ಬೆಂಗಳೂರು: ನೆಲಮಂಗಲ, ಚಿಕ್ಕಜಾಲ, ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮೂರು ಅಪಘಾತಗಳು ಸಂಭವಿಸಿ ಮೂರು ಜನ ಮೃತಪಟ್ಟಿರುವ ಘಟನೆ ವರದಿಯಾಗಿದೆ.ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆ ಕ್ರಾಸ್ ಬಳಿ ಸ್ಕೋಡಾ ಕಾರ್ ಮೋಟಾರ್ ಬೈಕ್ಸ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಶೇಖರ್ 28 ವರ್ಷದ ಯುವಕ ಸಾವನ್ನಪ್ಪಿರುತ್ತಾನೆ.ಅಪಘಾತವು ರಾತ್ರಿ 9:00 ಸುಮಾರಿಗೆ ಜರುಗಿದೆ, ಮೃತನ್ನು ದೇವನಹಳ್ಳಿಯ ನೀಲೇರಿ ಗ್ರಾಮದವನಾಗಿರುತ್ತಾನೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ರಸ್ತೆಯ ಚಪ್ಪರದ ಕಲ್ಲು ಬಳಿ ಇರುವ ಸ್ಟೋನ್ ಜಂಕ್ಷನ್ ಬಳಿ ಅಪರಿಚಿತ ವಾಹನ ಎಲೆಕ್ಟ್ರಿಕ್ ಮೋಟಾರ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಮಹೇಶ್ ನಲವತ್ತು ವರ್ಷದ ವ್ಯಕ್ತಿ ಸಾವನ್ನಪ್ಪಿರುತ್ತಾನೆ.ಅಪಘಾತವು ರಾತ್ರಿ 9:30 ಸುಮಾರಿಗೆ ಜರುಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಣಿಗಲ್ ನೆಲಮಂಗಲ ರಸ್ತೆಯಲ್ಲಿ ಅಪರಿಚಿತ ವಾಹನ ಮೋಟಾರ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಪದಂ 30 ವರ್ಷದ ವ್ಯಕ್ತಿ ಮೃತಪಟ್ಟಿರುತ್ತಾನೆ ಅಪಘಾತವು ರಾತ್ರಿ ಒಂದು ಗಂಟೆ ಸುಮಾರಿಗೆ ವರದಿಯಾಗಿದೆ.ಮೂರು ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.



