ಬೆಂಗಳೂರು: ತಮ್ಮ ಪಕ್ಷದ ಸೂಚನೆಯಂತೆ ತಾವು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೀರಿ. ಇಂದಿನ ತಮ್ಮ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸ ನಾಯಕರನ್ನು ಆರಿಸಲಾಗುತ್ತದೆ ಎಂಬುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ.ತಮ್ಮ ಮುಂದಿನ ದಿನಗಳು ಶುಭಕರವಾಗಿರಲಿ ಎಂದು ನಾನು ಮನ:ಪೂರ್ವಕವಾಗಿ ಹಾರೈಸುತ್ತೇನೆ. ಈ ಸಮಯದಲ್ಲಿ ತಮ್ಮಲ್ಲಿ ಒಂದು ವಿನಮ್ರ ಮನವಿಯನ್ನು ಮಾಡಿಕೊಳ್ಳುತ್ತಿದ್ದೇನೆ. ತಾವು ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಜೊತೆಗೆ ಅದೇ ಸಮಯದಲ್ಲಿ ನಮ್ಮ ರಾಜ್ಯದ ಹಣಕಾಸು ಸಚಿವರೂ ಆಗಿದ್ದಿರಿ. ಇಡೀ ದೇಶದಲ್ಲಿ ದಾಖಲೆ ಸಂಖ್ಯೆಯ ಬಜೆಟ್ ಗಳನ್ನು ಮಂಡಿಸಿದ ಹೆಗ್ಗಳಿಕೆ ನಿಮ್ಮದು. ಒಂದು ರೀತಿಯಲ್ಲಿ ನಮ್ಮ ರಾಜ್ಯದ ಆರ್ಥಿಕ ತಜ್ಞರು ತಾವು.
ಕಳೆದ ವರ್ಷ, 2025 ಡಿಸೆಂಬರ್ 9 ರಂದು, ಬೆಳಗಾವಿಯ #ಸುವರ್ಣಸೌಧ ದಲ್ಲಿ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ, ವಿಧಾನಸಭೆಯಲ್ಲಿ ನಮ್ಮ ಪಕ್ಷದ ಶಾಸಕರಾದ ಶ್ರೀ #ಮಹೇಶ_ಟೆಂಗಿನಕಾಯಿ ರವರು ಒಂದು ಬಹಳ ಮಹತ್ವದ ವಿಚಾರವನ್ನು ಸದನದ ಗಮನಕ್ಕೆ ತಂದರು. ತಮ್ಮ ಪಕ್ಷದ ಚುನಾವಣಾ ಗ್ಯಾರಂಟಿಯಾದ, ಬಹಳಷ್ಟು ಜನರ ಮತವನ್ನು ಗಳಿಸಲು ಸಾಧನವಾಗಿದ್ದ, ಗೃಹಲಕ್ಷ್ಮೀ ಯೋಜನೆಯಲ್ಲಿ ಸಂಭವಿಸಿದ್ದ ಬಹಳ ಗಂಭೀರ ಪ್ರಮಾದವನ್ನು ಅಂದು ಶ್ರೀ ಮಹೇಶ ಟೆಂಗಿನಕಾಯಿ ಪ್ರಸ್ತಾಪಿಸಿದರು.
2025 ಫೆಬ್ರವರಿ ಹಾಗೂ ಮಾರ್ಚಿ ತಿಂಗಳುಗಳ ಗೃಹಲಕ್ಷ್ಮೀ ಯೋಜನೆಯ ಹಣ ರಾಜ್ಯದ ಕುಟುಂಬಗಳಿಗೆ ತಲುಪದಿರುವ ಆರೋಪ ಮಾಡಿದರು. ಇದರ ಒಟ್ಟು ಮೊತ್ತ ರೂ. 5000 ಕೋಟಿ. (#ಹೌದು. #ಐದು_ಸಾವಿರ_ಕೋಟಿ) ) 1.14 ಕೋಟಿ ಗೃಹಲಕ್ಷಿ÷್ಮಯರ ಪಾಲಿಗೆ ಇದೊಂದು ದೊಡ್ಡ ವಂಚನೆ. ತಮ್ಮ ಸಚಿವ ಸಂಪುಟದ ಮಾನ್ಯ ಸಚಿವೆ ಹಣ ಪಾವತಿಯಾಗಿದೆ ಎಂದು ಮೊದಲು ಹೇಳಿದ್ದರು. ಆದರೆ ನನ್ನ ಗೆಳೆಯ ಶಾಸಕ ಪಾವತಿ ಆಗಿಲ್ಲದಿರುವುದನ್ನು ದಾಖಲೆ ಸಮೇತ ಸಭೆಯ ಗಮನಕ್ಕೆ ತಂದು ರೂ. 5000 ಕೋಟಿ ಎಲ್ಲಿ ಹೋಯಿತು ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು. ಅದಕ್ಕೆ ಸರಕಾರದ ನಿರುತ್ತರವೇ ಉತ್ತರವಾಗಿತ್ತು. ಇದು ಸಣ್ಣ ಮೊತ್ತವಲ್ಲ. ಮತ್ತು ಈ ಹಣ ಫಲಾನುಭವಿಗಳಿಗೆ ತಲುಪದಿರುವುದು ಸಣ್ಣ ಪ್ರಮಾದವಲ್ಲ. ರಾಜ್ಯದ ತಿಜೋರಿಯನ್ನೇ ಲೂಟಿ ಹೊಡೆದಿರುವ ಸ್ಪಷ್ಟ ಉದಾಹರಣೆ ಇದು ಎಂದು ಅಂದು ಸದನ ಮತ್ತು ಇಡೀ ರಾಜ್ಯ ಭಾವಿಸಿತು.
ಗೃಹಲಕ್ಷ್ಮೀ ಹಣ ಪಾವತಿ ಸ್ಪಷ್ಟತೆಗೆ ಸುರೇಶ್ಕುಮಾರ್ ಆಗ್ರಹ



