ಗುಜರಾತ್ ಟೈಟಾನ್ಸ್ 3ನೇ ಬಾರಿಗೆ ಐಪಿಎಲ್ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಐಪಿಎಲ್ 2026 ರ ಎರಡನೇ ಕ್ವಾಲಿಫೈಯರ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿತು. ಇದು ಐದು ಆವೃತ್ತಿಗಳಲ್ಲಿ ತಂಡದ ಮೂರನೇ ಫೈನಲ್ ಪ್ರವೇಶವಾಗಿದೆ.

ಇದೀಗ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಗುಜರಾತ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ನಾಯಕ ಗಿಲ್ 215 ರನ್ಗಳ ಗುರಿಯನ್ನು ಬೆನ್ನಟ್ಟುವಾಗ ಅದ್ಭುತ ಶತಕ ಬಾರಿಸಿದರು.
ಈ ಇನ್ನಿಂಗ್ಸ್ ವೈಭವ್ ಸೂರ್ಯವಂಶಿ ಬಾರಿಸಿದ 96 ರನ್ಗಳ ಹೋರಾಟವನ್ನು ಮರೆಮಾಡಿತು.ಈ ಹೈವೋಲ್ಟೇಜ್ ಕದನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 214 ರನ್ ಬಾರಿಸಿ ಗುಜರಾತ್ಗೆ 215 ರನ್ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಗುಜರಾತ್ 18.4 ಓವರ್ಗಳಲ್ಲಿ ಗೆಲುವಿನ ದಡ ಮುಟ್ಟಿತು.
ವೈಭವ್ ಹೋರಾಟ ವ್ಯರ್ಥ: ಗುಜರಾತ್ಗೆ ಫೈನಲ್ ಟಿಕೆಟ್