LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಸರ್ಕಾರದ ಭಾಷಣದಲ್ಲಿ ರಾಜಕಾರಣವಿರಬಾರದು

ಬೆಂಗಳೂರು: ರಾಜ್ಯಪಾಲರ ಭಾಷಣ ಸರ್ಕಾರದ ಸಾಧನೆ ಬಗ್ಗೆ ಇರಬೇಕು. ಸರ್ಕಾರದ ಭಾಷಣದಲ್ಲಿ ರಾಜಕೀಯ ಇರಬಾರದು. ಭಾಷಣದಲ್ಲಿ ರಾಜಕೀಯ ಇದ್ದರೆ ರಾಜ್ಯಪಾಲರು ತಮ್ಮ ವಿವೇಚನಾಧಿಕಾರ ಬಳಸಬಹುದು. ನಮ್ಮ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ಬಿಕ್ಕಟ್ಟು ಬಂದಿದೆ. ರಾಜ್ಯಪಾಲರು ಯಾವ ಅಂಶಕ್ಕೆ ಆಕ್ಷೇಪ ಎತ್ತಿದ್ದಾರೋ ಗೊತ್ತಿಲ್ಲ. ಆದರೆ ರಾಜ್ಯಪಾಲರನ್ನ ಮನವೊಲಿಕೆ ಮಾಡೋ ಜವಾಬ್ದಾರಿ ಸರ್ಕಾರದ್ದಾಗಿದೆ ಎಂದು ಶಾಸಕ ಸುರೇಶ್ ಕುಮಾರ್ ತಿಳಿಸಿದರು.
ಮಾಧ್ಯಮದ ಜೊತೆಗೆ ಮಾತನಾಡಿ ಅವರು, ಸಂವಿಧಾನದ ೧೭೬ ನೇ ವಿಧಿ ಬಗ್ಗೆ ಕಾಂಗ್ರೆಸ್ ನವುö್ರ ಹೇಳುತ್ತಿದ್ದಾರೆ, ಇದರ ಪ್ರಕಾರ ರಾಜ್ಯಪಾಲರು ಭಾಷಣ ಓದಲೇಬೇಕಾಗುತ್ತೆ ಎನ್ನುತಿದ್ದಾರೆ. ಸಂವಿಧಾನದ ಈ ವಿಧಿಯು ಬಂದಾಗ ಈ ರೀತಿಯ ಪರಿಸ್ಥಿತಿ ಬರುತ್ತೆ ಅಂತ ಸಂವಿಧಾನ ಸಭೆಯೂ ಯೋಚಿಸಿರಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯಪಾಲರ ಬಳಿ ನನ್ನ ಸರ್ಕಾರ ಎಂದು ಭಾಷಣದಲ್ಲಿ ಹೇಳಿಸಲಾಗುತ್ತೆ, ನನ್ನ ಸರ್ಕಾರ ಎಂದು ಬಂದಾಗ ಸರ್ಕಾರದ ಸಾಧನೆಗಳು, ಫಲಶೃತಿ, ಮುಂದಿನ ಯೋಜನೆಗಳು ಬರುತ್ತವೆ. ಆದರೆ ನನ್ನ ಸರ್ಕಾರ ಅಂತ ಹೇಳಿಸಿ ಅದರಲ್ಲಿ ರಾಜಕೀಯದ ವಿಚಾರಗಳು ನುಸುಳಿದರೆ, ಆಡಳಿತ ಪಕ್ಷದ ಭಾವನೆಗಳು ಭಾಷಣದಲ್ಲಿ ಬಂದರೆ ಬಿಕ್ಕಟ್ಟು ಉಂಟಾಗಲಿದೆ ಎಂದರು.
ರಾಜ್ಯಪಾಲರು ಆಕ್ಷೇಪ ಎತ್ತಿದ ಅಂಶಗಳನ್ನ ತೆಗೆದು ಸರ್ಕಾರ ಭಾಷಣ ಮಾಡಿಸಲಿ. ರಾಜ್ಯಪಾಲರು ಅಧಿವೇಶನಕ್ಕೆ ಬಂದು ಭಾಷಣ ಓದಬೇಕೋ ಬೇಡವೋ ಅಂತ ನಿರ್ಧಾರ ಅವರ ವಿವೇಚನೆಗೆ ಬಿಟ್ಟಿದ್ದು. ರಾಜ್ಯಪಾಲರಿಂದ ಸರ್ಕಾರ ಏನು ಹೇಳಿಸಲು ಹೊರಟಿದೆ ಅನ್ನೋದು ಮುಖ್ಯ. ಸರ್ಕಾರದ ಸಾಧನೆಗಳಿದ್ರೆ ಅದನ್ನು ರಾಜ್ಯಪಾಲರು ಖಂಡಿತ ಓದಲೇಬೇಕು. ಆದ್ರೆ ಆಡಳಿತ ಪಕ್ಷದ ಭಾವನೆ ಭಾಷಣದಲ್ಲಿ ಬಂದಾಗ ಈ ಬಿಕ್ಕಟ್ಟು ಬರುತ್ತೆ, ಆಗ ರಾಜ್ಯಪಾಲರಿಗೆ ಭಾಷಣ ಓದಲು ಆಗಲ್ಲ. ರಾಜ್ಯಪಾಲರಿಗೆ ಏನು ಓದಬೇಕು ಏನು ಓದಬಾರದು ಅಂತ ವಿವೇಚನೆ ಅಧಿಕಾರ ಇದೆ. ಸರ್ಕಾರಕ್ಕೂ ಏನು ಹೇಳಿಸಬೇಕು ಅನ್ನೋ ವಿವೇಕ ಇರಬೇಕು. ಇದು ವಿವೇಚನೆ ಮತ್ತು ವಿವೇಕದ ತಾಕಲಾಟ ಎಂದು ಟೀಕಿಸಿದರು.
ಸರ್ಕಾರದ ಭಾಷಣದ ೧೧ ಪ್ಯಾರಾ ನಾವು ಬರೆಸಿಲ್ಲ. ನಾವು ರಾಜ್ಯಪಾಲರಿಗೆ ಭಾಷಣ ವಿರೋಧಿಸಿ ಅಂತ ಹೇಳಿಲ್ಲ. ನಾವೂ ರಾಜ್ಯಪಾಲರ ಭಾಷಣದಲ್ಲಿ ಏನಿರುತ್ತೆ ಅಂತ ನೋಡ್ತಿದೀವಿ. ವಿಪಕ್ಷ ಆಗಿ ರಾಜ್ಯಪಾಲರ ಭಾಷಣ ಓದುವಿಕೆಯಲ್ಲಿ ನಮ್ಮ ಪಾತ್ರ ಇರಲ್ಲ. ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ಸರ್ಕಾರ ರಾಜಕೀಯ ಮಾಡ್ತಿದೆ. ಇವರಿಗೆ ತೊಂದರೆ ಆಗುವ ಅಂಶ ಹೇಳ್ತಿದ್ದಾರೆ. ರಾಜ್ಯಪಾಲರ ಭಾಷಣದಲ್ಲಿ ವಿಬಿಜಿರಾಮ್‌ಜಿ ವಿರುದ್ಧ ಹೇಳಿಸಿದರೆ ಅದು ಪಕ್ಕಾ ರಾಜಕೀಯದ ನಡೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು