ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಸದ್ಯಕ್ಕೀಗ `ಪೆದ್ದಿ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟಿಸಿರುವ `ಪೆದ್ದಿ’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಜೂನ್ 5ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಹೀಗಾಗಿ ಜಾಹ್ನವಿ ಕಪೂರ್ ಹಾಗೂ ರಾಮ್ ಚರಣ್ ಇಬ್ಬರೂ ಬ್ಯಾಕ್ ಟು ಬ್ಯಾಕ್ ಪ್ರಚಾರದಲ್ಲಿ ಬ್ಯುಸಿಯಾಗಿ ಇದ್ದಾರೆ. ಜಾಹ್ನವಿ ಕಪೂರ್ ಸಂದರ್ಶನವೊAದರಲ್ಲಿ ತನ್ನ ಬದುಕಿನ ಕೆಲವು ಇಂಟ್ರೆಸ್ಟಿAಗ್ ಸ್ಟೋರಿಗಳನ್ನು ಹೇಳಿಕೊಂಡಿದ್ದಾರೆ. ಅದರಲ್ಲೂ ಜಾಹ್ನವಿ ಕಪೂರ್ ತಮ್ಮ ತಾಯಿ ಶ್ರೀದೇವಿ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊAಡಿದ್ದಾರೆ.
ಜಾಹ್ನವಿ ಬಾಲ್ಯದಲ್ಲಿ ಅವರೊಂದಿಗೆ ಕಳೆದ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ಅಲ್ಲದೇ ತಾಯಿ ಶ್ರೀದೇವಿ ಪರಂಪರೆಯನ್ನು ತನಗಷ್ಟೇ ಅಲ್ಲ, ಬೇರೆ ಯಾರಿಗೂ ಮರು ಸೃಷ್ಟಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಶ್ರೀದೇವಿ ಜನಪ್ರಿಯತೆ ಬಗ್ಗೆ ಜಾಹ್ನವಿ ಕಪೂರ್ಗೆ ಕಿಂಚಿತ್ತೂ ಗೊತ್ತಿರಲಿಲ್ವಂತೆ. ಚಿತ್ರರಂಗಕ್ಕೆ ಕಾಲಿಡೋವರೆಗೂ ಅದರ ಅನುಭವ ಆಗುವುದಕ್ಕೂ ಬಿಟ್ಟಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. “ನಾನು ಈ ಸಿನಿಮಾ ರಂಗದಲ್ಲಿ ಕೆಲಸ ಮಾಡುವುದಕ್ಕೆ ಶುರು ಮಾಡಿದ ಮೇಲೆ ನನಗೆ ಅಮ್ಮನ ಜನಪ್ರಿಯತೆ ಎಷ್ಟಿದೆ ಅವರ ಮೇಲೆ ಜನರು ಇಟ್ಟಿರುವ ಪ್ರೀತಿ ಎಂತಹದ್ದು ಅನ್ನೋದು ಅರ್ಥ ಆಗುವುದಕ್ಕೆ ಶುರುವಾಗಿತ್ತು. ಅಮ್ಮ ನಮ್ಮನ್ನು ಈ ಸಿನಿಮಾ ಪ್ರಪಂಚದಿAದ ತುಂಬಾ ದೂರವೇ ಇಟ್ಟಿದ್ದರು” ಎಂದು ಹೇಳಿಕೊಂಡಿದ್ದಾರೆ.
ಮಾರ್ಕೆಟ್ಗೆ ಹೋಗಿ ಮೀನು ತರ್ತಿದ್ರು ಶ್ರೀದೇವಿ ಲೇಡಿ ಸೂಪರ್ಸ್ಟಾರ್ ಆಗಿದ್ದರೂ ಮೀನು ಮಾರ್ಕೆಟ್ಗೆ ಹೋಗುತ್ತಿದ್ದರು ಅನ್ನೋ ಸಂಗತಿಯನ್ನು ಹಂಚಿಕೊAಡಿದ್ದಾರೆ. ” ಪ್ರತಿ ಶುಕ್ರವಾರ ಮೀನಿನ ಮಾರ್ಕೆಟ್ಗೆ ಹೋಗಿ ಒಳ್ಳೆಯ ಮೀನನ್ನು ಆರಿಸಿಕೊಂಡು ಬರೋರು. ಅದನ್ನು ಅವರು ತುಂಬಾನೇ ಖುಷಿಯಿಂದ ಮಾಡೋರು. ಆ ವೇಳೆ ನಮಗೆ ಅವರ ಗ್ಲಾಮರಸ್ ಮುಖ ಕಾಣಿಸುತ್ತಿರಲಿಲ್ಲ. ನಮ್ಮ ಪಾಲಿಗೆ ಅವರು ಸೂಪರ್ವುಮನ್ ನಂತೆ ಕಾಣಿಸುತ್ತಿದ್ದರು” ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ.
ಅಮ್ಮ ಲೆಗಸಿ ಮರು ಸೃಷ್ಟಿಸಲು ಸಾಧ್ಯವಿಲ್ಲ ಇದೇ ಸಂದರ್ಶನದಲ್ಲಿ ತಾಯಿ ಸಾಧನೆಯ ಮರು ಸೃಷ್ಟು ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. “ನನ್ನ ಅಮ್ಮ ಇಷ್ಟು ದೊಡ್ಡ ಸಾಧನೆ ಮಾಡಿದ್ದಾರೆ. ಜನರಿಂದ ಪ್ರೀತಿ ಸಂಪಾದನೆ ಮಾಡಿದ್ದಾರೆ ಅನ್ನೋದೇ ನಮಗೆ ಆಶೀರ್ವಾದ. ಆದರೆ, ಅವರು ಸೃಷ್ಟಿಸಿದ ಲೆಗಸಿಯನ್ನು ಮರು ಸೃಷ್ಟಿ ಮಾಡುವುದು ನನಗೆ ಸಾಧ್ಯವಿಲ್ಲ. ಅಷ್ಟೇ ಅಲ್ಲ, ಬೇರೆ ಯಾರಿಂದಲೂ ಸಾಧ್ಯವಿಲ್ಲ” ಎಂದು ಜಾಹ್ನವಿ ಕಪೂರ್ ಅಭಿಪ್ರಾಯ ಪಟ್ಟಿದ್ದಾರೆ.
ಪ್ರತಿ ಶುಕ್ರವಾರ ಮಾರ್ಕೆಟ್ಗೆ ಹೋಗಿ ಮೀನು ತರ್ತಿದ್ರು ಶ್ರೀದೇವಿ: ನಟಿ ಜಾಹ್ನವಿ ಕಪೂರ್



