LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ಸಚಿವರ ರಾತ್ರಿ ರೌಂಡ್ಸ್

ಬೆಂಗಳೂರು ನಗರದ ಮೂಲಸೌಕರ್ಯ ಸ್ಥಿತಿಗತಿ ಪರಿಶೀಲಿಸಿದ ಕೃಷ್ಣಬೈರೇಗೌಡ



ಬೆಂಗಳೂರು:ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಮೂಲಸೌಕರ್ಯಗಳ ನಿರ್ವಹಣೆ, ಸುಗಮ ಸಂಚಾರ ಹಾಗೂ ರಾತ್ರಿ ವೇಳೆ ಸಾರ್ವಜನಿಕರ ಸುರಕ್ಷತೆಯ ವಾಸ್ತವ ಸ್ಥಿತಿಗತಿ ಪರಿಶೀಲಿಸಲು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಶ್ರೀ ಕೆ ಎನ್ ರಮೇಶ್ ರವರು ಪಾಲಿಕೆ ವ್ಯಾಪ್ತಿಯ ಜೆ.ಪಿ. ನಗರ ಮೆಟ್ರೋ ನಿಲ್ದಾಣದಿಂದ ಹೊರ ವರ್ತುಲ ರಸ್ತೆ ಹಾಗೂ ಬನ್ನೇರುಘಟ್ಟ ಮುಖ್ಯರಸ್ತೆಯ ಗೊಟ್ಟಿಗೆರೆ ನೈಸ್ ರಸ್ತೆ ಜಂಕ್ಷನ್‌ವರಗೆ ಅಧಿಕಾರಿಗಳೊಂದಿಗೆ ಖುದ್ದು ಪರಿಶೀಲನೆ ನಡೆಸಿದರು.ಸುಮಾರು ಎರಡೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಈ ಫೀಲ್ಡ್ ಇನ್‌ಸ್ಪೆಕ್ಷನ್‌ನಲ್ಲಿ ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ. ಎನ್. ರಮೇಶ್, ಅಪರ ಆಯುಕ್ತರಾದ ಡಾ. ನವೀನ್ ಕುಮಾರ್ ರಾಜು, ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ, ಕಾರ್ಯಪಾಲಕ ಎಂಜಿನಿಯರ್‌ಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು (ಂಇಇ) ಹಾಗೂ ವಿದ್ಯುತ್ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.ಪರಿಶೀಲನೆಯುದ್ದಕ್ಕೂ ಬೀದಿ ದೀಪಗಳ ವೈಫಲ್ಯ, ಪಾದಚಾರಿ ಮಾರ್ಗಗಳ (ಫುಟ್‌ಪಾತ್) ದುಃಸ್ಥಿತಿ, ತೆರೆದ ಚರಂಡಿಗಳು ಮತ್ತು ಎಂಜಿನಿಯರ್‌ಗಳ ಹೊಣೆಗೇಡಿತನಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸ್ಥಳದಲ್ಲೇ ಕ್ಲಾಸ್ ತೆಗೆದುಕೊಂಡರು. ಜೆ.ಪಿ. ನಗರ ಮೆಟ್ರೋ ನಿಲ್ದಾಣದಿಂದ ಗೊಟ್ಟಿಗೆರೆವರೆಗಿನ ಈ ಪ್ರಮುಖ ಮಾರ್ಗದಲ್ಲಿ ಒಟ್ಟು 1,540 ಬೀದಿ ದೀಪಗಳಿದ್ದು, ಇದರಲ್ಲಿ 1,010 ದೀಪಗಳು ಮಾತ್ರ ಉರಿಯುತ್ತಿವೆ. ಬರೋಬ್ಬರಿ 530 ದೀಪಗಳು, ಅಂದರೆ ಶೇಕಡಾ 34ರಷ್ಟು ಬೀದಿ ದೀಪಗಳು ಸಂಪೂರ್ಣವಾಗಿ ಕೆಟ್ಟುಹೋಗಿವೆ ಎಂದು ಸಚಿವರು ಅಂಕಿಅಂಶಗಳ ಸಮೇತ ಬಹಿರಂಗಪಡಿಸಿದರು.ಕಳೆದ ಸೆ.7 ಮತ್ತು 15 ರಂದು ತಮ್ಮ ಕಚೇರಿಯ ಸಿಬ್ಬಂದಿ ಮೂಲಕ ರಾತ್ರಿ 
ವೇಳೆ ಸಮೀಕ್ಷೆ ನಡೆಸಲಾಗಿದ್ದು, ಸತತ 11 ದಿನಗಳಿಂದ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ. ಜುಲೈ 3 ಮತ್ತು ಆಗಸ್ಟ್ ತಿಂಗಳಲ್ಲಿ ಉನ್ನತ ಮಟ್ಟದ ಸಭೆ
ಗಳನ್ನು ನಡೆಸಿ, ಕಟ್ಟುನಿಟ್ಟಿನ ಸೂಚನೆ ನೀಡಿ, ಈಗಾಗಲೇ ಒಬ್ಬ ಎಂಜಿನಿಯರ್ ಅನ್ನು ಅಮಾನತು ಮಾಡಿದ್ದರೂ ಸಹ ಗ್ರೌಂಡ್ ಲೆವೆಲ್‌ನಲ್ಲಿ ಯಾವುದೇ ಸುಧಾರಣೆ ಕಾಣದಿರುವುದನ್ನು ಸಚಿವರು ಗಂಭೀರವಾಗಿ ಆಕ್ಷೇಪಿಸಿದರು.ಎಲ್‌ಇಡಿ ಲೈಟ್ ಅಳವಡಿಕೆ ಗುತ್ತಿಗೆ ಅವಧಿ ಕಳೆದ ಫೆಬ್ರವರಿಗೆ ಮುಕ್ತಾಯವಾಗಿದ್ದರೂ, ವಿಸ್ತರಿತ ಅವಧಿಯಲ್ಲೂ ಗುತ್ತಿಗೆದಾರರು ಕಾಮಗಾರಿ ಮುಗಿಸಿಲ್ಲ. ರಸ್ತೆಯ ಅಗಲಕ್ಕೆ ತಕ್ಕಂತೆ 120 ವ್ಯಾಟ್ಸ್ ದೀಪಗಳನ್ನು ಅಳವಡಿಸದೆ, 90 ವ್ಯಾಟ್ಸ್ ಹಳೆಯ ದೀಪಗಳನ್ನೇ ಮುಂದುವರಿಸಲಾಗಿದೆ. ಹೈ-ಡೆನ್ಸಿಟಿ ಲೈಟ್‌ಗಳು ಮತ್ತು ಮೀಡಿಯನ್ ದೀಪಗಳು ಉರಿಯುತ್ತಿಲ್ಲ. ಹುಳಿಮಾವು ಬಳಿಯ ಕ್ರೆöÊಸ್ಟ್ ಯೂನಿವರ್ಸಿಟಿ ಮುಂಭಾಗ ಹಾಗೂ ಮೆಗಾ ಸಿಟಿ ಮಾಲ್ ಬಳಿ ರಸ್ತೆಯುದ್ದಕ್ಕೂ ಸಂಪೂರ್ಣ ಕತ್ತಲು ಆವರಿಸಿರುವುದನ್ನು ಅಧಿಕಾರಿಗಳಿಗೆ ತೋರಿಸಿದ ಸಚಿವರು, "ರಾತ್ರಿ ವೇಳೆ ಎಲೆಕ್ಟಿçಕಲ್ ಎಂಜಿನಿಯರ್‌ಗಳು ರೌಂಡ್ಸ್ ಮಾಡುತ್ತಿದ್ದಾರೋ ಅಥವಾ ಕಚೇರಿಯಲ್ಲಿ ಸುಳ್ಳು ರಿಪೋರ್ಟ್ ಸಿದ್ಧಪಡಿಸುತ್ತಿದ್ದಾರೋ? ಕೆಲಸ ಮಾಡದ ಗುತ್ತಿಗೆದಾರರ ದುಪ್ಪಟ್ಟು ದಂಡ ವಿಧಿಸಿ ಬ್ಲ್ಯಾ ಕ್‌ಲಿಸ್ಟ್ಗೆ ಸೇರಿಸಲು ಹಿಂಜರಿಯಬೇಡಿ" ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಾದಚಾರಿ ಮಾರ್ಗಗಳ ಶೋಚನೀಯ ಸ್ಥಿತಿಯನ್ನು ಕಂಡು ಕೆಂಡಾಮAಡಲರಾದ ಸಚಿವರು, ವೇಗಾ ಸಿಟಿ ಮಾಲ್ ಜಂಕ್ಷನ್, ನಾಗಾರ್ಜುನ ಹೋಟೆಲ್ ಎದುರು ಮತ್ತು ಎಂಪೈರ್ ಹೋಟೆಲ್ ಬಳಿ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ಫುಟ್‌ಪಾತ್ ಮೇಲೆ ಕಾಂಕ್ರೀಟ್ ಸ್ಲಾ÷್ಯಬ್‌ಗಳನ್ನು ಎಲ್ಲೆಂದರಲ್ಲಿ ಅಸ್ತವ್ಯಸ್ತ ವಾಗಿ ಗುಡ್ಡೆ ಹಾಕಲಾಗಿದೆ. ಮತ್ತೊಂದೆಡೆ ಚರಂಡಿಗಳು ತೆರೆದುಕೊಂಡಿದ್ದು, ಮಳೆ ಬಂದರೆ ಪಾದಚಾರಿಗಳು ಅಥವಾ ಬೈಕ್ ಸವಾರರು ಬಿದ್ದು ಪ್ರಾಣಾಪಾಯ
ವಾಗುವ ಸ್ಥಿತಿಯಿದೆ. "ಸ್ಲಾ÷್ಯಬ್‌ಗಳು ಪಕ್ಕದಲ್ಲೇ ಬಿದ್ದಿವೆ, ಅದನ್ನು ತಂದು ಚರಂಡಿಗೆ ಮುಚ್ಚಲು ಎಂಜಿನಿಯರ್‌ಗಳಿಗೆ ಸಾಮಾನ್ಯ ಜ್ಞಾನ ಬೇಡವೇ? 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST