ಬೆಂಗಳೂರು: ಶಿಕ್ಷಕ ಹೊಡೆದರು ಎಂಬ ಕಾರಣಕ್ಕೆ ಬಾಲಕ ಮನನೊಂದು ಮನೆಯಲ್ಲಿ ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನ ಪಾಳ್ಯದಲ್ಲಿ ಜರುಗಿದೆ.ಮನೋರಾಯನ ಪಾಳ್ಯದ ಸೈಂಟ್ ಫಿಲೋಮಿನಾ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ಸಮರ್ಥ್(17) ಆತ್ಮಹತ್ಯೆಗೆ ಯತ್ನಿಸಿರುವ ದುರ್ದೈವಿ ಬಾಲಕನಾಗಿದ್ದಾನೆ.ಪೊಲೀಸರಿಗೆ ಬಂದ ಮಾಹಿತಿ ಪ್ರಕಾರ 13 ವರ್ಷದ ಸಮರ್ಥ್ ಮತ್ತು ಆತನ ಸ್ನೇಹಿತರು ಶಾಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡರು ಎಂಬ ವಿಷಯಕ್ಕೆ ಶಿಕ್ಷಕ ವಿದ್ಯಾರ್ಥಿಗೆ ಬೆನ್ನು ಹಾಗೂ ಮೈ ಮೇಲೆ ಬಾಸುಂಡೆ ಬರುವ ಹಾಗೆ ಹೊಡೆದ ಮೇರೆಗೆ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿರುತ್ತಾರೆ.



