ಬೆಂಗಳೂರು: ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಬಯೋಕಾನ್ ಸಂಸ್ಥೆಯವರು ಸುಮಾರು 65 ಕೋಟಿ ರೂಗಳನ್ನು ಮೆಟ್ರೋ ಸ್ಟೇಷನ್ ಬಿ ಎಂ ಆರ್ ಸಿ ಎಲ್ ಗೆ ನಿರ್ಮಾಣವಾಗಲು ದೇಣಿಗೆ ನೀಡಿರುತ್ತಾರೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಹೆಬ್ಬಗೋಡಿ ಊರಿನ ಸ್ಥಳೀಯರು, ಮುಖಂಡರುಗಳು ಹಾಗೂ ಸಂಘ ಸಂಸ್ಥೆಗಳು ಬಯೋಕಾನ್ ಸಂಸ್ಥೆಯವರು ಬಯೋಕಾನ್ ಹೆಬ್ಬಗೋಡಿ ಮೆಟ್ರೋ ಸ್ಟೇಷನ್ ಎಂಬ ಹೆಸರಿನಲ್ಲಿ ಮೆಟ್ರೋ ಸ್ಟೇಷನ್ ಆಗಬೇಕೆಂದು ಕೋರಿದ್ದರು.
ಇದನ್ನು ವಿರೋಧಿಸಿರುವ ಸ್ಥಳೀಯರು ಮೊದಲು ಹೆಬ್ಬಗೋಡಿ ಬಂದಿದ್ದು ನಂತರ ಬಯೋಕಾನ್ ಸಂಸ್ಥೆ ಬಂದಿದ್ದು,
ಹಾಗಾಗಿ ಹೆಬ್ಬಗೋಡಿ ಬಯೋಕಾನ್ ಮೆಟ್ರೋ ಸ್ಟೇಷನ್ ಇಡಬೇಕು ಎಂದು ಒತ್ತಾಯಿಸಿ ಹೆಬ್ಬಗೋಡಿ ಪೊಲೀಸ್ ಠಾಣೆ ಮುಂದೆ ಸುಮಾರು 100 ಜನ ಧರಣಿ ನಡೆಸುವ ಮೂಲಕ ಮನವಿ ಪತ್ರವನ್ನು ನೀಡಲು ಮುಂದಾಗಿರುತ್ತಾರೆ.