವ್ಯ ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಸಂದರ್ಭದಲ್ಲಿ ನಿರ್ದೇಶಕ ಮುದ್ದುರಾಜ್ ಮಾತನಾಡಿ ಎಜುಕೇಟೆಡ್ ಬುಲ್ಸ್ ಎಂದರೆ ವಿದ್ಯಾವಂತ ಗೂಡೆಗಳು ಎಂದರ್ಥ. ಎಲ್ಲಾ ಕಲಾವಿದರು ಹೊಸಬರು ಅನಿಸದ ಹಾಗೆ ಅಭಿನಯಿಸಿದ್ದಾರೆ. 4 ವರ್ಷಗಳ ಹಿಂದೆ ಇದೇ ಹೆಸರಿನಲ್ಲಿ ಸಿನಿಮಾ ಆರಂಭಿಸಿದ್ದೆ. ಆ ನಿರ್ಮಾಪಕರು ಹಿಂದೆ ಸರಿದು ಚಿತ್ರ ನಿಂತು ಹೋಯಿತು. ಆಮೇಲೆ ಬೇರೊಂದು ಕಥೆ ತೆಗೆದುಕೊಂಡು ನಿರ್ದೇಶಿಸಿ ನಾನೇ ನಿರ್ಮಾಣ ಸಹ ಮಾಡಿದ್ದೇನೆ. 4 ಜನ ವೆಲ್ ಎಜುಕೇಟೆಡ್ ಯುವಕರು, ಅವರಿಗೆ ಸಮಾಜದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು, ಹೀಗೇ ಇರಬೇಕು ಎಂಬ ಕನಸಿರುತ್ತದೆ. ಇವರ ಆಸೆಯನ್ನು ಕೆಲವರು ದುರುಪಯೋಗಪಡಿಸಿ ಕೊಳ್ಳುತ್ತಾರೆ. ಹೀಗೇ ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ತಾನೇ ಹೋಗ್ತಾರೆ. ವಿದ್ಯೆಯ ಜತೆ ಬುದ್ದಿ ಸ್ವಲ್ಪ ಜಾಸ್ತಿನೇ ಇರಬೇಕು ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಿದ ಚಿತ್ರವಿದು. ಸೆನ್ಸಾರ್ ಯು/ಎ ಕೊಟ್ಟಿದ್ದಾರೆ. ಸಾಂಗ್, ಡೈಲಾಗ್, ಕ್ಯಾಮೆರಾ ವರ್ಕ್ ತುಂಬಾ ಚೆನ್ನಾಗಿ ಬಂದಿದೆ. ಜನ ಇಷ್ಟಪಡುತ್ತಾರೆ ಎಂಬ ನಂಬಿಕೆಯಿದೆ. ನಿರ್ಮಾಪಕನಿಗೆ 50% ಆದರೂ ರಿಟರ್ನ್ ಆಗಬೇಕು, ಜನ ಕೊಡೋ 100 ರೂಪಾಯಿಗೆ ನ್ಯಾಯ ಒದಗಿಸಬೇಕು ಎನ್ನುವುದು ನನ್ನ ಪಾಲಿಸಿ. ನಾನು ಬಕೆಟ್ ಹಿಡಿದಿದ್ದರೆ 150 ಸಿನಿಮಾ ಮಾಡ್ತಿದ್ದೆ, ಒಂದಷ್ಟು ಜನರಿಗೆ ಸಿನಿಮಾ ತೋರಿಸಿದಾಗ ಎದ್ದುನಿಂತು ಕ್ಲಾಪ್ ಮಾಡಿದರು ಎಂದು ಹೇಳಿದರು.
ಸಂಗೀತ ನಿರ್ದೇಶಕ ಸೂರಜ್ ಜೋಯಿಸ್ ಮಾತನಾಡುತ್ತ ಕಂಗ್ರಾಚುಲೇಶನ್ಸ್ ಬ್ರದರ್ಸ್, ಬಿಚ್ಚುಗತ್ತಿ ಸೇರಿದಂತೆ 15 ಚಿತ್ರಗಳಿಗೆ ಮ್ಯೂಸಿಕ್ ಮಾಡಿದ್ದೇನೆ. ಇದು 16ನೇ ಚಿತ್ರ. 2 ಹಾಡುಗಳ ಜತೆ ಮೆಸೇಜ್, ಎಂಟರ್ ಟೈನ್ ಮೆಂಟ್ ಇರೋ ಚಿತ್ರವಿದು, ಹಿನ್ನೆಲೆ ಸಂಗೀತವನ್ನೂ ಮಾಡಿದ್ದೇನೆ ಎಂದರು.
ನಟ ಚಿದಾನಂದ್ ಮಾತನಾಡಿ ಭಾಗ್ಯಲಕ್ಷಿ÷್ಮಗಾಗಿ ನಾವೆಲ್ಲ ಆಗ ಬರುತ್ತೆ, ಈಗ ಬರುತ್ತೆ ಅಂತ ಕಾಯ್ತಾ ಇರ್ತೇವೆ. ಈ ಚಿತ್ರ 25 ಕೋಟಿಯ ಆಸೆಯನ್ನು ಉಳಿಸುತ್ತೆ ಎಂದರು.
ನಾಯಕಿ ಪೂರ್ವಿಕಾ ಮಾತನಾಡಿ ಹಳ್ಳಿಯ ಸಾಮಾನ್ಯ ಹುಡುಗಿಯಾಗಿ ನಟಿಸಿದ್ದೇನೆ. ಯೂಥ್ ಗೆ ಮೋಟಿವೇಶನ್ ಆಗೋ ಚಿತ್ರವಿದು ಎಂದರು. ಉಳಿದ ಕಲಾವಿದರೆಲ್ಲ ತಂತಮ್ಮ ಪಾತ್ರಗಳ ಕುರಿತಂತೆ ಸಂಕ್ಷಿಪ್ತವಾಗಿ ಹೇಳಿಕೊಂಡರು.
ರತಿಂದ್ ಗೌಡ ಅವರ ಛಾಯಾಗ್ರಹಣ , ಸಂಜೀವರೆಡ್ಡಿ ಅವರ ಸಂಕಲನ, ಎಂ.ಪಿ.ಅರುಣ್‌ಕುಮಾರ್ ಅವರ ಕಥೆ, ಹರೀಶ್ ಅವರ ಸಂಭಾಷಣೆ, ರಾಮ್ ನಾರಾಯಣ್ ಅವರ ಸಾಹಿತ್ಯ, ಥ್ರಿಲ್ಲರ್ ಮಂಜು ಅವರ ಸಾಹಸ, ಬಾಬು ಖಾನ್ ಅವರ ಕಲೆ, ಸಫೈರ್ ರವಿ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು