LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಬ್ಯಾನ್ ಹೇರಿಕೆಗೆ ಸೆಡ್ಡು ಹೊಡೆದ ರಣವೀರ್ ಸಿಂಗ್

ಕಳೆದ ಒಂದು ತಿಂಗಳ ಹಿಂದೆ ನಟ ಫರ್ಹಾನ್ ಅಖ್ತರ್ ದೂರಿನ ಕಾರಣಕ್ಕೆ ನಟ ರಣವೀರ್ ಸಿಂಗ್ ವಿರುದ್ಧ ಎಫ್‌ಡಬ್ಲುಐಸಿಇ ಅಸಹಕಾರ ಧೋರಣೆ ತೋರಿತ್ತು. ಈ ಮೂಲಕ ಬಾಲಿವುಡ್ ಫಿಲ್ಮ್ ಫೆಡರೇಷನ್ ರಣವೀರ್ ಸಿಂಗ್‌ಗೆ ಮುಂದಿನ ಪ್ರಾಜೆಕ್ಟ್ಗಳಲ್ಲಿ ಸಹಕಾರ ಕೊಡದಿರುವ ಉದ್ದೇಶ ಹೊಂದಿತ್ತು. ಈ ವಿಚಾರಕ್ಕೆ ಪ್ರತಿಕ್ರಿಯೆ ಕೊಡದೇ ಮೌನವಾಗೇ ಉಳಿದ ರಣವೀರ್ ಸಿಂಗ್ ಇದೀಗ ಎಫ್‌ಡಬ್ಲುಐಸಿಇಗೆ ಸೆಡ್ಡು ಹೊಡೆಯಲು ಸಿದ್ಧರಾಗಿದ್ದಾರೆ ಅನ್ನೋ ಮಾಹಿತಿ ಬಂದಿದೆ.ಶೀಘ್ರದಲ್ಲೇ ರಣವೀರ್ ಸಿಂಗ್ ಹೊಸ ಚಿತ್ರ `ಪ್ರಳಯ್' ಚಿತ್ರೀಕರಣ ಪ್ರಾರಂಭವಾಗುವ ಸುಳಿವು ಸಿಕ್ಕಿದೆ. ರಣವೀರ್ ಪತ್ನಿ ದೀಪಿಕಾ ಇದೀಗ ಗರ್ಭಿಣಿ ಅನ್ನೋ ಕಾರಣಕ್ಕೆ ಸಿನಿಮಾದ ಚಿತ್ರೀಕರಣಕ್ಕೆ ರಣವೀರ್ ತೆರಳುತ್ತಿಲ್ಲ. ಹೀಗಾಗಿ ಸತತ ತಯಾರಿ ನಡೆಸುತ್ತಿರುವ ರಣವೀರ್ ಇದೇ ಬರುವ ಸಪ್ಟೆಂಬರ್‌ನಲ್ಲಿ ಪ್ರಳಯ್ ಚಿತ್ರದ ಪ್ರಥಮ ಶೆಡ್ಯೂಲ್ ಚಿತ್ರೀಕರಣಕ್ಕಾಗಿ ಆಸ್ಟ್ರೇಲಿಯಾಗೆ ತೆರಳಲಿದ್ದಾರೆ. ದುರಂಧರ್ ಸರಣಿ ಚಿತ್ರಗಳ ಬ್ಲಾಕ್‌ಬಸ್ಟರ್ ಹಿಟ್ ಬಳಿಕ ರಣವೀರ್ ನಟಿಸುತ್ತಿರುವ ಚಿತ್ರ ಇದಾಗಿದ್ದು ಭಾರೀ ನಿರೀಕ್ಷೆ ಮೂಡಿಸಿದೆ. ಜೈ ಮೆಹ್ತಾನಿರ್ದೇಶನದ ಚಿತ್ರಕ್ಕಾಗಿ ರಣವೀರ್ ಈಗಾಗ್ಲೇ ಸಿದ್ಧತೆ ನಡೆಸಿದ್ದು, ಈ ಮೂಲಕ ಅವರ ಮೇಲೆ ಹೇರಲಾದ ಅಸಹಕಾರ ಯಾವುದೇ ಪರಿಣಾಮ ಬೀರಿಲ್ಲ ಅನ್ನೋದನ್ನ ಶೀಘ್ರದಲ್ಲೇ ತೋರಿಸಲಿದ್ದಾರೆ ರಣವೀರ್ ಸಿಂಗ್.ಅಂದಹಾಗೆ ದೀಪಿಕಾ ಪ್ರಸವದ ಬಳಿಕ ರಣವೀರ್ ಸಿಂಗ್ ವಿದೇಶಕ್ಕೆ ಹಾರುವ ಸಂಭವ ಇದೆ. ಇದೀಗ ಎರಡನೇ ಮಗುವಿಗೆ ಗರ್ಭಿಣಿಯಾಗಿರುವ ದೀಪಿಕಾ ಜೊತೆ ಸಮಯ ಕಳೆಯುತ್ತಿರುವ ರಣವೀರ್ ಮಗು ಜನಿಸಿದ ಬಳಿಕ ಶೂಟಿಂಗ್‌ಗೆ ತೆರಳುವ ಸಾಧ್ಯತೆ ಇದೆ. ಹೀಗಾಗಿ ಎಫ್‌ಡಬ್ಲುಐಸಿಇ ಬ್ಯಾನ್ ಬಿಸಿ ರಣವೀರ್‌ಗೆ ತಟ್ಟಿಲ್ಲ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು