ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕ್ ಮೂಲದ ಉಗ್ರರು ನಡೆಸಿದ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ವಿಶೇಷ ಕಾರ್ಯಾಚರಣೆಗೆ 1 ವರ್ಷ ಪೂರ್ಣಗೊಂಡಿದೆ. ಈ ಹೊತ್ತಿನಲ್ಲೇ ಪಾಕ್ ವಿರುದ್ಧ ತೀರಿಸಿಕೊಂಡ ಪ್ರತೀಕಾರ ಹಾಗೂ ಭಾರತೀಯ ಮೂರು ಸೇನೆಗಳ ಪರಾಕ್ರಮವನ್ನು ನೆನಪಿಸುವ ವಿಶೇಷ ವಿಡಿಯೋವೊಂದನ್ನು ಭಾರತೀಯ ವಾಯುಪಡೆ ಹಂಚಿಕೊAಡಿದೆ.
ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊAಡಿರುವ ಭಾರತೀಯ ವಾಯುಪಡೆ, ಆಪರೇಷನ್ ಸಿಂಧೂರ ನ್ಯಾಯ ದೊರಕಿಸಿದೆ. ಈ ಕಾರ್ಯ ನಿಖರವಾಗಿದ್ದು, ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಬರೆದುಕೊಂಡಿದೆ. ಅಲ್ಲದೇ, ಭಾರತ ಯಾವುದನ್ನೂ ಮರೆಯುವುದಿಲ್ಲ-ಭಾರತ ಯಾವುದನ್ನೂ ಕ್ಷಮಿಸುವುದಿಲ್ಲ, ಆಪರೇಷನ್ ಸಿಂಧೂರ ಮುಂದುವರಿಯುತ್ತದೆ ಎಂದು ವಾಯುಪಡೆ ಎಚ್ಚರಿಸಿದೆ.
ಅಲ್ಲದೇ ವಾಯುಪಡೆ ಹಂಚಿಕೊAಡ ಇದೇ ವಿಡಿಯೋನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಉಗ್ರರ ವಿರುದ್ಧ ಗುಡುಗಿದ್ದಾರೆ. ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನ ಗುರುತಿಸಿ, ಪತ್ತೆಮಾಡಿ ಶಿಕ್ಷಿಸುತ್ತದೆ ಎಂದು ಹೇಳಿದ್ದಾರೆ.
ದಶಕಗಳಿಂದ ಭಾರತದ ಮಣ್ಣಿನಲ್ಲಿ ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನಾ ಕೃತ್ಯಗಳಿಗೆ ಕೇವಲ ಮೌಖಿಕ ಎಚ್ಚರಿಕೆ ನೀಡುವ ಬದಲು, ನೇರವಾಗಿ ತಿರುಗೇಟು ಕೊಡುವ ಕೆಲಸವನ್ನು ಭಾರತ ಈ ಕಾರ್ಯಾಚರಣೆ ಮೂಲಕ ಸಾಬೀತು ಮಾಡಿತ್ತು. ಹಾಗಾಗಿ ಪಾಕಿಸ್ತಾನವು ಭಯೋತ್ಪಾದಕ ಸಂಘಟನೆಗಳನ್ನು ತನ್ನ ಪರೋಕ್ಷ ಯುದ್ಧದ ದಾಳಗಳಾಗಿ ಬಳಸಿಕೊಳ್ಳುತ್ತಿರುವುದನ್ನ ಎದುರಿಸುವಲ್ಲಿ, `ಆಪರೇಷನ್ ಸಿಂಧೂರ’ ಭಾರತದ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ.
2025ರ ಮೇ 7ರಂದು ಆರಂಭವಾದ ಈ ಕಾರ್ಯಾಚರಣೆಯು, ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ನಡೆದ ತೀವ್ರಗತಿಯ ಮತ್ತು ನಿಖರ ಅಭಿಯಾನವಾಗಿತ್ತು.
ಆಪರೇಷನ್ ಸಿಂಧೂರಗೆ ಒಂದು ವರ್ಷ



