LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಮಾಜಿ ಸಚಿವ ಅರವಿಂದ ಲಿಂಬಾವಳಿ ಹುಟ್ಟು ಹಬ್ಬ: ಮಹದೇವಪುರ ಕ್ಷೇತ್ರದಲ್ಲಿ ಸೇವಾ ಕಾರ್ಯ

ಕೆ.ಆರ್.ಪುರ: ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ೫೯ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಮಹದೇವಪುರ ಕ್ಷೇತ್ರದ ಗ್ರಾಮಾಂತರ ಮತ್ತು ನಗರ ಮಂಡಲದಲ್ಲಿ ಹಲವು ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಹಲವರು ವಿವಿಧೆಡೆ ಜನೋಪಯುಕ್ತ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡರು.
ಮೊದಲಿಗೆ ಪ್ರತಿ ವರ್ಷದಂತೆ ಈ ವರ್ಷವೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಜ್ಯೋತಿಪುರ ಗ್ರಾಮದ ಜ್ಯೋತಿರ್ಲಿಂಗೇಶ್ವರ ದೇವಸ್ಥಾನದಲ್ಲಿ ಶಾಸಕಿ ಮಂಜುಳಾ ಲಿಂಬಾವಳಿ ಅವರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಹೊಸೂರು ಬಂಡೆ ಗೋ ಆಶ್ರಮದಲ್ಲಿ ಗೋ ಪೂಜೆ ನೆರವೇರಿಸಿ ರಾಸುಗಳಿಗೆ ಮೇವು ಮತ್ತು ಬೆಲ್ಲ ವಿತರಣೆ, ಗ್ರಾಮಾಂತರ ಮಂಡಲದ ಯುವ ಮೋರ್ಚಾ ವತಿಯಿಂದ ದಿವ್ಯಾಂಗರಿಗೆ ಸೈಕಲ್ ವಿತರಣೆ, ರಕ್ತದಾನ ಶಿಬಿರ, ಕ್ರೀಡಾಕೂಟದಲ್ಲಿ ಪಾ ಲ್ಗೊಂಡವರಿಗೆ ಬಹುಮಾನ ವಿತರಣೆ ಮಾಡಿದರು.
ದೊಡ್ಡಗುಬ್ಬಿಯ ಎಐಆರ್ ವೃದ್ಧ ಆಶ್ರಮದಲ್ಲಿ ಹಣ್ಣು ಬಟ್ಟೆ ವಿತರಣೆ, ಕಾಡುಬಿಸನಹಳ್ಳಿಯಲ್ಲಿ ಉಚಿತ ಆರೋಗ್ಯ ಶಿಬಿರ, ಸರ್ಕಾರಿ ಶಾಲೆ ಮಕ್ಕಳಿಗೆ ಸ್ಪೋರ್ಟ್್ಸ ಜಾಕೆಟ್ ವಿತರಣೆ, ಅಶ್ವತ್ಥನಗರದಲ್ಲಿ ೧೫೦೦ ಮಹಿಳೆಯರಿಗೆ ಸೀರೆ ವಿತರಣೆ, ೨೦೦೦ ಜನರಿಗೆ ಅನ್ನದಾನ ಜೊತೆಗೆ ಮಂಜುನಾಥ್ ಮತ್ತು ಸ್ಟೀಫನ್ ರವರು ಸ್ನೇಹಜೀವಿ ಆಶ್ರಮಕ್ಕೆ ಹೊಸ ಅಂಬುಲೇನ್ಸ್ ಕೊಡುಗೆ ನೀಡಿದರು. ಮುನ್ನೇಕೊಳಲು ಮಂಜುನಾಥ್ ಬಡಾವಣೆಯಲ್ಲಿ ಮುಖಂಡ ರಾಜೇಶ್ ರೆಡ್ಡಿ ನೇತೃತ್ವದಲ್ಲಿ ಆಹಾರ ದಿನಸಿ ಕಿಟ್, ಎಇಸಿಎಸ್ ಲೇಔಟ್ ನಲ್ಲಿ ಮುಖಂಡ ಜಯದೇವರಾಜು ನೇತೃತ್ವದಲ್ಲಿ ೩೦೦೦ ಅಧಿಕ ಜನರಿಗೆ ಉಚಿತ ತವಾ ಪ್ಯಾನ್ ಸೆಟ್ ನೀಡಲಾಯಿತು, ಹೂಡಿ ಸ್ಪೋರ್ಟ್್ಸ ಕ್ಲಬ್ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪುರುಷ ಮತ್ತು ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.
ಶಾಸಕಿ ಮಂಜುಳಾ ಲಿಂಬಾವಳಿ ಮಾತನಾಡಿ, ಮಾಜಿ ಶಾಸಕ ಅರವಿಂದ ಲಿಂಬಾವಳಿ ಅವರ ಹುಟ್ಟು ಹಬ್ಬದ ಅಂಗವಾಗಿ ಮಂಡೂರು ಸರ್ಕಾರಿ ಆಸ್ಪತ್ರೆಯ ಸ್ವಚ್ಚತಾ ಕಾರ್ಯಕ್ರಮ, ಕನ್ನಮಂಗಲ ಅಟಲ್ ಬಿಹಾರಿ ವಾಜಪೇಯಿ ಗಾರ್ಡನ್ ನಲ್ಲಿ ಗಿಡ ನೆಡುವ ಕಾರ್ಯಕ್ರಮ, ಕಾಡುಗೋಡಿ ಜನಪದ ಸಾಂಸ್ಕöÈತಿಕ ವೇದಿಕೆಯಿಂದ ಪುರುಷ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ದೊಡ್ಡನೆಕ್ಕುಂದಿಯ ಸರ್ಕಾರಿ ಶಾಲೆ ಬಳಿ ಕಾರ್ತಿಕ್ ನಗರ ಶಕ್ತಿ ಕೇಂದ್ರ ವತಿಯಿಂದ ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಸೀರೆ ಹಾಗೂ ಯಮಲೂರಿನಲ್ಲಿ ಪೌರ ಕಾರ್ಮಿಕರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಬಟ್ಟೆ ಮತ್ತು ಸಿಹಿ ವಿತರಣೆ, ಸೀತಾರಾಮಪಾಳ್ಯದಲ್ಲಿ ಹಸುಗಳಿಗೆ ಒಂದು ಟನ್ ಮೇವು ವಿತರಣೆ ಮಾಡಲಾಗಿದೆ ಎಂದರು.
ಈ ಸಂಧರ್ಭದಲ್ಲಿ ಮಹದೇವಪುರ ನಗರ ಮಂಡಲ ಅಧ್ಯಕ್ಷ ಶ್ರೀಧರ್ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಹೆಚ್.ಎಸ್.ಪಿಳ್ಳಪ್ಪ, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಎಲ್.ರಾಜೇಶ್, ಗ್ರಾಪಂ ಅಧ್ಯಕ್ಷ ಕಣ್ಣೂರು ಅಶೋಕ್, ಮುಖಂಡರಾದ ಗುಟ್ಟಾ ಮಾರಪ್ಪ, ನಲ್ಲೂರಹಳ್ಳಿ ಚಂದ್ರಶೇಖರ್ ರೆಡ್ಡಿ,ಅನಂತರಾಮಯ್ಯ,ಜಯದೇವರಾಜು, ಸಿದ್ದಾಪುರ ಗಿರಿರಾಜ್ ಗೌಡ, ದೊಡ್ಡಕನ್ನಲ್ಲಿ ವಾರ್ಡ್ ಅಧ್ಯಕ್ಷ ಕೈಕೊಂಡ್ರಹಳ್ಳಿ ಪ್ರದೀಪ್ ಕುಮಾರ್, ಗಗನ್ ಸಿದ್ದಾಪುರ ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು