ಬೆಂಗಳೂರು: ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ ಬುದ್ಧ ಬಸವ ಮತ್ತು ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೇಲಿ ಮಠ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಶಿವರುದ್ರ ಮಹಾ ಸ್ವಾಮೀಜಿ ರವರು ದಿವ್ಯ ಸಾನಿದ್ಯವನ್ನು ವಹಿಸಿದ್ದರು. ಕೋಲಾರದ ಪುರಾಣ ಪ್ರಸಿದ್ಧ ಆಧ್ಯಾತ್ಮಿಕ ತಾಣ ಶ್ರೀ ಕೋಲಾರಮ್ಮ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ
ಸಿ.ಸೋಮಶೇಖರ್ ದೀಕ್ಷಿತ್ ಎಲ್ಲರಿಗೂ ಆಶೀರ್ವಚನವನ್ನು ನೀಡಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಸಾಹಿತಿಗಳಾದ ಶ್ರೀ ಡಿ.ಎಸ್. ವೀರಯ್ಯಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಾಹಿತಿ ಹಾಗೂ ಉದ್ಯಮಿ ಡಾ. ಎಸ್.ಅಕ್ಬರ್ ಭಾಷಾ ವಹಿಸಿದ್ದರು. ಸಾಹಿತಿ ಹಾಗೂ ಸಂಶೋಧಕ ಡಾ. ಕೆ. ಜಿ ಲಕ್ಷ್ಮೀನಾರಾಯಣಪ್ಪ ಮತ್ತು ಇಂದು ಸಂಜೆ ಪತ್ರಿಕೆಯ ಪ್ರಧಾನ ವ್ಯವಸ್ಥಾಪಕ ಸಂಪಾದಕರಾದ ಡಾಜಿ.ವೈ. ಪದ್ಮ ನಾಗರಾಜ್ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಗಾಯಕ ನಟ ಶಶಿಧರ್ ಕೋಟೆ, ಪಂಚ ಬಾಷಾ ನಟಿ ಭೂಮಿಕಾ, ಪಿಡಿಒ ಅಧಿಕಾರಿ ಕೆ ಎಸ್ ಸತೀಶ್ ಕುಮಾರ್, ಗಾಯಕಿ ಸಂಗೀತ ನಿರ್ದೇಶಕಿ ಜಯಂತಿ ಭಟ್, ಹಾಸ್ಯ ಕಲಾವಿದೆ ರಾಜೇಶ್ವರಿ, ಸಮಾಜ ಸೇವಕಿ ಡಾ. ಭ್ರಮರ ಶಿವಶಂಕರ್, ಡಾ. ಮೀನಾಕ್ಷಿ ಶೇಷಾಶಲ, ಮುಂತಾದವರು ಭಾಗವಹಿಸಿದ್ದರು. ಸಮಾರಂಭದ ಒಟ್ಟಾರೆ ಆಶಯವನ್ನು ಕುರಿತು ಮಾತನಾಡಿದ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಡಾ. ಗುಣವಂತ ಮಂಜು, ಬುದ್ಧ ಬಸವ ಮತ್ತು ಅಂಬೇಡ್ಕರ್ ಅವರು ಕೇವಲ ಯುಗ ಪುರುಷರು ಮಾತ್ರವಲ್ಲ ಅವರು ಜಗದಗಲ, ಮುಗಿಲಗಲ ಹರಡಿದ ಶಾಂತಿ ಮತ್ತು ಸಮಾನತೆಯ ಬೆಳಕು ಎಂದರು. ಪ್ರಸ್ತುತ ಜಗತ್ತಿನಲ್ಲಿ ಯುದ್ಧದ ಕಾರ್ಮೋಡ ಆವರಿಸಿದೆ, ಪ್ರಪಂಚದ ಯಾವುದೇ ಭಾಗದಲ್ಲೂ ಯುದ್ಧವಾದರೂ ಇಡೀ ವಿಶ್ವಕ್ಕೆ ಅದರ ಪರಿಣಾಮ ಉಂಟಾಗುತ್ತದೆ. ಇಂತಹ ಕಾಲಘಟ್ಟದಲ್ಲಿ ಬುದ್ಧ ಬಸವ ಮತ್ತು ಅಂಬೇಡ್ಕರ್ ಅವರು ಜಗತ್ತಿಗೆ ನೀಡಿದ ಸಂದೇಶಗಳು ವಿಶ್ವ ಶಾಂತಿಯ ಆಧಾರ ಸ್ಥಂಭಗಳಾಗಿವೆ. ಶಾಂತಿ, ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ಮತ್ತು ಶಿಕ್ಷಣದ ಹಕ್ಕು, ಕಟ್ಟ ಕಡೆಯ ವ್ಯಕ್ತಿಯನ್ನು ತಲುಪಬೇಕು. ಕ್ರೋದ ಬುದ್ಧಿಯನ್ನು ಶಾಂತಿಯ ಮಂತ್ರ ಕೊಲ್ಲದೆ ಹೊರತು ಜಗತ್ತಿನಲ್ಲಿ ಐಕ್ಯತೆ ಮೂಡುವುದಿಲ್ಲ. ಹಾಗಾಗಿ ಮುಂದಿನ ಜನಾಂಗಕ್ಕೆ ನಾವು ಸಮಾನಾಂತರವಾದ ಏಕತೆ ಸಮಗ್ರತೆ ಮತ್ತು ಪ್ರಾಪಂಚಿಕ ಶಾಂತಿಯ ಗೀತೆಯನ್ನು ಭೋದಿಸಬೇಕಿದೆ. ಎಂದು ನುಡಿದರು. ಬುದ್ಧ ಶಾಂತಿ ಪ್ರಶಸ್ತಿ, ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಸೇವಾ ರತ್ನ ಪ್ರಶಸ್ತಿ, ಜಗಜ್ಯೋತಿ ಬಸವೇಶ್ವರ ಕಾಯಕ ಶ್ರೀ ಪ್ರಶಸ್ತಿ, ಮುಂತಾದ ಪ್ರಶಸ್ತಿಗಳನ್ನು ನಾಡಿದ ವಿವಿಧ ಕ್ಷೇತ್ರದ ಸಾಧಕರಿಗೆ ನೀಡಿ ಸನ್ಮಾನಿಸಿ ಪುರಸ್ಕರಿಸಲಾಯಿತು. ಸಂಸ್ಥೆಯ ನಿರ್ದೇಶಕಿ ಶ್ರೀಮತಿ ವರಲಕ್ಷಿ÷್ಮ ಗುಣವಂತ ಮಂಜು ಕಾರ್ಯಕ್ರಮವನ್ನು ನಿರ್ವಹಿಸಿದರು. ಅಂತರಾಷ್ಟ್ರೀಯ ಖ್ಯಾತಿಯ ನಿರೂಪಕಿ ಸವಿಪ್ರಕಾಶ್ ಕಾರ್ಯಕ್ರಮವನ್ನು ನಿರೂಪಿಸಿದರು.
ಮಾನವತೆಯ ಮಹಾ ಬೆಳಕು ಬುದ್ಧ, ಬಸವ, ಅಂಬೇಡ್ಕರ್: ಡಾ. ಗುಣವಂತ ಮಂಜು



