ಬಂಗಾರಪೇಟೆ :ನಮ್ಮ ಗ್ರಾಹಕರ ಮತ್ತು ದೇಶದ ಹಿತಾಶಕ್ತಿಯನ್ನು ಕಾಪಾಡುವುದು ನಮ್ಮ ಗುರಿ ಭಾರತದ ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂದಿಗೆ 71ವರ್ಷ ವನ್ನು ಪೂರೈಸುತ್ತಿದೆ. 1955ರಲ್ಲಿ ಉದಯಗೊಂಡ ಈ ಬ್ಯಾಂಕ್, ಈಗ ದೇಶದ ಮೂಲೆಮೂಲೆಯಲ್ಲೂ ತನ್ನ ನೆಟ್ವರ್ಕ್ ಅನ್ನು ಹೊಂದಿದೆ ಎಂದು ವ್ಯವಸ್ಥಾಪಕರಾದ ದೀಪ್ತಿ ಉಣ್ಣಿ ತಿಳಿಸಿದರು.ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಹಮ್ಮಿಕೊಂಡಿದ್ದ 71ನೇ ವರ್ಷದ ಬ್ಯಾಂಕ್ ದಿನದ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇವಲ ಇದೊಂದು ಬ್ಯಾಂಕ್ ಅಲ್ಲ, ಇದು 71 ವರ್ಷಗಳಿಂದ ದೇಶದ ಪ್ರಗತಿಯ ಜೊತೆಗಿದೆ. ದೇಶದ ಪ್ರಗತಿಯಲ್ಲಿ ಎಸ್ಬಿಐ ಕೂಡಾ ಪಾಲುದಾರ.ನಮ್ಮ ಈ ಬ್ಯಾಂಕ್ ದೇಶದ ನಂಬಿಕೆಯ ಆಧಾರ ಮತ್ತು ಭಾರತದ ಆಶಯಗಳ ಸಂಕೇತ. ದೇಶದ ಜನರನ್ನು ನಂಬಿಕೆಯನ್ನು ಗಳಿಸಿರುವ ನಮ್ಮನಿಮ್ಮೆಲ್ಲರ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಗಿದೆ ಎಂದರು.ದೇಶದ ಆರ್ಥಿಕ ಪ್ರಗತಿಯಲ್ಲಿ ಸ್ಟೇಟ್ ಬ್ಯಾಂಕ್ ಪಾತ್ರ ಬಹಳ ಮಹತ್ವದ್ದು. ಸುಮಾರು 52 ಕೋಟಿ ಗ್ರಾಹಕರನ್ನು ಹೊಂದಿರುವ ಈ ಬ್ಯಾಂಕ್ ನಲ್ಲಿ ಸುಮಾರು 2.3 ಲಕ್ಷ ಉದ್ಯೋಗಿಳಿದ್ದಾರೆ. ಖಾಸಗಿ ಬ್ಯಾಂಕುಗಳ ತೀವ್ರ ಪೈಪೋಟಿಯ ನಡುವೆಯೂ, ಭಾರತೀಯ ಬ್ಯಾಂಕಿAಗ್ ವ್ಯವಸ್ಥೆಯಲ್ಲಿ ಸ್ಟೇಟ್ ಬ್ಯಾಂಕ್ ಮೇರು ಪರ್ವತವಾಗಿ ನಿಂತಿರುವುದಕ್ಕೆ ಕಾರಣ, ಬ್ಯಾಂಕಿನ ವಿಸ್ತಾರವಾದ ಜಾಲ, ಸೇವೆ ಮತ್ತು ಭಾರತೀಯರು ಆ ಬ್ಯಾಂಕ್ ಮೇಲೆ ಇಟ್ಟಿರುವ ಅಚಲ ನಂಬಿಕೆ. ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ 55 ದೇಶಗಳಲ್ಲಿ 244 ಶಾಖೆಯನ್ನು ಸ್ಟೇಟ್ ಬ್ಯಾಂಕ್ ಹೊಂದಿದೆ ಎಂದರು.ಕಾಲಕ್ಕೆ ತಕ್ಕಂತೆ ತನ್ನ ಟೆಕ್ನಾಲಜಿಯನ್ನು ಬದಲಿಸಿಕೊಳ್ಳುತ್ತಾ, ಗ್ರಾಹಕರ ವಿಶ್ವಾಸಕ್ಕೆ ಬ್ಯಾಂಕ್ ಪಾತ್ರವಾಗಿದೆ. ಙಔಓಔ ಆಪ್ ಮೂಲಕವೂ ಸ್ಟೇಟ್ ಬ್ಯಾಂಕ್ ಡಿಜಿಟಲ್ ಸೇವೆಯನ್ನು ನೀಡುತ್ತಿದೆ. ಈ ಆಪ್ ಅನ್ನು ಸುಮಾರು 8.77 ಕೋಟಿ ಜನ ಬಳಸುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಅಪ್ಪಯ್ಯ ಗೌಡ,ನಂಜುAಡೇಶ್ವರಿ ಕ್ಲಿನಿಕ್ ವೈದ್ಯರಾದ ರೂಪಶ್ರೀ,ಬ್ಯಾಂಕಿನ ಸರ್ವಿಸ್ ಮ್ಯಾನೇಜರ್ ಸಾಲ್ಗೆ ಮುರ್ಮು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಗ್ರಾಹಕರಾದ ಶ್ರೀನಿವಾಸ್ ಇದ್ದರು.
`ನಮ್ಮ ಗ್ರಾಹಕರ ಮತ್ತು ದೇಶದ ಹಿತಾಶಕ್ತಿಯನ್ನು ಕಾಪಾಡುವುದು ನಮ್ಮ ಗುರಿ’



