ಬೆಂಗಳೂರು: ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಹಾಗೂ ಸಹಚರರು ಆರೋಪಿಗಳು ಎಂದು ಕೇಳಿಬಂದಿರುವ ಬೆನ್ನಲ್ಲೇ ನಟ ಜಗ್ಗೇಶ್ ಈ ಸಂಬಂಧ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.`ಸರ್ವ ಆತ್ಮಾನೇನ ಬ್ರಹ್ಮ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಇದರ ಅರ್ಥವನ್ನು ಅವರು ವಿವರಿಸಿದ್ದಾರೆ. `ಸರ್ವ ಜೀವಿಯಲ್ಲಿ ದೇವರಿದ್ದಾನೆ. ಯಾರನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ’ ಎಂದು ಜಗ್ಗೇಶ್ ಹೇಳಿದ್ದಾರೆ. ಈ ಮೂಲಕ ಅವರು ದರ್ಶನ್ ಬಗ್ಗೆಯೇ ಟ್ವೀಟ್ ಮಾಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
`ಕರ್ಮ ಜೀವನವನ್ನು ಹಿಂಬಾಲಿಸುತ್ತದೆ. ಅವನ ಪಾಪಕರ್ಮ ಅವನ ಸುಡುತ್ತದೆ. ಕಲಿಯುಗದಲ್ಲಿ ದೇವರು ಕಲ್ಲಲ್ಲ. ಎಲ್ಲಾ ಕರ್ಮಕ್ಕೂ ತತ್ತಕ್ಷಣ ಫಲಿತಾಂಶ ಉಂಟು. ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ’ ಎಂದು ಅವರು ಬರೆದಿದ್ದಾರೆ.`ಮದಕ್ಕೆ ಕಾರುಣ್ಯದ ಅರಿವಿಲ್ಲಾ’ ಎನ್ನುವ ವಾಕ್ಯವನ್ನೂ ಜಗ್ಗೇಶ್ ಅವರು ಬಳಸಿದ್ದಾರೆ. ಅಂದರೆ ಮದ ಇದ್ದವನಿಗೆ ಕರುಣೆ ಎಂಬುದೆಲ್ಲ ಇರುವುದಿಲ್ಲ ಎಂಬುದು ಈ ವಾಕ್ಯದ ಅರ್ಥ. ಈ ಟ್ವೀಟ್ ಸಖತ್ ವೈರಲ್ ಆಗುತ್ತಿದೆ.