ಬೆಂಗಳೂರು: ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಏರ್ಪಡಿಸಿದ್ದ ನಾರಿ ಶಕ್ತಿ ಮತ್ತು ನಾಡ ಕೀರ್ತಿ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ನಾಡಿನ ಅಭ್ಯುದಯದಲ್ಲಿ ಸಾಧಕರ ಪಾತ್ರ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಅನಾದಿಕಾಲದಿಂದಲೂ ನಾರಿ ಶಕ್ತಿಗೆ ವಿಶೇಷವಾದ ಸ್ಥಾನಮಾನ ಇದೆ ಅದು ಮುಂದುವರೆದು ಇಂದು ಜಗತ್ತಿನ ಎಲ್ಲಾ ರಂಗಗಳಲ್ಲಿಯೂ ನಾರಿ ತನ್ನ ಶಕ್ತಿ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯಿಂದ ಜಗತ್ತಿನ ಅಭ್ಯುದಯಕ್ಕೆ ತನ್ನ ಕೊಡುಗೆಯನ್ನು ನೀಡುತ್ತಿದ್ದಾಳೆ. ಇಂತಹ ಸಮಾರಂಭಗಳಲ್ಲಿ ಮಹಿಳೆಯರನ್ನು ಗೌರವಿಸುತ್ತಿರುವುದು ಅತೀವ ಸಂತಸ ತಂದಿದೆ ಎಂದರು.ಇಂದು ಸಂಜೆ ಪತ್ರಿಕೆಯ ಪ್ರಧಾನ ವ್ಯವಸ್ಥಾಪಕ
ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜ್ ಅವರು ಮಾತನಾಡುತ್ತಾ “ಸಾಂಸ್ಕೃತಿಕ ಸಿರಿವಂತಿಕೆ
ಯನ್ನು ಉಳಿಸುವುದು ನಮ್ಮ ಆಚಾರ ಮತ್ತು ವಿಚಾರ ಅದರಲ್ಲಿಯೂ ಪರಂಪರಾನುಗತವಾಗಿ ರಾಜ ಮಹಾರಾಜರುಗಳು ಅತ್ಯಂತ ಗೌರವದಿಂದ ನಡೆಸಿಕೊಂಡು ಬಂದ ಸನ್ಮಾನ ಪುರಸ್ಕಾರಗಳ ಸಂಪ್ರದಾಯವನ್ನು ಆತ್ಮಶ್ರೀ ಪ್ರತಿಷ್ಠಾನ ಮುಂದು
ವರಿಸುತ್ತಿರುವುದು ನಾಡಿನ ಹಿರಿಯರು ಹಾಕಿಕೊಟ್ಟ ಸಂಪ್ರದಾಯಕ್ಕೆ ಗೌರವ ಎಂದು ಬಣ್ಣಿಸಿದರು.
ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಡಾ. ಗುಣವಂತ ಮಂಜು ಮಾತನಾಡಿ ಇದೊಂದು ಸಾಂಸ್ಕೃತಿಕ ಯಘ್ನ ಇದರಲ್ಲಿ ಭಾಗಿ ಆಗುತ್ತಿರುವ ಸಾಧಕರು ನಾಡಿನ ವಿವಿಧ ರಂಗಗಳನ್ನು ತಮ್ಮ ಸೇವೆಯಿಂದ ಬೆಳಗಿ ಕೀರ್ತಿ ತಂದವರಿಗೆ ನಾವು ನೀಡುತ್ತಿರುವುದು ಒಂದು ಸಣ್ಣ ಕಾಣಿಕೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆಧ್ಯಾತ್ಮ ಚಿಂತಕರಾದ ವೇದಮೂರ್ತಿ ಶಿವರುದ್ರ ಸ್ವಾಮಿ ರವರು ವಹಿಸಿದ್ದರು. ಅಧ್ಯಕ್ಷತೆಯನ್ನು ಬೆಂಗಳೂರು ದೂರದರ್ಶನ ಮತ್ತು ಆಕಾಶವಾಣಿಯ ನಿಕಟ ಪೂರ್ವ ನಿರ್ದೇಶಕರಾದ ಡಾ. ನಿರ್ಮಲ ಸಿ ಎಲಿಗಾರ್ ವಹಿಸಿದ್ದರು. ನಿರ್ಮಲ ಅವರು ಮಾತನಾಡುತ್ತಾ ಇದೊಂದು ಸಾಂಪ್ರದಾಯಿಕ ಕಾರ್ಯಕ್ರಮ ಶಿಸ್ತುಭದ್ಧ ಕಾರ್ಯಕ್ರಮ ಗುಣವಂತ ಮಂಜು ಅವರು ಪ್ರಾಂಶುಪಾಲರAತೆ ನಾವು ಕಾಲೇಜು ವಿದ್ಯಾರ್ಥಿಗಳಂತೆ ಎಂದು ತಮ್ಮ ವಿದ್ಯಾರ್ಥಿ ಜೀವನವನ್ನು ನೆನಪು ಮಾಡಿಕೊಂಡರು. ನಾರಿ ಶಕ್ತಿ ಎಂದರೆ ಅದೊಂದು ಎಷ್ಟೇ ಬಣ್ಣಿಸಿದರು ಪದಗಳಿಗೆ ನಿಲುಕೋದ ಅನನ್ಯವಾದ ಅನುಭೂತಿ ಭಕ್ತಿ ಮತ್ತು ತನ್ಮಯತೆ ಈ ಪ್ರಶಸ್ತಿಯಲ್ಲಿ ಅಡಗಿದೆ ಎಂದರು.
ನಾರಿ ಶಕ್ತಿ ಪ್ರಶಸ್ತಿಗೆ ಡಾ ಜಿ ವೈ ಪದ್ಮ ನಾಗರಾಜ್,
ಚಿತ್ರನಟಿ ಭೂಮಿಕ, ಚಿತ್ರನಟಿ ಪವಿತ್ರ ಹಿರೇಮಠ, ಕರುಣಾ ಕೆಂಪಯ್ಯ, ನಿರ್ಮಲ ಎಲಿಗಾರ್ ಮುಂತಾದ
ವರು ಬಾಜಿನರಾದರು. ಮುಖ್ಯ ಅತಿಥಿಗಳಾಗಿ ಬಾ. ಕರುಣ ರತ್ನ ವೀರ ಕೆಂಪಯ್ಯ, ಡಾ. ಸಂಕಲ್ಪ ನರಸಿಂಹಮೂರ್ತಿ, ಶ್ರೀ ಗೋವಿಂದಹಳ್ಳಿ ಕೃಷ್ಣೇಗೌಡ, ಡಾ. ಪದ್ಮನಾಭ ಶ್ರೇಷ್ಟಿ, ಸಾಹಿತಿ ಎಂ ವಿಶ್ವನಾಥ್, ಶ್ರೀ ಎ ಎಂ ನಾಗರಾಜ್, ಡಾ. ವೆಂಕಟ ರಾಮಾಂಜನೇಯ ಸ್ವಾಮಿ, ಬಿ ಆರ್ .ಪ್ರದೀಪ್ ಕುಮಾರ್, ಡಾ. ಟಿ .ಗೋವಿಂದರಾಜು ಮುಂತಾದವರು ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷರಾದ ವರಲಕ್ಷಿ÷್ಮ ಗುಣವಂತ ಮಂಜು ಕಾರ್ಯಕ್ರಮವನ್ನು ನಿರ್ವಹಿಸಿದರು. ಶ್ರೀಮತಿ ಶಿಲ್ಪ ಕೃಷ್ಣಮೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು. ನಾಡಿನ ವಿವಿಧ ಕ್ಷೇತ್ರದ ಮಹಿಳಾ ಸಾಧಕರಿಗೆ “ನಾರಿ ಶಕ್ತಿ” ಮತ್ತು ಪುರುಷ ಸಾಧಕರಿಗೆ “ನಾಡ ಕೀರ್ತಿ” ರಾಜ್ಯ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಪುರಸ್ಕರಿಸಲಾಯಿತು.
ಸಾಂಸ್ಕೃತಿಕ ಯಜ್ಞದಲ್ಲಿ ಪಾಲ್ಗೊಂಡ ಸಾಧಕರು ನಾಡಿನ ಕೀರ್ತಿ: ಡಾ. ಗುಣವಂತ ಮಂಜು



