ಕನಕಪುರ: ಗ್ರಾಮೀಣ ಭಾಗದಲ್ಲಿ ಸೇವೆ ಮಾಡಲು ವೈದ್ಯ ಬಾಂಧವರು ಮುಕ್ತ ಮನಸ್ಸಿನಿಂದ ಮುಂದೆ ಬಂದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಾ. ಸಿ. ಎನ್ ಮಂಜುನಾಥ್ ತಿಳಿಸಿದರು. ನಗರದ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ತಮ್ಮ ಸಂಸದರ ನಿಧಿ ಹಾಗೂ ಚೆನ್ನಮ್ಮ ದೇವೇಗೌಡ ಟ್ರಸ್ಟ್ ವತಿಯಿಂದ ಸುಮಾರು 32 ಲಕ್ಷ ರೂಪಾಯಿ ಮೌಲ್ಯದ ಶಸ್ತ್ರಚಿಕಿತ್ಸಾ ಹಾಗೂ ಔಷಧಿ ಉಪಕರಣಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು ದೇಶದಲ್ಲಿ ಇಂದು ಜನರಿಗೆ ಆರೋಗ್ಯ ಸಮಸ್ಯೆ ದೊಡ್ಡ ಪಿಡುಗಾಗಿದ್ದು ಇದಕ್ಕೆ ಕಾರಣ ನಾವು ಅನುಸರಿಸುತ್ತಿರುವ ಆಹಾರ ಪದ್ಧತಿ, ಮಧ್ಯಪಾನ, ಧೂಮಪಾನ, ಮಾದಕ ವ್ಯಸನಗಳ ಜೊತೆಗೆ ಒತ್ತಡದ ಜೀವನ ಹಾಗೂ ಆಧುನಿಕ ಜೀವನ ಶೈಲಿ ಹಾಗೂ ಸೋಮಾರಿತನದಿಂದ ಜನರು ಚಿಕ್ಕ ವಯಸ್ಸಿನಲ್ಲೇ ತಮ್ಮ ಪ್ರಾಣವನ್ನು ಕಳೆದು ಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ವಾಗಿರುವುದು ಒಂದು ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು. ಹಿಂದಿನ ಕಾಲದಲ್ಲಿ ಹೃದಯಾಘಾತ ಎಂಬುದು ಕೇವಲ ಶ್ರೀಮಂತರ ಖಾಯಿಲೆಯಾಗಿತ್ತು, ಅಂದು ಅನಾರೋಗ್ಯಕ್ಕೆ ಈಡಾಗುತ್ತಿದ್ದ ತಂದೆ ತಾಯಿಗಳು, ಹಿರಿಯರನ್ನು ಮಕ್ಕಳು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರೂ ಆದರೆ ಈಗ ತಂದೆ ತಾಯಿ ಪೋಷಕರು ತಮ್ಮ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಂತ ಪರಿಸ್ಥಿತಿ ನಿರ್ಮಾಣವಾಗಿದೆ ದೇಶದಲ್ಲಿ ವೈದ್ಯರ ಕೊರತೆ ಇಲ್ಲ ಏಕೆಂದರೆ ವರ್ಷಕ್ಕೆ ಸುಮಾರು ಲಕ್ಷಾಂತರ ಜನರು ವೈದ್ಯರು ತರಬೇತಿ ಪಡೆದು ಬರುತ್ತಿದ್ದರೂ ಸಹ ನೇಮಕಾತಿಯಾಗದೇ ಇರುವುದು ಸಹ ಗ್ರಾಮೀಣ ಭಾಗದಲ್ಲಿ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಬಗ್ಗೆ ಗಮನವನ್ನು ಹರಿಸಿ ಗ್ರಾಮೀಣ ಭಾಗದಲ್ಲಿ ವೈದ್ಯ ವೃತ್ತಿ ಮಾಡಲು ಕಡ್ಡಾಯ ಮಾಡುವುದರ ಜೊತೆಗೆ ಪರೀಕ್ಷೆಯಲ್ಲಿ ಗ್ರಾಮೀಣ ಕೃಪಾಂಕ ನೀಡಿ ವೇತನವನ್ನು ಹೆಚ್ಚಳ ಮಾಡುವಂತೆ ಮನವಿ ಮಾಡಿದರು. ತಾಲ್ಲೂಕಿನ ಜನತೆಯ ಹಿತದೃಷ್ಟಿಯಿಂದ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅಗತ್ಯ ವಿರುವ ಗರ್ಭಕೋಶ ಚಿಕಿತ್ಸೆ, ಹೆರಿಗೆ ಶಸ್ತ್ರಚಿಕಿತ್ಸೆ, ಹೃದಯ ಸಂಬಂಧಿ, ಕಿವಿ, ಉಸಿರಾಟಕ್ಕೆ ಸಂಬಂಧಿಸಿದ ಖಾಯಿಲೆ ಸೇರಿದಂತೆ 31ವಿವಿಧ ಬಗೆಯ ಯಂತ್ರೋಪಕರಣಗಳನ್ನು ಬೇಡಿಕೆ ಅನುಸಾರವಾಗಿ ಇಂದು ನೀಡಲಾಗಿದ್ದು ಮುಂದೆ ಜಿಲ್ಲೆಯ ಕನಕಪುರ, ಚನ್ನಪಟ್ಟಣ, ರಾಮನಗರ, ಮಾಗಡಿಯ ನಾಲ್ಕು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಹೃದಯ ಹಾಗೂ ಶಸ್ತ್ರಚಿಕಿತ್ಸೆ ಸಂಬAಧ ಎಕೋ ಮಿಷಿನ್ಗಳನ್ನು ಖಾಸಗಿ ಕಂಪನಿಯ ಸಿ ಎಸ್ ಆರ್ ನಿಧಿಯ ಮೂಲಕ ನೀಡಲಾಗುವುದು, ಪ್ರಧಾನಮಂತ್ರಿ ಡಯಾಲಿಸಿಸ್ ಕೇಂದ್ರ ವತಿಯಿಂದ ತಾಲ್ಲೂಕಿನ ಆಸ್ಪತ್ರೆಯಲ್ಲಿ ಡಯಾಲಿಸಿಸ್ಗೆ ಅನುಕೂಲವಾಗುವ ನಿಟ್ಟಿನಲ್ಲಿ ಸದ್ಯಕ್ಕೆ ನಾಲ್ಕು ಯಂತ್ರ ಗಳಿದ್ದು ಹೆಚ್ಚುವರಿ ಯಾಗಿ ಇನ್ನೂ ಎರಡು ಡಯಾಲಿಸಿಸ್ ಯಂತ್ರಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಎಷ್ಟೇ ಆಧುನಿಕ ಉಪಕರಣಗಳಿದ್ದರೂ ನುರಿತ ಸಿಬ್ಬಂದಿ ಇಲ್ಲದೇ ಯಂತ್ರಗಳು ಅನುಪಯುಕ್ತ ವಾಗುವದನ್ನು ತಪ್ಪಿಸಲು ಈಗಾಗಲೇ ರಾಜ್ಯ ಆರೋಗ್ಯ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರ ಬಳಿ ಚರ್ಚಿಸಿ ಅಗತ್ಯ ಸಿಬ್ಬಂದಿಗಳ ನೇಮಕಾತಿ ಕಡೆಗೆ ಗಮನ ಹರಿಸಲು ಪ್ರಯತ್ನ ಪಡುವುದಾಗಿ ತಿಳಿಸಿದರು. ಚೆನ್ನಮ್ಮ ದೇವೇಗೌಡ ಟ್ರಸ್ಟ್ ನ ಸದಸ್ಯೆ ಅನುಸೂಯಮ್ಮ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ಪ್ರತಿಮಾದೇವಿ ಎಂ.ಡಿ.ತಾಲ್ಲೂಕು ವೈದ್ಯಾಧಿಕಾರಿ ಮಂಜುನಾಥ್, ಸಿಬ್ಬಂದಿ ಕೆಂಪೇಗೌಡ, ದಿಶಾ ಸಮಿತಿ ಸದಸ್ಯೆ ಶೋಭಾ, ಬಿಜೆಪಿ ಮುಖಂಡರಾದ ಕೆ.ಪಿ ಕುಮಾರ್, ಚಂದ್ರಶೇಖರ್, ಮಮತ ಬೊಮ್ಮನಹಳ್ಳಿ ಕುಮಾರ್, ಭರತ್ ಕುಮಾರ್ ಹಾಗೂ ತಾಲ್ಲೂಕು ಆರೋಗ್ಯ ಸಮಿತಿ ಸದಸ್ಯರು ಬಿಜೆಪಿ ಪಕ್ಷದ ಮುಖಂಡರು ಮತ್ತು ಆಸ್ಪತ್ರೆ ವೈದ್ಯರು, ಸಿಬ್ಬಂದಿ ಈ ವೇಳೆ ಉಪಸ್ಥಿತರಿದ್ದರು.



