ಏಪ್ರಿಲ್ 22ರಂದು ನಡೆಯುವ ಸಾಮಾಜಿಕ ಸಾಮರಸ್ಯದ ಹರಿಕಾರ ರಾಮಾನುಜರ 1009ನೇ ಜಯಂತ್ಯುತ್ಸವಕ್ಕೆ ಮೇಲುಕೋಟೆ ಸಜ್ಜುಗೊಂಡಿದೆ, ಪೂರ್ವಭಾವಿಯಾಗಿ ಇಂದು ಏಪ್ರಿಲ್21ರಂದು ಮಹಾರಥೋತ್ಸವ ನಡೆಯುತ್ತಿದೆ ಮೇಲುಕೋಟೆ ರಾಮಾನುಜಾಚಾರ್ಯರ ಕರ್ಮಭೂಮಿಯಾಗಿ ಕರ್ನಾಟಕದಲ್ಲಿ ಸಾಧನಾಕೇಂದ್ರವೆನಿಸಿತು. ತನ್ನಿಮಿತ್ತ ಈ ಲೇಖನ.ಆಚಾರ್ಯ ರಾಮಾನುಜರು ಸಾವಿರವರ್ಷಗಳ ಹಿಂದೆ ಹಾಕಿಕೊಟ್ಟ ಜಾತ್ಯತೀತ ಸಾಮರಸ್ಯದ ಬದುಕು, ಭಕ್ತಿಮಾರ್ಗದ ಮೆಲಕು ಹಾಗೂ ದೇವಾಲಯಗಳನ್ನು ಸಮಾಜಮುಖಿಯನ್ನಾಗಿ ಕೊಂಡೊಯ್ದು ವ್ಯಕ್ತಿನಿಷ್ಟೆಯ ಬದಲಿಗೆ ಸಮಾಜಾಭಿವೃದ್ದಿಗೆ ಕೇಂದ್ರೀಕರಿಸಿದ ಚಿಂತನೆಗಳು ಇಂದಿಗೂ ಪ್ರಸ್ತುತವೆನಿಸಿವೆ. ರಾಮಾನುಜರ ವಿಚಾರಧಾರೆಗಳು ಕೇವಲ ಒಂದು ವರ್ಗಕ್ಕೆ ಸೀಮಿತವಾಗದೆ ಇಡೀ ಸಮಾಜದ ಹಿತಕ್ಕೆ ಪೂರಕವಾಗಿತ್ತು ಎಂಬುದು ಅವರಜೀವನದ ಸತ್ಯಸಂಗತಿಗಳ ಅನಾವರಣವಾಗಿದೆ. ಬಸವಣ್ಣ, ಮಹಾತ್ಮಗಾಂದೀಜಿ ಡಾ.ಬಿ.ಆರ್ಅಂಬೇಡ್ಕರ್ಗಿAತಲೂ ಬಹಳ ಹಿಂದೆಯೇ ಸಾಮಾಜಿಕ ಸಾಮರಸ್ಯವನ್ನು ಪ್ರತಿಪಾಧಿಸಿ ಅಂದಿನಬಿಗಿಯಾದ ಸಾಮಾಜಿಕ ಕಟ್ಟುಪಾಡುಗಳ ನಡುವೆಯೂ ಖುದ್ದು ನಿಂತು ಅನುಷ್ಠಾನಕ್ಕೆ ತಂದ ಮೊದಲಿಗರು ಜೀವನಪರಿಷ್ಕಾರದ ಹರಿಕಾರ ರಾಮಾನುಜಾಚಾರ್ಯರೆಂಬುದು ಐತಿಹಾಸಿಕ ಸತ್ಯವಾಗಿದೆ.
11ನೇ ಶತಮಾನದಲ್ಲಿ ತೀವ್ರವಾದ ರಾಜಕೀಯ ಮತ್ತು ಧರ್ಮದ ನಂಬಿಕೆಯಲ್ಲಿ ಏರುಪೇರುಗಳಾದಾಗ ಗೊಂದಲಕ್ಕೊಳಗಾದ ಜನಸಾಮಾನ್ಯರಿಗೆ ಭಾರತೀಯ ಸನಾತನಸಂಸ್ಕೃತಿ ಆಚಾರವಿಚಾರಗಳ ಮತ್ತು ಸಂಸ್ಕಾರಗಳ ಚಿಂತನೆಯ ಅರಿವು ಬೇಕಾಗಿತ್ತು. ಈ ವೇಳೆ ಉದಯಿಸಿದ ರಾಮಾನುಜನೆಂಬ ಸೂರ್ಯ ಆದ್ಯಾತ್ಮ ಮತ್ತು ಭಕ್ತಿಸುಧೆಯ ಮಹತ್ವವನ್ನು ಸಾಮಾಜಿಕಸಾಮರಸ್ಯದ ಚಿಂತನೆಯೊಂದಿಗೆ ಸಾರುವ ಮೂಲಕ ನವಸಮಾಜದ ಉದಯಕ್ಕೆ ಕಾರಣವಾದರು.
ಭಗವಂತನ ದೃಷ್ಟಿಯಲ್ಲಿ ಇರುವೆಯಿಂದ ಬ್ರಹ್ಮನವರೆಗೆ ಎಲ್ಲರೂ ಸಮಾನರೂ ಮತ್ತು ಭಗವಂತನ ಕೃಪೆಗೆ ಪಾತ್ರರು ಎಂದ ಆಚಾರ್ಯರಾಮಾನುಜರು ಅಂದಿನ ಬಿಗಿಯಾದ ಸಾಮಾಜಿಕ ಕಟ್ಟುಪಾಡುಗಳ ನಡುವೆಯೂ ಹರಿಜನರಿಗೆ ದೇವಾಲಯ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಿ ಪ್ರಮುಖ ದೇವಾಲಯಗಳಲ್ಲಿ ಸೇವೆಗೆ ಅವಕಾಶ ನೀಡಿದರು. ಅವರನ್ನು “ತಿರುಕುಲತ್ತಾರ್” ಅಂದರೆ ಹರಿಕುಲದವರು ಎಂದು ನಾಮಕರಣ ಮಾಡಿ ಗೌರವಿಸಿದರು. ಹೀಗೆ ಸಮಾಜದ ಹಿತಕ್ಕೆ ಸಮಾನತೆ ಮುಖ್ಯ ಎಂದು ಸಾರಿದ ಪ್ರಮುಖ ಆಚಾರ್ಯರು ರಾಮಾನುಜರು.ಉತ್ಸವಗಳ ಹರಿಕಾರ ರಾಮಾನುಜರು: ಉತ್ತರದಿಂದ ಬೀಸಿದ ನಾಸ್ತೀಕವಾದದ ಗಾಳಿಯನ್ನು ಸಮರ್ಥವಾಗಿ ತಡೆಗಟ್ಟಿದ ರಾಮಾನುಜಾಚಾರ್ಯರು ಧರ್ಮದ ಚೌಕಟ್ಟಿನಲ್ಲಿ ಕುಟುಂಬ, ಪರಿವಾರ, ಸಮಾಜದ ಅಭಿವೃದ್ಧಿಯ ಚಿಂತನೆಗಳನ್ನು ಮೂಡಿಸಿದ ಪರಿಣಾಮ ದೇವಾಲಯಗಳು ಸಮಾಜದ ಕೇಂದ್ರವಾದವು. ದೇವಾಲಯದಲ್ಲಿ ಎಲ್ಲಾ ಹದಿನೆಂಟು ಜಾತಿಯವರ ಸೇವೆಗೆ ಸಮಾನ ಅವಕಾಶ ಕಲ್ಪಿಸಿ ಉತ್ಸವಗಳ, ಮಹೋತ್ಸವಗಳ, ಬ್ರಹ್ಮೋತ್ಸವಗಳ ಪರಿಕಲ್ಪನೆ ಮೂಡಿಸಿ ಸಮಾಜದ ಪ್ರತಿಯೊಬ್ಬರೂ ಉತ್ಸವಗಳಲ್ಲಿ ಪಾಲ್ಗೊಂಡು ಆತ್ಮ ಸಂತೋಷಹೊAದುವ ಮಾರ್ಗವನ್ನು ರಾಮಾನುಜರು ತೋರಿಸಿಕೊಟ್ಟರು. ಇದರಿಂದಾಗಿ ರೈತರಿಂದ ಹಿಡಿದು ಕೂಲಿಯವರವರೆಗೆ ಉತ್ಸವಗಳಿಂದ ಉದ್ಯೋಗಪಡೆದು ಆರ್ಥಿಕ ಸಬಲತೆ ಹೊಂದುವAತಾಗಿ ಪ್ರವಾಸೋಧ್ಯಮವೂ ಅಭಿವೃದ್ಧಿಯಾಯಿತು. ತಿರುಪತಿಯಿಂದ ಹಿಡಿದು ಮೇಲುಕೋಟೆಯವರೆಗೆ ಇಂದಿಗೂ ವಿಶೇಷ ಉತ್ಸವಗಳ ವೇಳೆ ನಾವಿದನ್ನು ನಾಡಿನೆಲ್ಲೆಡೆಯಲ್ಲೂ ಕಾಣುತ್ತಿದ್ದೇವೆ.ದೇವಾಲಯವೇ ಸಮಾಜದ ಕೇಂದ್ರಿಕೃತವಾದ ನಂತರ ಶಿಲ್ಪಕಲೆ, ಸಂಗೀತ, ಗುಡಿಕೈಗಾರಿಕೆ, ಕೃಷಿ, ನೀರಾವರಿಗೆ ಮಹತ್ವ, ಮಾರುಕಟ್ಟೆ ವ್ಯವಸ್ಥೆ, ಧಾರ್ಮಿಕ ಚೌಕಟ್ಟಿನಲ್ಲಿ ನ್ಯಾಯದ ಹಂಚಿಕೆ, ಸೇವಾಮನೋಭಾವ, ಪರಸ್ಪರ ಸಹಕಾರ, ಮುಂತಾದ ಎಲ್ಲಾ ವ್ಯವಸ್ಥೆಗಳಿಗೆ ದೊರೆತ ಪ್ರೋತ್ಸಾಹ ರಾಮಾನುಜರ ಸಮಾಜಮುಖಿ ಅಭಿವೃದ್ಧಿಯ ದೂರದೃಷ್ಟಿ ಎಂದೇ ಹೇಳಬಹುದು. ಹೀಗಾಗಿ ಆಚಾರ್ಯ ತ್ರಯರಲ್ಲಿ ಸಮಾಜಮುಖಿ ಚಿಂತನೆ ಹೊಂದಿದ ರಾಮಾನುಜರೇ ಅಗ್ರಗಣ್ಯರಾಗಿದ್ದು, ಜೀವನಪರಿಷ್ಕಾರದ ಹರಿಕಾರ ಶ್ರೀರಾಮಾನುಜರಾಗಿದ್ದು, ಎಂದೆAದಿಗೂ ಪ್ರಾಥಸ್ಮರಣೀಯರಾಗಿದ್ದಾರೆ. ಇಂತಹ ಶ್ರೇಷ್ಟ ಸಂತರಾದ ರಾಮಾನುಜರ 1009ನೇ ಜಯಂತಿ ಏಪ್ರಿಲ್22ರಂದು ನಡೆಯಲಿದ್ದು ಅವರ ವಿಶಿಷ್ಟಾದ್ವೈತ ಸಿದ್ದಾಂತದ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯ ಆಗಬೇಕಿದೆ.
ರಾಮಾನುಜರ ಜೀವನ ಚಿತ್ರಣ: ತಮಿಳುನಾಡಿನ ಶ್ರೀಪೆರಂಬೂದೂರಿನಲ್ಲಿ ಪಿಂಗಳನಾಮ ಸಂವತ್ಸರ ಆರಿದ್ರಾ ನಕ್ಷತ್ರ ದಂದು ಕ್ರಿ.ಶ 1017ರಲ್ಲಿ ಜನಿಸಿದರು. ವಿದ್ಯಾಭ್ಯಾಸದ ನಂತರ ರಂಗನಾಥನಸೇವೆಯಲ್ಲಿ ನಿರತರಾದ ರಾಮಾನುಜರು ವಿವಾಹವಾದ ಸ್ವಲ್ಪ ಕಾಲದಲ್ಲಿಯೇ ಸಾಂಸಾರಿಕ ಬಂಧನದಿAದ ಹೊರಬಂದು ಕಂಚಿವರದರಾಜನ ಸನ್ನಿದಿಯಲ್ಲಿ ಸಂನ್ಯಾಸ ಸ್ವೀಕರಿಸಿ ಯತಿರಾಜರಾದರು. ಕರ್ನಾಟಕದಲ್ಲಿ ಪಂಚನಾರಾಯಣಸ್ವಾಮಿ ದೇವಸ್ಥಾನಗಳು. ಸೇರಿದಂತೆ ಮೇಲುಕೋಟೆ ತಿರುಪತಿ, ಕಂಚಿ, ಶ್ರೀರಂಗA ದೇಗುಲಗಳನ್ನು ಜೀರ್ಣೋದ್ಧಾರಗೊಳಿಸಿ ಭಾರತಾದ್ಯಂತ 108 ದಿವ್ಯಕ್ಷೇತ್ರಗಳಲ್ಲಿ ಭಗವಂತನ ಸಾನಿಧ್ಯ ಸಾಕ್ಷೀಕರಿಸಿದರು ಆಚಾರ್ಯ ತ್ರಯರಲ್ಲಿ ಈ ಮಟ್ಟದ ಆಂದೋಲನ ಮಾಡಿದ ಹಿರಿಮೆ ರಾಮಾನುಜರದು. ಜೀವನದುದ್ದಕ್ಕೂ ಸಾಮಾಜಿಕ ಸಾಮರಸ್ಯಕ್ಕೆ ಚಿಂತಿಸಿ ಅದರಂತೆ ಬದುಕಿದ ರಾಮಾನುಜರ 1005ನೇ ಜಯಂತಿ ಅವರ ಕರ್ಮಭೂಮಿಯಾದ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅದ್ದೂರಿಯಾಗಿ ನಡೆಯಲಿದೆ.ರಾಮಾನುಜರ ಕರ್ಮಭೂಮಿಯನ್ನು ಅಭಿವೃದ್ಧಿ ಪಡಿಸಿ: ಪ್ರಮುಖವಾದ ಸೌಲಭ್ಯಗಳಿಂದ ವಂಚಿತವಾಗಿರುವ ಮೇಲುಕೋಟೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಬೇಕಿದೆ ಹಲವು ಸಲ ಸ್ವತಃ ಮುಖ್ಯಮಂತ್ರಿಗಳೇ ಘೋಷಿಸಿದ್ದಾರಾದರೂ ಅಭಿವೃದ್ಧಿಯೋಜನೆಗಳು ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ ಭಾರತದ ನಾಲ್ಕು ಪ್ರಮುಖ ಶ್ರೀವೈಷ್ಣವ ಕ್ಷೇತ್ರವಾದಮೇಲುಕೋಟೆಯ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಿ ಪ್ರಮುಖವಾಗಿ ಭಕ್ತರಿಗೆ ಯಾತ್ರೀನಿವಾಸ, ಶೌಚಾಲಯ ಸ್ನಾನಗೃಹಗಳ ಸಂಕೀರ್ಣ ಹೀಗೆ ಭಕ್ತರಿಗೆ ಬೇಕಾದ ಕನಿಷ್ಠಮೂಲಸೌಕರ್ಯ ಕಲ್ಪಿಸಬೇಕು ಎಂಬುದು ಭಕ್ತರ ಒತ್ತಾಯವಾಗಿದೆ.
ಲೇಖನ: ಸ್ಥಾನೀಕಂ ಸಂತಾನರಾಮನ್
ಜೀವನಪರಿಷ್ಕಾರದ ಹರಿಕಾರ ಶ್ರೀರಾಮಾನುಜರ 1009ನೇ ಜಯಂತಿ



