ಅರಸೀಕೆರೆ: ಮೋದಿಯವರನ್ನು ಮತ್ತೆ ವಿಶ್ವ ನಾಯಕ ಮಾಡುವುದೇ ನಮ್ಮ ಮಂತ್ರ ಎಂದು ಅರಸೀಕೆರೆಯಲ್ಲಿ ರೇವಣ್ಣ ಪತ್ರಿಕಾಗೋಷ್ಠಿ ಜೆಡಿಎಸ್ ಮುಖಂಡ ಹೊಸೂರು ಗಂಗಾಧರವರ ಮನೆಯಲ್ಲಿ ಮಾತನಾಡಿದವರು.ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಾವು ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಈ ಬಾರಿಯ ಸಹ ಮೋದಿ ಅವರೇ ಪ್ರಧಾನಿಯಾಗಲು ಯಾವುದೇ ರೀತಿಯ ಅನುಮಾನವಿಲ್ಲ ಎಂದು ಹೇಳಿದರು.
ಒಂಬತ್ತು ತಿಂಗಳು ಕಳೆದರೂ ಸಹ ಕ್ಷೇತ್ರದ ಸ್ಥಳೀಯ ಶಾಸಕರು ಇದ್ದರೂ ಕೂಡ ಈ ಜಿಲ್ಲೆಗೆ ಇವರ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದವರು ಕುಮಾರಣ್ಣನವರ ಕಾಲದಲ್ಲಿ ದೇವೇಗೌಡರು ಈ ಜಿಲ್ಲೆಗೆ ಸಾಕಷ್ಟು ಕೊಡುಗೆಗಳನ್ನು ಕೊಡಿಸಿರುತ್ತಾರೆ ಉದಾಹರಣೆಗೆ ಎತ್ತಿನಹೊಳೆ ಯೋಜನೆ ನಮ್ಮ ಕಾಲದಲ್ಲಿ ಆದಂತಹದ್ದು ಹಾಗಾಗಿ ಇಲ್ಲಿಯ ಶಾಸಕರ ಕೊಡುಗೆ ಈ ಸರ್ಕಾರದ ಅವಧಿಯಲ್ಲಿ ಶೂನ್ಯ ಎಂದು ತಿಳಿಸಿದರು.
ಮಧ್ಯದಲ್ಲಿ ಆಗಮಿಸಿದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನಾವು ಬಹಳ ಪ್ರೀತಿ ವಿಶ್ವಾಸದಿಂದ ಎಲ್ಲರನ್ನೂ ತೆಗೆದುಕೊಂಡು ನಮ್ಮ ಗೆಲುವಿಗೆ ಏನೆಲ್ಲಾ ಕೆಲಸ ಕಾರ್ಯಗಳನ್ನು ಮಾಡಬೇಕು ಅದನ್ನು ನಾವು ಈಗಾಗಲೇ ಪ್ರಾರಂಭಿಸಿದ್ದೇವೆ ಈ ಬಾರಿಯೂ ಸಹ ಪ್ರಧಾನಿಯವರನ್ನು ವಿಶ್ವ ನಾಯಕನನ್ನಾಗಿ ನೋಡುವುದೇ ನಮ್ಮ ಮೂಲ ಉದ್ದೇಶ ಎಂದರು ಎನ್ ಅರ್ ಸಂತೋಷ್ ಹೊಸೂರು ಗಂಗಾಧರ್ ಸೇರಿದಂತೆ ಹಲವಾರು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.