ಬೆಂಗಳೂರು: ಮೂರು ದಿನದ ಹಸುಗೂಸೊಂದು ಮೋರಿ ಪಕ್ಕ ಪತ್ತೆಯಾಗಿರುವ ಘಟನೆ ನೆಲಮಂಗಲ ತಾಲೂಕಿನ ಬೇಗೂರು ಬಳಿ ನಡೆದಿದೆ.
ಹಸುಗೂಸನ್ನು ಕಂಡ ಸ್ಥಳೀಯರು ಕೂಡಲೇ ಮಕ್ಕಳ ಸುರಕ್ಷಾ ತಂಡದವರಿಗೆ ಮಾಹಿತಿ ತಿಳಿಸಿದ ಪರಿಣಾಮ ಸುರಕ್ಷಾ ತಂಡದವರು ಆಗಮಿಸಿ ಮಗುವನ್ನು ರಕ್ಷಣೆ ಮಾಡಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ತಲುಪಿಸಿದ್ದಾರೆ.
ಮಗುವಿದ್ದ ಸ್ಥಳದಲ್ಲಿ ವಾಣಿ ವಿಲಾಸ ಆಸ್ಪತ್ರೆಯಿಂದ ಮಹಿಳೆ ಡಿಸ್ಚಾರ್ಜ್ ಆಗಿರುವ ಬಗ್ಗೆ ಮಾಹಿತಿ ಚೀಟಿ ದೊರೆತಿದೆ. ಈ ಚೀಟಿಯಲ್ಲಿ ಆಕೆಯ ಹೆಸರು ಸುಪ್ರೀತಾ ಎಂದು ತಿಳಿದುಬಂದಿದ್ದು, ಆನೇಕಲ್ ತಾಲೂಕಿನ ಜಿಗಣಿಯ ಬೆಸ್ತರ ಬೀದಿ ವಿಳಾಸವಿದೆ ಎಂದು ತಿಳಿದುಬಂದಿದೆ ಎಂದು ಹೇಳಲಾಗಿದ್ದು, ದೊರೆತಿರುವ ಹೆಣ್ಣು ಮಗುವಿನ ಪೋಷಕರಿಗಾಗಿ ಶೋಧ ಕಾರ್ಯ ನಡೆದಿದೆ.