ಜಪಾನ್: ಜಪಾನ್‌ನಲ್ಲಿ ನಡೆಯುತ್ತಿರುವ 2026 ಏಷ್ಯನ್ ಗೇಮ್ಸ್ನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ಓಪನರ್ ಶಫಾಲಿ ವರ್ಮಾ ಹೊಸ ದಾಖಲೆ ಬರೆದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅವರು ಕೇವಲ 49 ಎಸೆತಗಳಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀ ಯ ಟಿ20 ಶತಕ ಬಾರಿಸಿದರು. ಮಹಿಳಾ ಏಷ್ಯನ್ ಗೇಮ್ಸ್ ಕ್ರಿಕೆಟ್ ಇತಿಹಾಸದಲ್ಲಿ ಶತಕ ಗಳಿಸಿದ ಮೊದಲ ಆಟಗಾರ್ತಿ ಇವರು. ಶತಕ ಪೂರೈಸಿದ ನಂತರ ಅವರು ಹೆಲ್ಮೆಟ್ ಸಂಭ್ರಮಾಚರಣೆ ಮಾಡಿದರು. ಈ ವೇಳೆ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಶಫಾಲಿ ವರ್ಮಾ 2026ರ ಏಷ್ಯನ್ ಗೇಮ್ಸ್ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಹೃದಯ ಗೆದ್ದರು. ಬಾಂಗ್ಲಾದೇಶ ವಿರುದ್ಧ ಸೆಮಿಫೈನಲ್‌ನಲ್ಲಿ ಅವರು ಶುರುವಿನಿಂದಲೇ ದೊಡ್ಡ ಹೊಡೆತ ಹೊಡೆದು, ಕೊನೆಯ ಬಾಲ್‌ನಲ್ಲಿ ಶತಕ ಗಳಿಸಿದರು. ಈ ಇನ್ನಿಂಗ್ಸ್ನಲ್ಲಿ ಅವರು ಹೆಚ್ಚು ಸಿಕ್ಸ್ಗಳನ್ನು ಹೊಡೆದು ದಾಖಲೆ ಮಾಡಿದರು. ಅವರ ಉತ್ತಮ ಆಟದಿಂದ ಭಾರತ ತಂಡ 195 ರನ್ ಕಲೆ ಹಾಕಿತು. ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಜೊತೆಯಾಗಿ 72 ರನ್ ಕಲೆ ಹಾಕಿ ತಂಡಕ್ಕೆ ಒಳ್ಳೆಯ ಆರಂಭ ಕೊಟ್ಟರು. ಸ್ಮೃತಿ 37 ರನ್‌ಗೆ ಔಟದರೆ, ಶಫಾಲಿ ಆಡುತ್ತಲೇ ಇದ್ದರು. ಹರ್ಮನ್‌ಪ್ರೀತ್ ಕೌರ್ ಅವರಿಗೆ ಒಳ್ಳೆಯ ಬೆಂಬಲ ನೀಡಿದರು. ಕೊನೆಯ ಬಾಲ್‌ನಲ್ಲಿ ಒಂದು ರನ್ ತೆಗೆದುಕೊಂಡು ಶಫಾಲಿ ಶತಕ ಪೂರ್ಣಗೊಳಿಸಿದರು. ಅವರು ಕೇವಲ 49 ಬಾಲ್‌ಗಳಲ್ಲಿ 100 ರನ್ ಗಳಿಸಿದರು. 204.08 ಸ್ಟ್ರೈ ಕ್ ರೇಟ್‌ನಲ್ಲಿ ಆಡಿ 3 ಫೋರ್ ಮತ್ತು 9 ಸಿಕ್ಸ್ ಹೊಡೆದರು. ಇದರಿಂದ ಭಾರತ 195 ರನ್ ಗಳಿಸಿತು. ಇದು ಅವರ ಮೊದಲ ಟಿ20 ಶತಕವಾಗಿದೆ. ದಾಖಲೆಯ ಪಟ್ಟಿಗೆ ಶಫಾಲಿ: ಶಫಾಲಿ ಶರ್ಮಾ ಸಿಡಿಸಿ ಶತಕವು ಭಾರತದ ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಹೊಡೆದವರ ಪಟ್ಟಿಯನ್ನು ಬದಲಾಯಿಸಿತು. ಇದಕ್ಕೆ ಮುಂಚೆ ಸ್ಮöÈತಿ ಮಂಧಾನ ಹಾಂಗ್ ಕಾಂಗ್ ವಿರುದ್ಧ 124 ರನ್ ಮತ್ತು ಇಂಗ್ಲೆಂಡ್ ವಿರುದ್ಧ 112 ರನ್ ಹೊಡೆದಿದ್ದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ನ್ಯೂಜಿಲೆಂಡ್ ವಿರುದ್ಧ 103 ರನ್ ಗಳಿಸಿದ್ದರು. ಮಿಥಾಲಿ ರಾಜ್ ಮಲೇಷ್ಯಾ ವಿರುದ್ಧ 97 ರನ್ ಹೊಡೆದಿದ್ದರು. ಶಫಾಲಿ ವರ್ಮಾ ಈ ಇನ್ನಿಂಗ್ಸ್ನಲ್ಲಿ 9 ಸಿಕ್ಸ್ ಹೊಡೆದು ಇತಿಹಾಸದಲ್ಲಿ ತಮ್ಮ ಹೆಸರು ಬರೆಸಿಕೊಂಡಿದ್ದಾರೆ. ಟಿ20 ಅಂತಾರಾಷ್ಟ್ರೀ ಯ ಪಂದ್ಯಗಳಲ್ಲಿ 100 ಸಿಕ್ಸ್ ಹೊಡೆದ ಎರಡನೇ ಭಾರತೀಯ ಮಹಿಳಾ ಆಟಗಾರ್ತಿ ಆಗಿದ್ದಾರೆ. ಸ್ಮöÈತಿ ಮಂಧಾನ ಅವರನ್ನು ಮೀರಿಸಿ ಭಾರತದ ಪರ ಟಿ20 ಗಳಲ್ಲಿ ಅತಿ ಹೆಚ್ಚು ಸಿಕ್ಸ್ ಹೊಡೆದ ಆಟಗಾರ್ತಿ ಆಗಿದ್ದಾರೆ.