ಬೆಳಗಾವಿ: ಹೆಚ್ಚಿನ ಬಡ್ಡಿ ಕೊಡುವುದಾಗಿ ಆಮಿಷ ಒಡ್ಡಿ ಜನರಿಂದ 165 ಕೋಟಿ ರೂ. ಹಣ ವಸೂಲಿ ಮಾಡಿ ಇಬ್ಬರು ಆರೋಪಿಗಳು ಪರಾರಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ತಳಕವಾಡಿಯಲ್ಲಿ ಅಪೆಕ್ಸ್ ಜಿಬಿ ಕಾರ್ಪ್ ಎಲ್ಎಲ್ಪಿ ಎಂಬ ಸಂಸ್ಥೆಯನ್ನು ಆರಂಭಿಸಿ 1 ಲಕ್ಷ ರೂಪಾಯಿಗಳಿಗೆ 4 ಪರ್ಸೆಂಟ್ನಂತೆ ಬಡ್ಡಿ ನೀಡುವುದಾಗಿ ಹೇಳಿ ಸುಮಾರು 3500 ಜನರಿಂದ 165 ಕೋಟಿ ರೂಪಾಯಿ ಸಂಗ್ರಹ ಮಾಡಿದ್ದರು ಎಂದು ಹೇಳಲಾಗಿದೆ. ಕಾಶಿನಾಥ್ ವಾಗ್ಮೋರೆ, ಗಣೇಶ್ಭಂಡಾರಿ ಎಂಬುವರ ವಿರುದ್ಧ ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಇಬ್ಬರು ಆರೋಪಿಗಳು ತಳಕವಾಡಿಯಲ್ಲಿದ್ದ ತಮ್ಮ ಕಚೇರಿಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.



