ಚಿಕ್ಕಬಳ್ಳಾಪುರ: ನಗರದ ಹೊರವಲಯದ ಗಣೇಶ್ ಪದ್ಮ ಲೇಔಟ್ ನಲ್ಲಿ ಇರುವ ಶಾಸಕ ಪ್ರದೀಪ್ ಈಶ್ವರ್ ರವರ ಮನೆಗೆ ನಿನ್ನೆ ರಾತ್ರಿ ಕಿಡಿಗೇಡಿಗಳು ಕಲ್ಲುಗಳನ್ನು ಎಸೆದಿದ್ದು ಶಾಸಕರ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿ ಚೆಲ್ಲಾಪಿಲ್ಲಿಯಾಗಿದೆ.
ನಿನ್ನೆ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆದು ವಿಜೇತ ಅಭ್ಯರ್ಥಿ ಡಾಕ್ಟರ್ ಕೆ ಸುಧಾಕರ್ ರವರ ವಿಜಯೋತ್ಸವವೂ ಸಹ ನಡೆಯಿತು. ಗುರುತು ಸಿಗದ ಕೆಲವರು ರಾಷ್ಟ್ರೀಯ ಹೆದ್ದಾರಿ ಬಿಬಿ ರಸ್ತೆಗೆ ಅಂಟಿಕೊಂಡಿರುವಂತೆ ಕಂದವಾರ ಗ್ರಾಮದ ಸಮೀಪ ಇರುವ ಶಾಸಕ ಪ್ರದೀಪ್ ಈಶ್ವರ್ ರವರ ಮನೆಗೆ ಕಲ್ಲೆಸೆದು ಪರಾರಿಯಾಗಿದ್ದಾರೆ.
ಬೆಳಗ್ಗೆ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಶಾಸಕರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ಈ ಸಂದರ್ಭದಲ್ಲಿ ಸಿಸಿ ಕ್ಯಾಮೆರಾ ಫುಟೇಜ್ಗಳನ್ನು ವೀಕ್ಷಿಸಿದರು. ಕಳೆದ ರಾತ್ರಿ ಕಲ್ಲೆಸೆತ ಪ್ರಕರಣ ನಡೆದ ಸಂದರ್ಭದಲ್ಲಿ ಶಾಸಕರು ಮನೆಯಲ್ಲಿ ಇರಲಿಲ್ಲ ಬೆಳಗ್ಗೆ ಸದರಿ ಪ್ರಕರಣದ ಬಗ್ಗೆ ದೂರವಾಣಿ ಮೂಲಕ ಅವರನ್ನು…
ಸಂಪರ್ಕಿಸಿದಾಗ ನನಗೂ ಸಹ ಈ ವಿಷಯ ತಿಳಿದು ಬಂದಿತು ನಾನು ಈ ಬಗ್ಗೆ ಕೂಲಂಕುಶ ತನಿಕೆಗೆ ಪೋಲಿಸ್ ಇಲಾಖೆಗೆ ತಿಳಿಸಿದ್ದು ಬೆಂಗಳೂರಿನಿಂದ ಶ್ವಾನ ದಳ ಮತ್ತು ಇತರ ತಜ್ಞರು ಇಂದು ಬರುವರು.ಸದರಿ ಪ್ರಕರಣವನ್ನು ನಾನು ಮುಖ್ಯಮಂತ್ರಿಗಳಿಗೂ ಮತ್ತು ಗೃಹ ಮಂತ್ರಿಗಳ ಗಮನಕ್ಕೂ ತಂದಿರುತ್ತೇನೆ ಅವರು ಸಹ ಪ್ರಕರಣದ ತೀವ್ರತೆಯನ್ನು ಗಮನಿಸಿ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ಮಾಡಿಸುವುದಾಗಿ ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆ ನಡೆದು ಒಂದು ವರ್ಷವಾಯಿತು ಈ ವರ್ಷದ ಅವಧಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ ಇನ್ನು ಲೋಕಸಭಾ ಚುನಾವಣಾ ಫಲಿತಾಂಶ ಬಂದ ದಿನವೇ ಈ ರೀತಿ ಕಿಡಿಗೇಡಿಗಳು ರಾಜಕೀಯ ಮತ್ಸರದಿಂದ ಈ ರೀತಿ ಕಲ್ಲೆಸೆದಿರುವುದು ತಮ್ಮ ಕ್ಷೇತ್ರದಲ್ಲಿ ರಾಜಕೀಯ ಮತ್ಸರದ ವಾತಾವರಣ ಉಂಟಾಗಿರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.