ಅರ್ಶದೀಪ್ ಸಿಂಗ್ ಅವರ ಮಾರಕ ಬೌಲಿಂಗ್ ಮತ್ತು ವಾಶಿಂಗ್ಟನ್ ಸುಂದರ್ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಆಸ್ಟೆçÃಲಿಯಾದ ವಿರುದ್ಧ ೫ ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ೫ ಪಂದ್ಯಗಳ ಟಿ೨೦ ಸರಣಿಯಲ್ಲಿ ೧-೧ ಸಮಬಲ ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮೆಲ್ಬರ್ನ್ ನಲ್ಲಿ ನಡೆದ ೨ನೇ ಪಂದ್ಯದಲ್ಲಿ
ಆದ ಸೋಲಿಗೆ ಭಾರತ ತಂಡ ತಿರುಗೇಟು ನೀಡಿದೆ. ಹೋಬರ್ಟ್ ಕ್ರೀಡಾಂಗಣದಲ್ಲಿ ನಡೆದ ಕಳೆದ ೫ ಪಂದ್ಯಗಳಲ್ಲಿ ಆಸ್ಟೆçÃಲಿಯಾ ಗೆಲುವು ಸಾಧಿಸಿತ್ತು. ಇದೀಗ ಭಾರತ ಇಲ್ಲಿ
ಸೋಲಿನ ರುಚಿ ತೋರಿಸಿದೆ.
ಹೋಬರ್ಟ್ ಬೆಲ್ಲಿರೈವ್ ಓವಲ್ ನಲ್ಲಿ ಬಾನುವಾರ ನಡೆದ ೩ನೇ ಟಿ೨೦ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟೆçÃಲಿಯಾ ತಂಡ ನಿಗದಿತ ೨೦ ಓವರ್ ಗಳಲ್ಲಿ ೧೮೬ ರನ್ ಪೇರಿಸಿತು. ಈ ಗುರಿಯನ್ನು ಭಾರತ ತಂಡ ಇನ್ನೂ ೯ ಎಸೆತಗಳು ಬಾಕಿ ಉಳಿದಿರುವಂತೆ ೫ ವಿಕೆಟ್ ನಷ್ಟಕ್ಕೆ ತಲುಪಿತು. ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಅವರು ಸ್ಫೋಟಕ ಆರಂಭ ನೀಡಿದರು. ಕೇವಲ ೧೬ ಎಸತೆಗಳಲ್ಲಿ ೨ ಬೌಂಡರಿ ಮತ್ತು ೨ ಸಿಕ್ಸರ್ ಗಳಿದ್ದ ೨೫ ರನ್ ಗಳಿಸಿದ್ದ ಅವರು ಆಸ್ಟೆçÃಲಿಯಾ ಪಾಳಯವನ್ನು ಅಕ್ಷರಶಃ ನಡುಗಿಸಿದ್ದರು. ಆದರೆ
ತಂಡದ ಮೊತ್ತ ೪ನೇ ಓವರ್ ನಲ್ಲಿ ೩೩ ಆಗಿದ್ದಾಗ ನೇಥನ್ ಎಲ್ಲಿಸ್ ಬೌಲಿಂಗ್ ನಲ್ಲಿ ಮಿಸ್ ಹಿಟ್ ಆಗಿ ಕ್ಯಾಚ್ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು.
ಆ ಬಳಿಕ ಶುಭಮನ್ ಗಿಲ್ ಅವರನ್ನು ಸೇರಿಕೊಂಡ ಸೂರ್ಯಕುಮಾರ್ ಯಾದವ್ ಅವರು ಸಹ ಎರಡು ಭರ್ಜರಿ ಸಿಕ್ಸರ್ ಗಳನ್ನು ಸಿಡಿಸಿ ಪವರ್ ಪ್ಲೇನಲ್ಲಿ ಸ್ಕೋರ್ ಬೋರ್ಡ್ ಅನ್ನು ಚಾಲನೆಯಲ್ಲಿರಿಸಿದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆಸ್ಟೆçÃಲಿಯಾ ತಂಡ ನಿಗದಿತ ೨೦ ಓವರ್ ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೧೮೬ ರನ್ ಕಲೆ ಹಾಕಿತು. ಆತಿಥೇಯ ತಂಡದ ಪರ ಟಿಂ ಡೇವಿಡ್( ೩೮ ಎಸೆತಗಳಲ್ಲಿ ೭೪) ಮತ್ತು ಸ್ಟಯೋನಿಸ್ ಅವರು ಸ್ಱೋಟಕ ಅರ್ಧಶತಕಗಳನ್ನು ಬಾರಿಸಿ ತಂಡಕ್ಕೆ ಆಸರೆಯಾದರು. ಭಾರತದ
ಅರ್ಶದೀಪ್ ಸಿಂಗ್ ಅವರು ಕಾಂಗರೂ ಪಾಳಯದ ೩ ವಿಕೆಟ್ ಗಳನ್ನು ಕಿತ್ತು ಯಶಸ್ವಿ ಬೌಲರ್ ಎನ್ನಿಸಿಕೊಂಡರು. ಅವರಿಗೆ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.



