ನವದೆಹಲಿ: ಮೊದಲು ಮಿಚೆಲ್ ಸ್ಟಾರ್ಕ್ಬೌಲಿಂಗ್, ಕೊನೆಯಲ್ಲಿ ನಾಯಕ ಅಕ್ಷರ್ ಪಟೇಲ್ ಮತ್ತು ಅಶುತೋಷ್ ಶರ್ಮಾಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ರಾಜಸ್ಥಾನದ ವಿರುದ್ಧ 5 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ರಾಜಸ್ಥಾನ 8 ವಿಕೆಟ್ ನಷ್ಟಕ್ಕೆ 193 ರನ್ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಇನ್ನೂ 4 ಎಸೆತ ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 197 ರನ್ ಹೊಡೆದು ಜಯಗಳಿಸಿತು.ಕೊನೆಯ 24 ಎಸೆತಗಳಲ್ಲಿ ಡೆಲ್ಲಿಗೆ 43 ರನ್ಗಳ ಅಗತ್ಯವಿತ್ತು. 17ನೇ ಓವರ್ನಲ್ಲಿ ಸ್ಟಬ್ಸ್ ವಿಕೆಟ್ ಕಳೆದುಕೊಂಡ ಡೆಲ್ಲಿ 8 ರನ್ ಹೊಡೆದರೆ, ಫೆರೀರಾ ಎಸೆದ 18ನೇ ಓವರ್ನಲ್ಲಿ 18 ರನ್ ಬಂತು. ಬ್ರಿಜೇಶ್ ಶರ್ಮಾ ಎಸೆದ 19ನೇ ಓವರಿನ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ ಔಟಾದರೂ ಈ ಓವರ್ನಲ್ಲಿ 12 ರನ್ ಸಿಕ್ಕಿತು. ಕೊನೆಯ ಓವರ್ ಮೊದಲ ಎರಡು ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸ್ ಸಿಡಿಸುವ ಮೂಲಕ ಅಶುತೋಷ್ ಡೆಲ್ಲಿ ತಂಡಕ್ಕೆ ಜಯನ್ನು ತಂದುಕೊಟ್ಟರು. ಅಶುತೋಷ್ ಔಟಾಗದೇ 18 ರನ್( 5 ಎಸೆತ, 1 ಬೌಂಡರಿ, 2 ಸಿಕ್ಸ್) ಅಕ್ಷರ್ ಪಟೇಲ್ ಔಟಾಗದೇ 34 ರನ್(18 ಎಸೆತ, 2 ಬೌಂಡರಿ, 2 ಸಿಕ್ಸ್) ಸಿಡಿಸಿದರು. ಅಭಿಷೇಕ್ ಪೊರೆಲ್ ಮತ್ತು ಮತ್ತು ಕೆಎಲ್ ರಾಹುಲ್ ಮೊದಲ ವಿಕೆಟಿಗೆ 61 ಎಸೆತಗಳಲ್ಲಿ 105 ರನ್ ಜೊತೆಯಾಟವಾಡಿದರು. ಅಭಿಷೇಕ್ 51 ರನ್(31 ಎಸೆತ, 7 ಬೌಂಡರಿ, 1 ಸಿಕ್ಸ್), ಕೆಎಲ್ ರಾಹುಲ್ 56 ರನ್(42 ಎಸೆತ, 1 ಬೌಂಡರಿ, 1 ಸಿಕ್ಸ್) ಹೊಡೆದು ಔಟಾದರು.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ರಾಜಸ್ಥಾನ ಪರ ವೈಭವ್ ಸೂರ್ಯವಂಶಿ 46 ರನ್(21 ಎಸೆತ, 5 ಬೌಂಡರಿ, 3 ಸಿಕ್ಸ್), ಧ್ರುವ್ ಜುರೇಲ್ 53 ರನ್(40 ಎಸೆತ, 5 ಬೌಂಡರಿ, 2 ಸಿಕ್ಸ್), ನಾಯಕ ರಿಯಾನ್ ಪರಾಗ್ 51 ರನ್(26 ಎಸೆತ, 3 ಬೌಂಡರಿ, 5 ಸಿಕ್ಸ್) ಹೊಡೆದು ಔಟಾದರು.ಮಿಚೆಲ್ ಸ್ಟಾರ್ಕ್ 4 ವಿಕೆಟ್ ಪಡೆದರೆ ಲುಂಗಿ ಎನ್ಗಿಡಿ ಮತ್ತು ಮಾಧವ್ ತಿವಾರಿ ತಲಾ 2 ವಿಕೆಟ್ ಪಡೆದರು. ಇನ್ಸಿಂಗ್ಸ್ನ 15ನೇ ಓವರಿನ ಸ್ಟಾರ್ಕ್ ರಿಯಾನ್ ಪರಾಗ್, ಫೆರೀರಾ, ರವಿ ಸಿಂಗ್ ಅವರನ್ನು ಔಟ್ ಮಾಡುವ ಮೂಲಕ ರಾಜಸ್ಥಾನ ರನ್ ಓಟಕ್ಕೆ ರೋಚಕ ತಿರುವು ನೀಡಿದರು.
ಅಶುತೋಷ್ ಸಿಕ್ಸರ್- ಡೆಲ್ಲಿಗೆ ರೋಚಕ ಜಯ



