ಬೆಂಗಳೂರು: ಕಾರಣಾಂತರಗಳಿಂದ ನಾಲ್ಕು ವ್ಯಕ್ತಿಗಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.ಗೌರಿಬಿದನೂರು ರೈಲ್ವೆ ಹಳಿ ಮೇಲೆ ರವಿಕುಮಾರ್ 27 ವರ್ಷದ ಯುವಕ ಚಿಕ್ಕಬಳ್ಳಾಪುರ ನಿವಾಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ,.ಮಲ್ಲಸಂದ್ರ ತುಮಕೂರು ರೈಲ್ವೆ ಹಳಿ ಮೇಲೆ ಸಾಧಿಕ್ ತುಮಕೂರು ನಿವಾಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.ಲಕ್ಷ್ಮಮ್ಮ 29 ವರ್ಷದ ಮಹಿಳೆ ಜಡೆ ಗೌಡನಹಳ್ಳಿ, ನಿವಾಸಿ ವೈಟ್ಫೀಲ್ಡ್ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡರೆ, ಚಳ್ಳಕೆರೆ ರಾಣೇಬೆನ್ನೂರು, ಮಧ್ಯೆ ಅಪರಿಚಿತ ವ್ಯಕ್ತಿ 45 ವರ್ಷದ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ನಾಲಕ್ಕು ರೈಲ್ವೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿರುತ್ತದೆ.



