ಕ್ರೀಡೆ: ಭಾರತ ಮತ್ತು ಇಂಗ್ಲೆAಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಇಂಗ್ಲೆಂಡ್ 258 ರನ್ ಗಳಿಸಿದರೆ, ಭಾರತ ಶುಭ್ಮನ್ ಗಿಲ್ (80 ರನ್ ರಿಟೈಡ್ ಹರ್ಟ್) ಮತ್ತು ಅಕ್ಷರ್ ಪಟೇಲ್ (50 ರನ್, 4 ವಿಕೆಟ್) ಅವರ ಆಲ್ರೌಂಡ್ ಪ್ರದರ್ಶನದಿಂದ ಜಯ ಗಳಿಸಿತು. ಈ ಗೆಲುವಿನೊಂದಿಗೆ ಭಾರತ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ. ಇದು ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಮೊದಲ ಗೆಲುವಾಗಿದೆ.ಭಾರತ ಮತ್ತು ಇಂಗ್ಲೆAಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಿದೆ. ಮಂಗಳವಾರ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆAಡ್ ತಂಡವನ್ನು ಮಣಿಸಿದ ಟೀಂ ಇಂಡಿಯಾ ಸರಣಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಇದರ ಜೊತೆಗೆ ಇಂಗ್ಲೆಂಡ್ ಪ್ರವಾಸದಲ್ಲಿ ಮೊದಲ ಗೆಲುವನ್ನು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡವು 47.5 ಓವರ್ಗಳಲ್ಲಿ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 258 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್, ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್ ಅವರ ಅರ್ಧಶತಕದ ನೆರವಿನಿಂದ 45.2 ಓವರ್ಗಳಲ್ಲಿ ಕೇವಲ 4 ವಿಕೆಟ್ಗಳನ್ನು ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು.ಇಂಗ್ಲೆಂಡ್ಗೆ ಉತ್ತಮ ಆರಂಭ: ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆAಡ್ 47.5 ಓವರ್ಗಳಲ್ಲಿ 258 ರನ್ಗಳಿಗೆ ಆಲೌಟ್ ಆಯಿತು. ಆದಾಗ್ಯೂ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಬೆನ್ ಡಕೆಟ್ ಮತ್ತು ಜಾಕೋಬ್ ಬೆಥೆಲ್ ಮೊದಲ ವಿಕೆಟ್ಗೆ 61 ರನ್ಗಳ ಪಾಲುದಾರಿಕೆಯನ್ನು ಹಂಚಿಕೊAಡರು. ಆದರೆ ಇವರಿಬ್ಬರು ಔಟಾದ ಬಳಿಕ ಇಂಗ್ಲೆಂಡ್ ಮಧ್ಯಮ ಕ್ರಮಾಂಕ ಕೂಡ ಬೇಗನೇ ಪೆವಿಲಿಯನ್ ಸೇರಿಕೊಂಡಿತು. ಜಾಕೋಬ್ ಬೆಥೆಲ್ 14 ರನ್ಗಳಿಗೆ ಔಟಾದರೆ, ಬೆನ್ ಡಕೆಟ್ 45 ಎಸೆತಗಳಲ್ಲಿ 46 ರನ್ಗಳಿಗೆ ಔಟಾದರು. ಅದರ ನಂತರ ನಾಲ್ಕು ವಿಕೆಟ್ಗಳು ಬೇಗನೇ ಪತನಗೊಂಡವು.7ನೇ ವಿಕೆಟ್ಗೆ ಶತಕದ ಜೊತೆಯಾಟ: ಆದರೆ 7ನೇ ವಿಕೆಟ್ಗೆ ಜೊತೆಯಾದ ಲಿಯಾಮ್ ಡಾಸನ್ ಮತ್ತು ಜೋ ರೂಟ್ ತಂಡವನ್ನು ಸಂಕಷ್ಟದಿAದ ಹೊರತಂದರು. ಇವರಿಬ್ಬರು ಅರ್ಧಶತಕದ ಇನ್ನಿಂಗ್ಸ್ ಕೂಡ ಆಡಿದರು. ಹಾಗೆಯೇ ಇಬ್ಬರ ನಡುವೆ 134 ಎಸೆತಗಳಲ್ಲಿ 121 ರನ್ಗಳ ಪಾಲುದಾರಿಕೆ ಇತ್ತು. ಒಂದು ಹಂತದಲ್ಲಿ ಇಂಗ್ಲೆAಡ್ 107 ರನ್ಗಳಿಗೆ 6 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಅಲ್ಲಿಂದ ಇವರಿಬ್ಬರು ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಲಿಯಾಮ್ ಡಾಸನ್ 68 ರನ್ ಬಾರಿಸಿದರೆ, ಜೋ ರೂಟ್ 76 ರನ್ ಬಾರಿಸಿ ಅಜೇಯರಾಗಿ ಉಳಿದರು. ಭಾರತದ ಪರ ಅಕ್ಷರ್ ಪಟೇಲ್ 4 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ ಮತ್ತು ಗುರ್ನೂರ್ ಬ್ರಾರ್ ತಲಾ 2 ವಿಕೆಟ್ ಪಡೆದರು. ಜಸ್ಟ್ರಿತ್ ಬುಮ್ರಾ ಮತ್ತು ಶಿವಂ ದುಬೆ ತಲಾ 1 ವಿಕೆಟ್ ಪಡೆದರು.ಬೇಗನೇ ಔಟಾದ ರೋಹಿತ್ ಕೊಹ್ಲಿ: ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅನುಭವಿ ರೋಹಿತ್ ಶರ್ಮಾ 11 ರನ್ಗಳಿಗೆ ಔಟಾದರೆ, ಆ ನಂತರ ಬಂದ ವಿರಾಟ್ ಕೊಹ್ಲಿ ಕೂಡ ಕೇವಲ 5 ರನ್?ಗಳಿಗೆ ಔಟಾದರು. ಇಲ್ಲಿಂದ ಜೊತೆಯಾದ ನಾಯಕ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಮೂರನೇ ವಿಕೆಟ್ಗೆ ಶತಕದ ಜೊತೆಯಾಟ ಕಟ್ಟಿದರು. ಇದೇ ವೇಳೆ ನಾಯಕ ಗಿಲ್ ಅರ್ಧಶತಕದ ಗಡಿ ಕೂಡ ದಾಟಿದರು. ಅದ್ಭುತ ಇನ್ನಿಂಗ್ಸ್ ಕಟ್ಟುತ್ತಾ ಶತಕದಗತ್ತ ಸಾಗುತ್ತಿದ್ದ ಗಿಲ್ ಗಾಯದಿಂದಾಗಿ ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ರಿಟೈಡ್ ಹರ್ಟ್ ಆಗಿ ಡಗೌಟ್ ಸೇರಿಕೊಂಡರು. ಈ ಹಂತದಲ್ಲಿ ಗಿಲ್ 80 ರನ್ ಬಾರಿಸಿದ್ದರು.ಗಿಲ್, ಅಕ್ಷರ್ ಅರ್ಧಶತ: ಗಿಲ್ ನಿರ್ಗಮನದ ನಂತರ ಶ್ರೇಯಸ್ ಅಯ್ಯರ್ ರನೌಟ್?ಗೆ ಬಲಿಯಾದರು. ಆ ನಂತರ ಬಂದ ರಾಹುಲ್ ಅವರ ಇನ್ನಿಂಗ್ಸ್ ಕೂಡ ಕೇವಲ 1 ರನ್?ಗೆ ಅಂತ್ಯವಾಯಿತು. 5ನೇ ವಿಕೆಟ್?ಗೆ ಜೊತೆಯಾದ ಸುಂದರ್ ಹಾಗೂ ಅಕ್ಷರ್ ಪಟೇಲ್ ತಂಡದ ಇನ್ನಿಂಗ್ಸ್ ಕಟ್ಟಿದರು. ಇದೇ ವೇಳೆ ಇಬ್ಬರು ಕೂಡ ತಮ್ಮ ಅರ್ಧಶತಕವನ್ನು ಪೂರೈಸಿದರು. ಇವರಿಬ್ಬರು ಕೊನೆಯವರೆಗೂ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಸುಂದರ್ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಡುವುದರ ಜೊತೆಗೆ ತಮ್ಮ ಅರ್ಧಶತಕವನ್ನು ಪೂರೈಸಿದರು. ಇತ್ತ ಅಕ್ಷರ್ 57 ರನ್ ಬಾರಿಸಿ ಅಜೇಯರಾಗಿ ಉಳಿದರು.



