ನವದೆಹಲಿ: ಲೋಕಸಭೆ ಚುನಾವಣೆಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಆದ್ರೆ ಚುನಾವಣೆಗೂ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಇದೀಗ ಜಾರಿ ನಿರ್ದೇಶನಾಲಯ (ED) ಅರವಿಂದ್ ಕೇಜ್ರಿವಾಲ್ಗೆ ಮತ್ತೊಮ್ಮೆ ಸಮನ್ಸ್ ಕಳುಹಿಸಿದೆ.
ಇತ್ತೀಚೆಗೆ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ನಂತರ, ಇದೀಗ ಜಲ ಮಂಡಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಇಡಿ ಕೇಜ್ರಿವಾಲ್ಗೆ ಮತ್ತೆ ಸಮನ್ಸ್ ಕಳುಹಿಸಿತ್ತು. ಅದರ ಪ್ರಕಾರ ಮಾರ್ಚ್ 18ರ ಸೋಮವಾರ ಅಂದರೆ ಇಂದು ಇಡಿ ಮುಂದೆ ಹಾಜರಾಗಬೇಕು ಎಂದು ಸಮನ್ಸ್ನಲ್ಲಿ ಹೇಳಲಾಗಿತ್ತು. ಆದರೆ ಇದನ್ನು ಕೇಜ್ರಿವಾಲ್ ನಿರಾಕರಿಸಿದ್ದಾರೆ.
ದೆಹಲಿ ಜಲ್ ಬೋರ್ಡ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಸೆಕ್ಷನ್ 50 ರ ತಡೆ ಕಾಯ್ದೆಯ ಅಡಿಯಲ್ಲಿ ಇಡಿ ಕೇಜ್ರಿವಾಲ್ಗೆ ಸಮನ್ಸ್ ಜಾರಿ ಮಾಡಿತ್ತು. ಆದ್ರೆ ಅರವಿಂದ್ ಕ್ರೇಜಿವಾಲ್ ಇದನ್ನು ಸಹ ನಿರಾಕರಿಸಿದ್ದಾರೆ.