ತಿ.ನರಸೀಪುರ: ಪುರಸಭಾ ವ್ಯಾಪ್ತಿಯ 23ನೇ ವಾರ್ಡ್ನಲ್ಲಿ ರಸ್ತೆ ಅಭಿವೃದ್ಧಿ ಪ್ರಶ್ನೆ ಇಂದಿಗೂ ಉತ್ತರ ಕಾಣದೆ ಉಳಿದಿದ್ದು, ಸ್ಥಳೀಯ ನಿವಾಸಿಗಳು ದಿನನಿತ್ಯ ನರಕ ಯಾತನೆ ಅನುಭವಿಸುವಂತಾಗಿದೆ. ಹಲವು ವರ್ಷಗಳಿಂದಲೂ ಈ ರಸ್ತೆ ಸಮಸ್ಯೆ ಮುಂದುವರಿದರೂ ಸಂಬAಧಪಟ್ಟ ಅಧಿಕಾರಿಗಳ ನಿರ್ಲಕ್ಷ÷್ಯದಿಂದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂಬ ಆಕ್ರೋಶ ಕೇಳಿಬರುತ್ತಿದೆ.
ತಿ. ನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಈ ವಾರ್ಡ್ನ ಪ್ರಮುಖ ಸಂಪರ್ಕ ರಸ್ತೆಯಾಗಿರುವ ತ್ರಿವೇಣಿ ಮಿಟ್ರಿ ಹೋಟೆಲ್ನಿಂದ ಪಿ.ಎಲ್.ಡಿ ಬ್ಯಾಂಕ್ ಮೂಲಕ ಮಾಧವರಾವ್ ರಸ್ತೆ ಹಾದು ತಾಲ್ಲೂಕು ಆಡಳಿತ ಸೌಧದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗವು ಕಳೆದ 15 ವರ್ಷಗಳಿಂದ ಅಭಿವೃದ್ಧಿಯೇ ಕಾಣದೆ, ಸಾರ್ವಜನಿಕರಿಗೆ ಕಂಟಕವಾಗಿ ಪರಿಣಮಿಸಿದೆ. `ರಸ್ತೆ ಮರೀಚಿಕೆ’ ಎಂಬ ಮಟ್ಟಕ್ಕೆ ಈ ಸಮಸ್ಯೆ ತಲುಪಿರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.
ಪಟ್ಟಣ ಪಂಚಾಯಿತಿ ಅವಧಿಯಿಂ ದಲೇ ನಿರ್ಲಕ್ಷ÷್ಯಕ್ಕೆ ಗುರಿಯಾದ ಈ ರಸ್ತೆ, ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ನಂತರವೂ ಗಮನಕ್ಕೆ ಬಂದಿಲ್ಲ. ಶಾಲೆಗೆ ಹೋಗುವ ಮಕ್ಕಳು, ವಯೋವೃದ್ಧರು ಹಾಗೂ ಮಹಿಳೆಯರು ಪ್ರತಿದಿನ ಅಪಾಯದ ನಡುವೆಯೇ ಸಂಚರಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಮಳೆಗಾಲದಲ್ಲಿ ಈ ರಸ್ತೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಮಳೆ ಸುರಿದಾಗ ಚರಂಡಿ ನೀರು ರಸ್ತೆ ತುಂಬೆಲ್ಲ ಹರಿದು ಸಂಚಾರ ದುಸ್ಥರವಾಗುತ್ತದೆ. ದ್ವಿಚಕ್ರ ವಾಹನ ಸವಾರರಿಗೆ ಇದು ಪ್ರಾಣಾ ಪಾಯದ ಮಟ್ಟಿಗೆ ತಲುಪುತ್ತದೆ. ದಿನನಿತ್ಯ ಬಿದ್ದು ಗಾಯಗೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದೇ ಸಮಸ್ಯೆಯಿಂದಾಗಿ ಮನೆಗಳೊಳಗೆ ಮಳೆ ಮತ್ತು ಚರಂಡಿ ನೀರು ನುಗ್ಗಿ, ಇಲಿ-ಹೆಗ್ಗಣಗಳ ಕಾಟವೂ ಹೆಚ್ಚುತ್ತಿದೆ. ಧಾನ್ಯಗಳ ಹಾನಿ, ಆರೋಗ್ಯ ಸಮಸ್ಯೆಗಳ ಭೀತಿ ಹೆಚ್ಚುತ್ತಿರುವುದರಿಂದ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ವಾರ್ಡ್ ನಿವಾಸಿಗಳು ಹಲವಾರು ವರ್ಷಗಳಿಂದ ರಸ್ತೆ ಅಭಿವೃದ್ಧಿಗಾಗಿ ಕಾಯುತ್ತಿದ್ದು, ಸಂಬAಧಪಟ್ಟ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಹೊಸದಾಗಿ ಅಧಿಕಾರ ಸ್ವೀಕರಿಸಿರುವ ಪುರಸಭೆಯ ಮುಖ್ಯಾಧಿಕಾರಿಗಳು ಸಮಸ್ಯೆ ಕುರಿತು ಮಾಹಿತಿ ಸಂಗ್ರಹಿಸಿ ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದರಿಂದ, ಜನರು ಇನ್ನೊಮ್ಮೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಅಭಿವೃದ್ಧಿ ಎಂಬ ಪ್ರಶ್ನೆಗೆ ಇಂದಿಗೂ ಉತ್ತರವೇ ಇಲ್ಲ!



