ಬೆಂಗಳೂರು; ಗೃಹಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಾ. ಜಿ. ಪರಮೇಶ್ವರ್ ಅವರಿಂದು ಪಕ್ಷದ ರಾಜ್ಯಾಧ್ಯಕ್ಷ ಮತ್ತು ಉಪಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲಿ ಭೇಟಿಯಾದ ಪರಮೇಶ್ವರ್, ಈ ತಿಂಗಳ 19ರಂದು ತುಮಕೂರಿನಲ್ಲಿ ಏರ್ಪಡಿಸಿರುವ ಸರ್ಕಾರದ ಮೂರನೇ ವರ್ಷದ ಸಾಧನ ಸಮಾವೇಶನದ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ್ದಾರೆ. ಸರ್ಕಾರದ ಮೂರು ವರ್ಷದ ಸಾಧನ ಸಮಾವೇಶ ಈ ತಿಂಗಳ 20ರಂದು ನಡೆಯಬೇಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ಆ ಕಾರ್ಯಕ್ರಮವನ್ನು ಒಂದು ದಿನದ ಮುಂಚಿತವಾಗಿ ನಡೆಸುತ್ತಿರುವುದರ ಬಗ್ಗೆಯೂ ಮಾಹಿತಿ ನೀಡಿದ್ದಾರ ಎಂದು ತಿಳಿದು ಬಂದಿದೆ.
ಡಿಕೆಶಿ ಭೇಟಿ ಮಾಡಿದ ಪರಮೇಶ್ವರ್



