ರಾಯಚೂರು : ರಾಯಚೂರಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಅವಘಡ ಸಂಭವಿಸಿದ್ದು, ಟ್ರಾಕ್ಟರ್ ನಿಂದ ಕೆಳಗೆ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ರಾಯಚೂರು ನಗರದ ಎಂ.ಈರಣ್ಣ ವೃತ್ತದ ಬಳಿ ನಡೆದಿದೆ. ಸುಚಿತ್ ಕುಮಾರ್ (16), ಚರಣಕುಮಾರ್ (14) ಮೃತ ಬಾಲಕರು. ಇನ್ನೂ ವಿಜಯ್ ಕುಮಾರ್ ಎಂಬಾತನಿಗೆ ಗಂಭೀವಾದ ಗಾಯಗಳಾಗಿದ್ದು, ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ತಡರಾತ್ರಿ ಟ್ರಾಕ್ಟರ್ ನಲ್ಲಿ ಹೊರಟಿದ್ದ ಗಣೇಶ ವಿಸರ್ಜನಾ ಮೆರವಣಿಗೆ ಟ್ರಾಕ್ಟರ್ ಇಂಜಿನ್ ಬಳಿ ಚಾಲಕನ ಪಕ್ಕ ಮೂವರು ಕುಳಿತಿದ್ದರು. ರೋಡ್ ಹಂಪ್ಸ್ ದಾಟುವ ವೇಳೆ ಟ್ರಾಕ್ಟರ್ ಚಾಲಕನ ನಿರ್ಲಕ್ಷ ತೋರಿದ್ದಾನೆ. ವೇಗವಾಗಿ ಬಂದು ರೋಡ್ ಹಂಪ್ಸ್ ಎಗರಿಸಿದ ಹಿನ್ನೆಲೆ, ಈ ವೇಳೆ ಕೆಳಗೆ ಬಿದ್ದ ಇಬ್ಬರ ಬಾಲಕರ ಮೇಲೆ ಟ್ರಾಕ್ಟರ್ ಹರಿದಿದೆ. ಇಬ್ಬರ ಮೃತದೇಹಗಳನ್ನು ರಿಮ್ಸ್ ಆಸ್ಪತ್ರಯ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.