ನವದೆಹಲಿ: ಡಿಕೆ ಶಿವಕುಮಾರ್ ಅವರು ಗುಂಪುಕಟ್ಟಿಕೊಂಡು ಹೋಗಿ ರಾಜಕೀಯ ಮಾಡುವವರಲ್ಲ, ಹೈಕಮಾಂಡ್ಗೆ ನಿಷ್ಠೆಯಿಂದ ಇರುವವರು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದರು.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಬ್ಬರನ್ನೂ ದೆಹಲಿಗೆ ಕರೆದಿದ್ದಾರೆ ಏನಾದರೂ ಒಂದು ತೀರ್ಮಾನ ಆಗಬಹುದು. ಇರುವ ಗೊಂದಲ ಪರಿಹಾರ ಆಗಬೇಕು, ಎಲ್ಲವೂ ತಿಳಿ ಆಗಬೇಕು. ಎಲ್ಲದಕ್ಕೂ ಹೈಕಮಾಂಡ್ ತೆರೆ ಎಳೆಯಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಸಿಎಂ ಜೊತೆಗೆ ಆಪ್ತ ಸಚಿವರು ದೆಹಲಿಗೆ ಪ್ರಯಾಣಿಸಿರುವ ವಿಚಾರ ಕುರಿತು ಮಾತನಾಡಿ, ಡಿ.ಕೆ ಶಿವಕುಮಾರ್ ಗುಂಪು ಕಟ್ಟಿಕೊಂಡು ಹೋಗಿ ರಾಜಕೀಯ ಮಾಡುವವರಲ್ಲ. ಅವರು ಹೈಕಮಾಂಡ್ ನಿಷ್ಠೆಯಿಂದ ಇರುವವರು. ಸಿಎಂ ಸಹ ಯಾರನ್ನೂ ಕರೆದಿಲ್ಲ ಕುತೂಹಲಕ್ಕೆ ಸಹಜವಾಗಿ 3-4 ಸಚಿವರು ಹೋಗಿರಬಹುದು. ಸಿಎಂ ಜೊತೆ ಈ ಮೊದಲೂ ದೆಹಲಿಗೆ ಹೋಗುವಾಗ ಜೊತೆಗೆ ಸಚಿವರು ಹೋಗುತ್ತಿದ್ದರು, ಇದೇ ಮೊದಲಲ್ಲ. ಎಲ್ಲವೂ ಹೈಕಮಾಂಡ್ ತೀರ್ಮಾನ. ಗೊಂದಲ ಪರಿಹಾರ ಆದರೆ ಮುಂದಿನ ಚುನಾವಣೆಗೆ ಅನುಕೂಲ ಆಗಲಿದೆ ಎಂದರು.
ಎಲ್ಲದಕ್ಕೂ ಹೈಕಮಾಂಡ್ ತೆರೆ ಎಳೆಯಬೇಕು ಬಾಲಕೃಷ್ಣ



