ತೀರ್ಥಹಳ್ಳಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸಂಚಾರ ನಡೆಸಿದ್ದಾರೆ. ಇಂದು ಬೆಳಿಗ್ಗೆ ಮಂಗಳೂರಿನ ಮೇರಿಹೀಲ್ಸ್ ಹೆಲಿಪ್ಯಾಡ್‌ನಿಂದ ತೀರ್ಥಹಳ್ಳಿಗೆ ಪ್ರಯಾಣ ಆರಂಭಿಸಿದರು. ತೀರ್ಥಹಳ್ಳಿಯಲ್ಲಿ ಪಶ್ಚಿಮಘಟ್ಟಗಳ ಸ್ಥಿತಿಗತಿ ಸಂಬಂದ ಕಸ್ತೂರಿರಂಗನ್ ವರದಿ ಸಂಬಂಧ ಸಭೆ ನಡೆಸಿ ಸಾರ್ವಜನಿಕರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಆನಂತರ ಅವರು ರಂಭಾಪುರ ಮಠದ ಆವರಣಕ್ಕೆ ಆಗಮಿಸಿ ಅಲ್ಲಿಯೂ ಇದೇ ವಿಷಯದ ಬಗ್ಗೆ ಸಭೆ ನಡೆಸಿದರು. ಇಂದು ಸಂಜೆ ವೇಳೆಗೆ ಮುಖ್ಯಮಂತ್ರಿಯವರು ಬೆಂಗಳೂರಿಗೆ ಹಿಂತಿರುಗಲಿದ್ದಾರೆ.