ದಕ್ಷಿಣಕನ್ನಡ : ದಕ್ಷಿಣ ಕನ್ನಡದಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು ದೈವದ ಭಂಡಾರ ಮೆರವಣಿಗೆ ವೇಳೆ ಕಾಲು ಸಂಕ ಕುಸಿದು ಬಿದ್ದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುಚ್ಚೆ ಮೊಗರು ಭಾಗದ ಬಾವದಬೈಲು ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.ಕಾಲು ಸಂಕ ಮುರಿದು ಬಿದ್ದ ಪರಿಣಾಮ 8 ಮಂದಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ. ನಿತ್ಯ ಕಾಲು ಸಂಕದ ಮೇಲೆ ಜನರು ಓಡಾಡುತ್ತಿದ್ದರು. ಕಾಲು ಸಂಕ ಸುಮಾರು ಐವತ್ತು ವರ್ಷಗಳ ಹಿಂದಿನ ಹಳೆಯದಾಗಿದ್ದು ಶಿಥಿಲಗೊಂಡ ಪರಿಣಾಮ ಇಂದು ದೈವದ ಭಂಡಾರ ಬರವಣಿಗೆ ವೇಳೆ ಕುಸಿದಿದೆ. ಬಿದ್ದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.



