ಮಹತ್ವದ ಬೆಳವಣಿಗೆಯೊಂದರಲ್ಲಿ ರಿಷಭ್ ಪಂತ್ ಅವರು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ನಾಯಕತ್ವ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಐSಉ ಫ್ರಾಂಚೈಸಿ ರಿಷಭ್ ಪಂತ್ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ. ಐಪಿಎಲ್ 2026ರ ಪಂದ್ಯಾವಳಿಯಲ್ಲಿ ಎಲ್ಎಸ್ಜಿ ತಂಡ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
ತಂಡದ ಕಳಪೆ ಪ್ರದರ್ಶನದ ನೈತಿಕ ಹೊಣೆಹೊತ್ತು ರಿಷಭ್ ಪಂತ್ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಫ್ರಾಂಚೈಸಿ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದು, ಈ ಕುರಿತು ಅಧಿಕೃತ ಪ್ರಕಟಣೆಯನ್ನೂ ಹೊರಡಿಸಿದೆ.
ಕೇವಲ ಎಲ್ಎಸ್ಜಿ ಮಾತ್ರವಲ್ಲದೇ ಈ ಬಾರಿಯ ಐಪಿಎಲ್ನಲ್ಲಿ ಖುದ್ದು ರಿಷಭ್ ಪಂತ್ ಕೂಡ ಕಳಪೆ ಪ್ರದರ್ಶನ ತೋರಿದ್ದರು. ಆಡಿದ 14 ಪಂದ್ಯಗಳ ಪೈಕಿ ರಿಷಭ್ ಪಂತ್ ಕೇವಲ 312 ರನ್ ಬಾರಿಸಿದ್ದರಲ್ಲದೇ, ಕೇವಲ 68 ರನ್ ಅವರ ಅತ್ಯಧಿಕ ಸ್ಕೋರ್ ಆಗಿತ್ತು. ಇಡೀ ಪಂದ್ಯಾವಳಿಯಲ್ಲಿ ರಿಷಭ್ ಪಂತ್ ಕೇವಲ ಒಂದು ಅರ್ಧಶತಕ ಬಾರಿಸಿದ್ದಾರೆ.
ಅಷ್ಟೇ ಅಲ್ಲದೇ ಎಲ್ಎಸ್ಜಿ ಒಂದು ತಂಡವಾಗಿ ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ಸಂಪೂರ್ಣವಾಗಿ ವಿಫಲವಾಗಿತ್ತು. ಆಡಿದ ಒಟ್ಟು 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದಿದ್ದ ಎಲ್ಎಸ್ಜಿ, 10 ಪಂದ್ಯಗಳಲ್ಲಿ ಹೀನಾಯವಾಗಿ ಸೋಲು ಕಂಡಿತ್ತು. ಎಲ್ಎಸ್ಜಿ ಕಳಪೆ ಪ್ರದರ್ಶನದ ಕಾರಣಕ್ಕೆ ರಿಷಭ್ ಪಂತ್ ನಾಯಕತ್ವ ತ್ಯಜಿಸುವಂತೆ ಒತ್ತಡ ಕೇಳಿಬರುತ್ತಲೇ ಇತ್ತು. ಅನೇಕ ಮಾಜಿ ಆಟಗಾರರು ಮತ್ತು ವಿಶ್ಲೇಷಕರು ರಿಷಭ್ ಪಂತ್ ಎಲ್ಎಸ್ಜಿ ನಾಯಕತ್ವ ತ್ಯಜಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಂತೆ ಒಂದು ಕಾಲದಲ್ಲಿ ಐಪಿಎಲ್ ಆಟದ ಜಾದೂಗಾರ ಎನಿಸಿಕೊಂಡಿದ್ದ ರಿಷಭ್ ಪಂತ್, ಎಲ್ಎಸ್ಜಿ ನಾಯಕತ್ವ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ರಿಷಭ್ ಪಂತ್ ಅವರ ರಾಜೀನಾಮೆಯನ್ನು ಅಂಗೀಕರಿಸಿರುವ ಎಲ್ಎಸ್ಜಿ ಫ್ರಾಂಚೈಸಿ, ತಂಡವನ್ನು ಮರುಸಂಘಟಿಸುವುದಾಗಿ ಹೇಳಿದೆ.
“ಲಕ್ನೋ ಸೂಪರ್ ಜೈಂಟ್ಸ್ (ಐSಉ) ರಿಷಭ್ ಪಂತ್ ಫ್ರಾಂಚೈಸಿಯ ನಾಯಕತ್ವದ ಕರ್ತವ್ಯಗಳಿಂದ ಬಿಡುಗಡೆ ಹೊಂದಲು ವಿನಂತಿಸಿದ್ದಾರೆ ಮತ್ತು ಫ್ರಾಂಚೈಸಿ ಅವರ ವಿನಂತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ವೀಕರಿಸಿದೆ” ಎಂದು ಎಲ್ಎಸ್ಜಿ ತನ್ನ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದೆ.
LSG ನಾಯಕತ್ವಕ್ಕೆ ಗುಡ್ಬೈ ಹೇಳಿದ ರಿಷಭ್ ಪಂತ್



