ಬೆಂಗಳೂರು : ಸಿಇಟಿ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿ ಪ್ರಜ್ವಲ್ ಎ ದಾಸ್ (23) ವರ್ಷದ ಯುವಕ ಪಲ್ಸರ್ 400 ಸಿಸಿ ಮೋಟರ್ ಗಾಡಿಯನ್ನು ಅತಿ ವೇಗವಾಗಿ ಚಲಾಯಿಸಿ ಆಯಾ ತಪ್ಪಿ ನೆಲಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ 12ರ ಸುಮಾರಿಗೆ ಪೀಣ್ಯ ಇಂಡಸ್ಟ್ರಿಯಲ್ ಮೆಟ್ರೋ ಬಳಿ ಜರುಗಿದೆ.
ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಅಪಘಾತ ಪ್ರಕರಣ ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಿ ಮಹಾಕನಪುರ ಗೇಟ್ ಬಳಿ ಎರಡು ಮೋಟಾರ್ ಬೈಕ್ ಗಳು ಪರಸ್ಪರ ಡಿಕ್ಕಿಯಾಗಿ ಓರ್ವ ವ್ಯಕ್ತಿ ಮೃತಪಟ್ಟಿರುತ್ತಾನೆ.
ನಿನ್ನೆ ರಾತ್ರಿ ಹನ್ನೊಂದರ ಸುಮಾರಿಗೆ ಮೋಟರ್ ಬೈಕ್ ಸವಾರರು ಅತಿ
ವೇಗವಾಗಿ ಮುಖಾಮುಖಿ ಡಿಕ್ಕಿ ಹೊಡೆದುಕೊಂಡು ರಮೇಶ್(26) ವರ್ಷದ ಯುವಕ ಮೃತಪಟ್ಟರೆ ವೆಂಕಟೇಶ್ಗೆ ತೀವ್ರತರವಾದ ಗಾಯ ಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾನೆ. ಮೃತ ವೆಂಕಟೇಶ್ ಚನ್ನಸಂದ್ರದ ನಿವಾಸಿಯಾಗಿದ್ದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ.



