ದಾವಣಗೆರೆ: ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಹೊಸ ದಿಕ್ಸೂಚಿ ನೀಡುತ್ತಿದೆ. 2047ರ ವೇಳೆಗೆ ನಮ್ಮ ದೇಶವನ್ನು ‘ವಿಕಸಿತ ಭಾರತ’ವನ್ನಾಗಿ ಮಾಡಲು ಯುವ ಇಂಜಿನಿಯರ್ಗಳ ಕೊಡುಗೆ ಅಪಾರವಾಗಿದ್ದು, ದೇಶದ ಪ್ರಗತಿಗಾಗಿ ಯುವಶಕ್ತಿ ಮಾದಕ ದ್ರವ್ಯಗಳಂತಹ ವ್ಯಸನಗಳಿಂದ ದೂರವಿದ್ದು ದೇಶದ ಅಭಿವೃದ್ದಿಗೆ ರಾಯಭಾರಿಗಳಾಗಬೇಕೆಂದು ಯುವ ಇಂಜಿನಿಯರ್ಗಳ ಕುರಿತು ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಕರೆೆ ನೀಡಿದರು.
ದಾವಣಗೆರೆಯ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂಗಸAಸ್ಥೆಯಾದ ಯು.ಬಿ.ಡಿ.ಟಿ. ಇಂಜಿನಿಯರಿAಗ್ ಕಾಲೇಜಿನ ಅಮೃತ ಮಹೋತ್ಸವ (ಪ್ಲಾಟಿನಂ ಜುಬಿಲಿ) ಸಮಾರಂಭದಲ್ಲಿ ಪ್ರಧಾನ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಕರ್ನಾಟಕದ ಹೆಮ್ಮೆಯ ಮೊದಲ ಸರ್ಕಾರಿ ಇಂಜಿನಿಯರಿAಗ್ ಕಾಲೇಜು1951ರಲ್ಲಿ ಸ್ಥಾಪನೆಯಾದ ಯು.ಬಿ.ಡಿ.ಟಿ. ಕಾಲೇಜು ಕರ್ನಾಟಕದ ಮೊದಲ ಸರ್ಕಾರಿ ಇಂಜಿನಿಯರಿAಗ್ ಕಾಲೇಜು ಎಂಬ ಐತಿಹಾಸಿಕ ಹೆಗ್ಗಳಿಕೆಯನ್ನು ಹೊಂದಿದೆ. ಈ ಸಂಸ್ಥೆಯನ್ನು ಕಟ್ಟಲು ಕಾರಣರಾದ ಶ್ರೀ ಬ್ರಹ್ಮಪ್ಪ ದೇವೇಂದ್ರಪ್ಪ ತವಣಪ್ಪನವರ ದೂರದೃಷ್ಟಿ ಹಾಗೂ ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ಅವರ ಕೊಡುಗೆಯನ್ನು ಉಪರಾಷ್ಟ್ರಪತಿಗಳು ಅವರ ದೂರದೃಷ್ಟಿಯ ಕೊಡುಗೆಯನ್ನು ಸ್ಮರಿಸಿದರು.
“ಕಳೆದ 75 ವರ್ಷಗಳಲ್ಲಿ ಈ ಸಂಸ್ಥೆಯು 30,000ಕ್ಕೂ ಹೆಚ್ಚು ಇಂಜಿನಿಯರ್ಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದು, ಇದು ಕೇವಲ ಸಂಸ್ಥೆಯಲ್ಲ, ದೇಶದ ತಾಂತ್ರಿಕ ಶಿಕ್ಷಣದ ಹೆಮ್ಮೆಯ ಪಿಲ್ಲರ್” ಎಂದು ಶ್ಲಾಘಿಸಿದರು.
ನವ ಭಾರತ ನಿರ್ಮಾಣ ಮತ್ತು ತಂತ್ರಜ್ಞಾನ ಕ್ರಾಂತಿ; ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವು ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಟಾರ್ಟ್-ಅಪ್ ಇಂಡಿಯಾ ಹಾಗೂ ಸ್ಕಿಲ್ ಇಂಡಿಯಾ ಯೋಜನೆಗಳ ಮೂಲಕ ಹೊಸ ಎತ್ತರಕ್ಕೆ ಬೆಳೆಯುತ್ತಿದೆ. ಪ್ರಸ್ತುತ ಭಾರತವು ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್ ತಯಾರಿಕೆ ಮತ್ತು ಗ್ರೀನ್ ಎನರ್ಜಿಯಂತಹ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ನಾವು ಕೇವಲ ತಂತ್ರಜ್ಞಾನವನ್ನು ಬೆಳೆಸುತ್ತಿಲ್ಲ, ಬದಲಿಗೆ ಇಡೀ ಮಾನವಕುಲಕ್ಕೆ ಒಳಿತಾಗುವಂತಹ ಸಕಾರಾತ್ಮಕ ಬದಲಾವಣೆಯನ್ನು ತರುತ್ತಿದ್ದೇವೆ. ಈ ತಂತ್ರಜ್ಞಾನ ಕ್ರಾಂತಿಯ ಸಾರಥ್ಯವನ್ನು ಇಂದಿನ ಯುವ ಇಂಜಿನಿಯರ್ಗಳು ವಹಿಸಿಕೊಳ್ಳಬೇಕು” ಎಂದು ಅವರು ಆಶಿಸಿದರು.
ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ಉಪರಾಷ್ಟ್ರಪತಿಗಳ ಕಳಕಳಿಯ ಮನವಿ; ತಮ್ಮ ಭಾಷಣದ ಮಧ್ಯೆ ಯುವಜನತೆಗೆ ಅತ್ಯಂತ ಕಟ್ಟುನಿಟ್ಟಾದ ಹಾಗೂ ಪ್ರೀತಿಯ ಸಂದೇಶ ನೀಡಿದ ಉಪರಾಷ್ಟ್ರಪತಿಗಳು, ಮಾದಕ ದ್ರವ್ಯಗಳ ಪಿಡುಗಿನ ವಿರುದ್ಧ ಧ್ವನಿ ಎತ್ತಿದರು. ಯುವಜನತೆ ಮಾದಕ ದ್ರವ್ಯಗಳ ವ್ಯಸನದಿಂದ ಸಂಪೂರ್ಣ ದೂರವಿರಬೇಕು. ನಾವಷ್ಟೇ ಅಲ್ಲ, ನಮ್ಮ ಸ್ನೇಹಿತರು, ನಮ್ಮ ಕುಟುಂಬ ಹಾಗೂ ಇಡೀ ಸಮಾಜವೇ ಒಟ್ಟಾಗಿ ಒಕ್ಕೊರಲಿನಿಂದ ಡ್ರಗ್ಸ್ಗೆ ‘ನೋ’ ಎಂದು ಹೇಳಬೇಕು. ನಿಮ್ಮ ಬುದ್ಧಿಶಕ್ತಿ ನಿಮ್ಮ ನಿಯಂತ್ರಣದಲ್ಲಿರಬೇಕೇ ವಿನಃ ಯಾವುದೇ ವ್ಯಸನಗಳಿಗಲ್ಲ” ಎಂದು ಮಾರ್ಮಿಕವಾಗಿ ಹೇಳಿದರು.ವಿಶ್ವಮಟ್ಟದಲ್ಲಿ ಮಿಂಚುತ್ತಿರುವ ಹಳೆಯ ವಿದ್ಯಾರ್ಥಿಗಳು; ಯು.ಬಿ.ಡಿ.ಟಿ. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಇಂದು ವಿಶ್ವದ ವಿವಿಧ ಮೂಲೆಗಳಲ್ಲಿ ಕಾರ್ಪೊರೇಟ್, ರಾಜಕೀಯ, ಆಡಳಿತ, ಎನ್ಜಿಒ ಹಾಗೂ ಕಲಾ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡುತ್ತಿರುವುದು ಸಂಸ್ಥೆಯ ನಿಜವಾದ ಶಕ್ತಿಯಾಗಿದೆ ಎಂದು ಉಪರಾಷ್ಟ್ರಪತಿಗಳು ಬಣ್ಣಿಸಿದರು. ಕಾಲೇಜಿನ ಶಿಕ್ಷಕ ವೃಂದದ ಸೇವೆಯನ್ನು ಕೊಂಡಾಡಿದ ಅವರು, ಶಿಕ್ಷಕರು ಸಮಾಜದ ನಿಜವಾದ ಶಿಲ್ಪಿಗಳು ಎಂದರು.
ಯು.ಬಿ.ಡಿ.ಟಿ. ಎಂಜಿನಿಯರಿAಗ್ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ಅವರು ಮಾತನಾಡಿಕರ್ನಾಟಕ ರಾಜ್ಯವು ಶಿಕ್ಷಣ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತಿದ್ದು, ಇದಕ್ಕೆ ಇಲ್ಲಿನ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಹಾಗೂ ಪ್ರತಿಭಾವಂತ ಯುವಕರೇ ಕಾರಣ ಎಂದು ರಾಜ್ಯಪಾಲರು ಶ್ಲಾಘಿಸಿದರು.ಯು.ಬಿ.ಡಿ.ಟಿ. ಎಂಜಿನಿಯರಿಂಗ್ ಕಾಲೇಜು ಕಳೆದ 7 ದಶಕಗಳಿಗೂ ಹೆಚ್ಚು ಕಾಲದಿಂದ ತಾಂತ್ರಿಕ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಯೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಶ್ರಮಿಸಿದೆ. ಇಲ್ಲಿ ಓದಿದ ಸಾವಿರಾರು ಎಂಜಿನಿಯರ್ಗಳು, ವಿಜ್ಞಾನಿಗಳು ಮತ್ತು ಆಡಳಿತಾಧಿಕಾರಿಗಳಾಗಿ ದೇಶ-ವಿದೇಶಗಳಲ್ಲಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಹೆಮ್ಮೆಯಿಂದ ನುಡಿದರು.ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಕುಲಪತಿಗಳ್ದ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ : ಇದು ಕೇವಲ ಒಂದು ಸಂಸ್ಥೆಯ ವಾರ್ಷಿಕ ಆಚರಣೆಯಲ್ಲ, ಬದಲಿಗೆ ದಶಕಗಳಿಂದ ಈ ಸಂಸ್ಥೆಯು ಸಮಾಜಕ್ಕೆ ನೀಡಿದ ಜ್ಞಾನ, ಸಂಸ್ಕೃತಿ ಮತ್ತು ತತ್ವಜ್ಞಾನದ ಪರಂಪರೆಯ ಸಂಭ್ರಮವಾಗಿದೆ, ಕಳೆದ ಏಳು ದಶಕಗಳಿಗೂ ಹೆಚ್ಚು ಕಾಲದಿಂದ ಈ ಕಾಲೇಜು ದೇಶಕ್ಕೆ ಸಾವಿರಾರು ಅತ್ಯುತ್ತಮ ಎಂಜಿನಿಯರ್ಗಳು, ತಂತ್ರಜ್ಞರು ಹಾಗೂ ಆಡಳಿತಗಾರರನ್ನು ಕೊಡುಗೆಯಾಗಿ ನೀಡಿದೆ ಎಂದರು.ದೇಶದ ಸರಾಸರಿ ತಲಾವಾರು ಆದಾಯ 2.5 ಲಕ್ಷ ರೂಪಾಯಿಗಳಾಗಿದ್ದರೆ, ಕರ್ನಾಟಕದ ತಲಾವಾರು ಆದಾಯವು ಸುಮಾರು 4.3 ಲಕ್ಷ ರೂಪಾಯಿಗಳಷ್ಟಿದೆ. ಇದಕ್ಕೆ ರಾಜ್ಯದಲ್ಲಿ ಹಿಂದಿನಿAದಲೂ ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನೆಗೆ ನೀಡಲಾದ ಮಹತ್ವವೇ ಮುಖ್ಯ ಕಾರಣ ಎಂದು ವರದಿಯಾಗಿದೆ. ಸ್ವಾಮಿ ವಿವೇಕಾನಂದರು ಮತ್ತು ಜಮ್ಶೆಡ್ಜೀ ಟಾಟಾ ಅವರ ನಡುವಿನ ಐತಿಹಾಸಿಕ ಭೇಟಿಯ ಪ್ರೇರಣೆಯಿಂದ ದೇಶದಲ್ಲಿ ಆರಂಭವಾದ ತಾಂತ್ರಿಕ ಕ್ರಾಂತಿ, ನಂತರದ ದಿನಗಳಲ್ಲಿ ಮೈಸೂರು ಮಹಾರಾಜರ ಬೆಂಬಲದೊಂದಿಗೆ ರಾಜ್ಯದಲ್ಲಿ ಭದ್ರವಾಗಿ ನೆಲೆಯೂರಿದೆ ಎಂದು ತಿಳಿಸಿದರು.ಇಂದಿನ ಯುಗದಲ್ಲಿ ಕೇವಲ ಪದವಿ ಮುಖ್ಯವಲ್ಲ, ಕೌಶಲ್ಯಾಭಿವೃದ್ಧಿ ಅತ್ಯಂತ ಅಗತ್ಯವಾಗಿದೆ. ಕಾಲೇಜಿನಲ್ಲಿ ಈಗಾಗಲೇ ಎರಡು ಕೌಶಲ್ಯ ಕೇಂದ್ರಗಳಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ದೊಡ್ಡ ಮಟ್ಟದ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು. ಸಂಸ್ಥೆಯ ನೂರನೇ ವರ್ಷದ ಸಂಭ್ರಮಾಚರಣೆಯ ವೇಳೆಗೆ ತಂತ್ರಜ್ಞಾನ ಮತ್ತಷ್ಟು ಮುನ್ನಡೆಯಲಿದ್ದು, ಜಗತ್ತಿನ ಆವಿಷ್ಕಾರಗಳಿಗೆ ತಕ್ಕಂತೆ ನಾವು ಸಾಗಬೇಕಿದೆ ಎಂದು ತಿಳಿಸಿದರು.ಪ್ರಸ್ತಾವಿಕ ನುಡಿಗಳು-ಕುಲಸಚಿವರು ಡಾ.ಎಸ್.ವಿದ್ಯಾಶಂಕರ್: ನಾಡಿನ ಜ್ಞಾನ ಪರಂಪರೆಯ ಕೀರ್ತಿಯನ್ನು ಹೊತ್ತು, ‘ವಿದ್ಯೆಯ ಬೆಳಕು, ಸೇವೆಯ ಧರ್ಮ’ ಎಂಬ ಆದರ್ಶವನ್ನು ಜೀವನ ಮೌಲ್ಯವಾಗಿ ಸ್ವೀಕರಿಸಿರುವ ಈ ಮಹಾನ್ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ.ಕರ್ನಾಟಕದ ಮೊದಲ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯುಬಿಡಿಟಿ ಕಾಲೇಜು, 1951 ರಲ್ಲಿ ಶ್ರೀ ಬ್ರಹ್ಮಪ್ಪ ದೇವೇಂದ್ರಪ್ಪ ತಾವಣನಪ್ಪನವರ ದೂರದರ್ಶಿತ್ವ ಹಾಗೂ ದಾನಚಿಂತನೆ ಮತ್ತು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಆಶೀರ್ವಾದದೊಂದಿಗೆ ಸ್ಥಾಪಿತವಾಗಿತ್ತು. ಕಳೆದ 75 ವೈಭವಯುತ ವರ್ಷಗಳಿಂದ ಈ ಸಂಸ್ಥೆಯು ಶೈಕ್ಷಣಿಕ ಉತ್ಕೃಷ್ಟತೆ, ಶಿಸ್ತು, ನಾವೀನ್ಯತೆ ಹಾಗೂ ಸಮಾಜ ಸೇವೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.ಮಾಜಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿ
ಕಾರ್ಜುನ್ ದಾವಣಗೆರೆ ಜಿಲ್ಲೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಂIಅಖಿಇ ಅಧ್ಯಕ್ಷರಾದ ಟಿ. ಜಿ. ಸೀತಾರಾಮ್ ಉಪಸ್ಥಿತರಿದ್ದರು.
ದಾವಣಗೆರೆ: ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಹೊಸ ದಿಕ್ಸೂಚಿ ನೀಡುತ್ತಿದೆ. 2047ರ ವೇಳೆಗೆ ನಮ್ಮ ದೇಶವನ್ನು ‘ವಿಕಸಿತ ಭಾರತ’ವನ್ನಾಗಿ ಮಾಡಲು ಯುವ ಇಂಜಿನಿಯರ್ಗಳ ಕೊಡುಗೆ ಅಪಾರವಾಗಿದ್ದು, ದೇಶದ ಪ್ರಗತಿಗಾಗಿ ಯುವಶಕ್ತಿ ಮಾದಕ ದ್ರವ್ಯಗಳಂತಹ ವ್ಯಸನಗಳಿಂದ ದೂರವಿದ್ದು ದೇಶದ ಅಭಿವೃದ್ದಿಗೆ ರಾಯಭಾರಿಗಳಾಗಬೇಕೆಂದು ಯುವ ಇಂಜಿನಿಯರ್ಗಳ ಕುರಿತು ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಕರೆ ನೀಡಿದರು.ದಾವಣಗೆರೆಯ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂಗಸAಸ್ಥೆಯಾದ ಯು.ಬಿ.ಡಿ.ಟಿ. ಇಂಜಿನಿಯರಿAಗ್ ಕಾಲೇಜಿನ ಅಮೃತ ಮಹೋತ್ಸವ (ಪ್ಲಾಟಿನಂ ಜುಬಿಲಿ) ಸಮಾರಂಭದಲ್ಲಿ ಪ್ರಧಾನ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.ಕರ್ನಾಟಕದ ಹೆಮ್ಮೆಯ ಮೊದಲ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು1951ರಲ್ಲಿ ಸ್ಥಾಪನೆಯಾದ ಯು.ಬಿ.ಡಿ.ಟಿ. ಕಾಲೇಜು ಕರ್ನಾಟಕದ ಮೊದಲ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಎಂಬ ಐತಿಹಾಸಿಕ ಹೆಗ್ಗಳಿಕೆಯನ್ನು ಹೊಂದಿದೆ. ಈ ಸಂಸ್ಥೆಯನ್ನು ಕಟ್ಟಲು ಕಾರಣರಾದ ಶ್ರೀ ಬ್ರಹ್ಮಪ್ಪ ದೇವೇಂದ್ರಪ್ಪ ತವಣಪ್ಪನವರ ದೂರದೃಷ್ಟಿ ಹಾಗೂ ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ಅವರ ಕೊಡುಗೆಯನ್ನು ಉಪರಾಷ್ಟ್ರಪತಿಗಳು ಅವರ ದೂರದೃಷ್ಟಿಯ ಕೊಡುಗೆಯನ್ನು ಸ್ಮರಿಸಿದರು. “ಕಳೆದ 75 ವರ್ಷಗಳಲ್ಲಿ ಈ ಸಂಸ್ಥೆಯು 30,000ಕ್ಕೂ ಹೆಚ್ಚು ಇಂಜಿನಿಯರ್ಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದು, ಇದು ಕೇವಲ ಸಂಸ್ಥೆಯಲ್ಲ, ದೇಶದ ತಾಂತ್ರಿಕ ಶಿಕ್ಷಣದ ಹೆಮ್ಮೆಯ ಪಿಲ್ಲರ್” ಎಂದು ಶ್ಲಾಘಿಸಿದರು.ನವ ಭಾರತ ನಿರ್ಮಾಣ ಮತ್ತು ತಂತ್ರಜ್ಞಾನ ಕ್ರಾಂತಿ; ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವು ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಟಾರ್ಟ್-ಅಪ್ ಇಂಡಿಯಾ ಹಾಗೂ ಸ್ಕಿಲ್ ಇಂಡಿಯಾ ಯೋಜನೆಗಳ ಮೂಲಕ ಹೊಸ ಎತ್ತರಕ್ಕೆ ಬೆಳೆಯುತ್ತಿದೆ. ಪ್ರಸ್ತುತ ಭಾರತವು ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್ ತಯಾರಿಕೆ ಮತ್ತು ಗ್ರೀನ್ ಎನರ್ಜಿಯಂತಹ ಅತ್ಯಾಧುನಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ನಾವು ಕೇವಲ ತಂತ್ರಜ್ಞಾನವನ್ನು ಬೆಳೆಸುತ್ತಿಲ್ಲ, ಬದಲಿಗೆ ಇಡೀ ಮಾನವಕುಲಕ್ಕೆ ಒಳಿತಾಗುವಂತಹ ಸಕಾರಾತ್ಮಕ ಬದಲಾವಣೆಯನ್ನು ತರುತ್ತಿದ್ದೇವೆ. ಈ ತಂತ್ರಜ್ಞಾನ ಕ್ರಾಂತಿಯ ಸಾರಥ್ಯವನ್ನು ಇಂದಿನ ಯುವ ಇಂಜಿನಿಯರ್ಗಳು ವಹಿಸಿಕೊಳ್ಳಬೇಕು” ಎಂದು ಅವರು ಆಶಿಸಿದರು.ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ಉಪರಾಷ್ಟ್ರಪತಿಗಳ ಕಳಕಳಿಯ ಮನವಿ; ತಮ್ಮ ಭಾಷಣದ ಮಧ್ಯೆ ಯುವಜನತೆಗೆ ಅತ್ಯಂತ ಕಟ್ಟುನಿಟ್ಟಾದ ಹಾಗೂ ಪ್ರೀತಿಯ ಸಂದೇಶ ನೀಡಿದ ಉಪರಾಷ್ಟ್ರಪತಿಗಳು, ಮಾದಕ ದ್ರವ್ಯಗಳ ಪಿಡುಗಿನ ವಿರುದ್ಧ ಧ್ವನಿ ಎತ್ತಿದರು. ಯುವಜನತೆ ಮಾದಕ ದ್ರವ್ಯಗಳ ವ್ಯಸನದಿಂದ ಸಂಪೂರ್ಣ ದೂರವಿರಬೇಕು. ನಾವಷ್ಟೇ ಅಲ್ಲ, ನಮ್ಮ ಸ್ನೇಹಿತರು, ನಮ್ಮ ಕುಟುಂಬ ಹಾಗೂ ಇಡೀ ಸಮಾಜವೇ ಒಟ್ಟಾಗಿ ಒಕ್ಕೊರಲಿನಿಂದ ಡ್ರಗ್ಸ್ಗೆ ‘ನೋ’ ಎಂದು ಹೇಳಬೇಕು. ನಿಮ್ಮ ಬುದ್ಧಿಶಕ್ತಿ ನಿಮ್ಮ ನಿಯಂತ್ರಣದಲ್ಲಿರಬೇಕೇ ವಿನಃ ಯಾವುದೇ ವ್ಯಸನಗಳಿಗಲ್ಲ” ಎಂದು ಮಾರ್ಮಿಕವಾಗಿ ಹೇಳಿದರು.ವಿಶ್ವಮಟ್ಟದಲ್ಲಿ ಮಿಂಚುತ್ತಿರುವ ಹಳೆಯ ವಿದ್ಯಾರ್ಥಿಗಳು; ಯು.ಬಿ.ಡಿ.ಟಿ. ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಇಂದು ವಿಶ್ವದ ವಿವಿಧ ಮೂಲೆಗಳಲ್ಲಿ ಕಾರ್ಪೊರೇಟ್, ರಾಜಕೀಯ, ಆಡಳಿತ, ಎನ್ಜಿಒ ಹಾಗೂ ಕಲಾ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡುತ್ತಿರುವುದು ಸಂಸ್ಥೆಯ ನಿಜವಾದ ಶಕ್ತಿಯಾಗಿದೆ ಎಂದು ಉಪರಾಷ್ಟ್ರಪತಿಗಳು ಬಣ್ಣಿಸಿದರು. ಕಾಲೇಜಿನ ಶಿಕ್ಷಕ ವೃಂದದ ಸೇವೆಯನ್ನು ಕೊಂಡಾಡಿದ ಅವರು, ಶಿಕ್ಷಕರು ಸಮಾಜದ ನಿಜವಾದ ಶಿಲ್ಪಿಗಳು ಎಂದರು.ಯು.ಬಿ.ಡಿ.ಟಿ. ಎಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ಅವರು ಮಾತನಾಡಿಕರ್ನಾಟಕ ರಾಜ್ಯವು ಶಿಕ್ಷಣ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತಿದ್ದು, ಇದಕ್ಕೆ ಇಲ್ಲಿನ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಹಾಗೂ ಪ್ರತಿಭಾವಂತ ಯುವಕರೇ ಕಾರಣ ಎಂದು ರಾಜ್ಯಪಾಲರು ಶ್ಲಾಘಿಸಿದರು.ಯು.ಬಿ.ಡಿ.ಟಿ. ಎಂಜಿನಿಯರಿಂಗ್ ಕಾಲೇಜು ಕಳೆದ 7 ದಶಕಗಳಿಗೂ ಹೆಚ್ಚು ಕಾಲದಿಂದ ತಾಂತ್ರಿಕ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಯೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಶ್ರಮಿಸಿದೆ. ಇಲ್ಲಿ ಓದಿದ ಸಾವಿರಾರು ಎಂಜಿನಿಯರ್ಗಳು, ವಿಜ್ಞಾನಿಗಳು ಮತ್ತು ಆಡಳಿತಾಧಿಕಾರಿಗಳಾಗಿ ದೇಶ-ವಿದೇಶಗಳಲ್ಲಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಹೆಮ್ಮೆಯಿಂದ ನುಡಿದರು.ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಕುಲಪತಿಗಳ್ದ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ : ಇದು ಕೇವಲ ಒಂದು ಸಂಸ್ಥೆಯ ವಾರ್ಷಿಕ ಆಚರಣೆಯಲ್ಲ, ಬದಲಿಗೆ ದಶಕಗಳಿಂದ ಈ ಸಂಸ್ಥೆಯು ಸಮಾಜಕ್ಕೆ ನೀಡಿದ ಜ್ಞಾನ, ಸಂಸ್ಕೃತಿ ಮತ್ತು ತತ್ವಜ್ಞಾನದ ಪರಂಪರೆಯ ಸಂಭ್ರಮವಾಗಿದೆ, ಕಳೆದ ಏಳು ದಶಕಗಳಿಗೂ ಹೆಚ್ಚು ಕಾಲದಿಂದ ಈ ಕಾಲೇಜು ದೇಶಕ್ಕೆ ಸಾವಿರಾರು ಅತ್ಯುತ್ತಮ ಎಂಜಿನಿಯರ್ಗಳು, ತಂತ್ರಜ್ಞರು ಹಾಗೂ ಆಡಳಿತಗಾರರನ್ನು ಕೊಡುಗೆಯಾಗಿ ನೀಡಿದೆ ಎಂದರು.ದೇಶದ ಸರಾಸರಿ ತಲಾವಾರು ಆದಾಯ 2.5 ಲಕ್ಷ ರೂಪಾಯಿಗಳಾಗಿದ್ದರೆ, ಕರ್ನಾಟಕದ ತಲಾವಾರು ಆದಾಯವು ಸುಮಾರು 4.3 ಲಕ್ಷ ರೂಪಾಯಿಗಳಷ್ಟಿದೆ. ಇದಕ್ಕೆ ರಾಜ್ಯದಲ್ಲಿ ಹಿಂದಿನಿAದಲೂ ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನೆಗೆ ನೀಡಲಾದ ಮಹತ್ವವೇ ಮುಖ್ಯ ಕಾರಣ ಎಂದು ವರದಿಯಾಗಿದೆ. ಸ್ವಾಮಿ ವಿವೇಕಾನಂದರು ಮತ್ತು ಜಮ್ಶೆಡ್ಜೀ ಟಾಟಾ ಅವರ ನಡುವಿನ ಐತಿಹಾಸಿಕ ಭೇಟಿಯ ಪ್ರೇರಣೆಯಿಂದ ದೇಶದಲ್ಲಿ ಆರಂಭವಾದ ತಾಂತ್ರಿಕ ಕ್ರಾಂತಿ, ನಂತರದ ದಿನಗಳಲ್ಲಿ ಮೈಸೂರು ಮಹಾರಾಜರ ಬೆಂಬಲದೊAದಿಗೆ ರಾಜ್ಯದಲ್ಲಿ ಭದ್ರವಾಗಿ ನೆಲೆಯೂರಿದೆ ಎಂದು ತಿಳಿಸಿದರು.ಇಂದಿನ ಯುಗದಲ್ಲಿ ಕೇವಲ ಪದವಿ ಮುಖ್ಯವಲ್ಲ, ಕೌಶಲ್ಯಾಭಿವೃದ್ಧಿ ಅತ್ಯಂತ ಅಗತ್ಯವಾಗಿದೆ. ಕಾಲೇಜಿನಲ್ಲಿ ಈಗಾಗಲೇ ಎರಡು ಕೌಶಲ್ಯ ಕೇಂದ್ರಗಳಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ದೊಡ್ಡ ಮಟ್ಟದ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು. ಸಂಸ್ಥೆಯ ನೂರನೇ ವರ್ಷದ ಸಂಭ್ರಮಾಚರಣೆಯ ವೇಳೆಗೆ ತಂತ್ರಜ್ಞಾನ ಮತ್ತಷ್ಟು ಮುನ್ನಡೆಯಲಿದ್ದು, ಜಗತ್ತಿನ ಆವಿಷ್ಕಾರಗಳಿಗೆ ತಕ್ಕಂತೆ ನಾವು ಸಾಗಬೇಕಿದೆ ಎಂದು ತಿಳಿಸಿದರು.ಪ್ರಸ್ತಾವಿಕ ನುಡಿಗಳು-ಕುಲಸಚಿವರು ಡಾ.ಎಸ್.ವಿದ್ಯಾಶಂಕರ್: ನಾಡಿನ ಜ್ಞಾನ ಪರಂಪರೆಯ ಕೀರ್ತಿಯನ್ನು ಹೊತ್ತು, ‘ವಿದ್ಯೆಯ ಬೆಳಕು, ಸೇವೆಯ ಧರ್ಮ’ ಎಂಬ ಆದರ್ಶವನ್ನು ಜೀವನ ಮೌಲ್ಯವಾಗಿ ಸ್ವೀಕರಿಸಿರುವ ಈ ಮಹಾನ್ ಶಿಕ್ಷಣ ಸಂಸ್ಥೆಯ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ.ಕರ್ನಾಟಕದ ಮೊದಲ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯುಬಿಡಿಟಿ ಕಾಲೇಜು, 1951 ರಲ್ಲಿ ಶ್ರೀ ಬ್ರಹ್ಮಪ್ಪ ದೇವೇಂದ್ರಪ್ಪ ತಾವಣನಪ್ಪನವರ ದೂರದರ್ಶಿತ್ವ ಹಾಗೂ ದಾನಚಿಂತನೆ ಮತ್ತು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಆಶೀರ್ವಾದದೊಂದಿಗೆ ಸ್ಥಾಪಿತವಾಗಿತ್ತು. ಕಳೆದ 75 ವೈಭವಯುತ ವರ್ಷಗಳಿಂದ ಈ ಸಂಸ್ಥೆಯು ಶೈಕ್ಷಣಿಕ ಉತ್ಕೃಷ್ಟತೆ, ಶಿಸ್ತು, ನಾವೀನ್ಯತೆ ಹಾಗೂ ಸಮಾಜ ಸೇವೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.ಮಾಜಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿ
ಕಾರ್ಜುನ್ ದಾವಣಗೆರೆ ಜಿಲ್ಲೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಂIಅಖಿಇ ಅಧ್ಯಕ್ಷರಾದ ಟಿ. ಜಿ. ಸೀತಾರಾಮ್ ಉಪಸ್ಥಿತರಿದ್ದರು.
‘ಡ್ರಗ್ಸ್ಗೆ ಹೇಳಿ ನೋ, ದೇಶದ ಪ್ರಗತಿಗೆ ಸಾಥ್ ನೀಡಿ’: ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಕರೆ



