ಬೆಂಗಳೂರು: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಏಳು ಜನರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲಾಧಿಕಾರಿ ಜಗದೀಶ್ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ ಮಾಡಿದ್ದಾರೆ.
ತನಿಖೆಯ ಸಂಪೂರ್ಣ ವರದಿ ಸಲ್ಲಿಕೆ ಮಾಡಿದ್ದು, ಇದರಲ್ಲಿ ಏಳು ಜನರ ಸಾವಿಗೆ ಆರೋಗ್ಯ ಇಲಾಖೆ ಇಂಜಿನಿಯರ್ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿ, ನಿರ್ಲಕ್ಷ÷್ಯವೇ ಕಾರಣ ಹಾಗೂ ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ÷್ಯವಿರುವುದು ಬಯಲಾಗಿದೆ.
1.ಗೋಡೆ ಪಕ್ಕದಲ್ಲಿ ಮಣ್ಣು ಸುರಿದಿರೋದು ದುರಂತಕ್ಕೆ ಮೂಲ ಕಾರಣ
2.ಗೋಡೆ ಪಕ್ಕ ಸುರಿದಿರುವ ಮಣ್ಣನ್ನ ಸೂಕ್ತ ಸಮಯಕ್ಕೆ ಗುತ್ತಿಗೆದಾರ ಮತ್ತು ಆರೋಗ್ಯ ಇಲಾಖೆ ಇಂಜಿನಿಯರ್ ತೆರವು ಮಾಡಿಲ್ಲ
3.ಆರೋಗ್ಯ ಇಲಾಖೆ ಇಂಜಿನಿಯರ್ ಮತ್ತು ಗುತ್ತಿಗೆದಾರ ಕಾರಣ
4.8 ಅಡಿ ಗೋಡೆ ಇದ್ದರೆ 6 ಅಡಿ ಮಣ್ಣು ಸುರಿದಿದ್ದಾರೆ.
೫.ಗೋಡೆ ಪಕ್ಕದಲ್ಲಿ ಕ್ರಿಕೆಟ್ ಆಡುವುದಕ್ಕೆ ನೆಟ್ ಸೃಷ್ಟಿ ಮಾಡಲಾಗಿದೆ
೫.ಸಿಎಸ್ಆರ್ ಫಂಡ್ ಕೊಟ್ಟಿದ್ದಾರೆ, ದಾನಿಯೊಬ್ಬರಿಗೆ ಗೋಡೆ ಪಕ್ಕದಲ್ಲಿ ಸ್ಟೇಡಿಯಂ ರೀತಿ ಆಸ್ಪತ್ರೆ ಆಡಳಿತ ಮಂಡಳಿ ಸೃಷ್ಟಿಮಾಡಿದೆ
೬.ಕ್ರಿಕೆಟ್ ನೆಟ್ ಸೃಷ್ಟಿ ಮಾಡೋಕೆ ಮಣ್ಣು ಸುರಿದಿದ್ದಾರೆ, ಇದರಲ್ಲಿ ಆಸ್ಫತ್ರೆ ನಿರ್ಲಕ್ಷ್ಯವಿದೆ
ಈ ಕುರಿತು ಮಾಧ್ಯಮದೊಂದಿಗೆ ಬೆಂಗಳೂರು ಡಿಸಿ ಜಗದೀಶ್ ಮಾತನಾಡಿ, ಸರ್ಕಾರ ತನಿಖೆಗೆ ಸೂಚಿಸಿತ್ತು, ಕೂಲಂಕುಷವಾಗಿ ತನಿಖೆಯನ್ನ ಮಾಡಿ, ವರದಿ ಸಲ್ಲಿಕೆ ಮಾಡಿದ್ದೇವೆ. ಏನು ಸಲ್ಲಿಕೆ ಆಗಿದೆ ಅಂತಾ ಡಿಸ್ಕ್ಲೋಸ್ ಮಾಡಲ್ಲ. ಮುಚ್ಚಿದ ಲಕೋಟೆಯಲ್ಲಿ ನೀಡಿದ್ದೇನೆ. ಸರ್ಕಾರ ಏನು ಕ್ರಮ ವಹಿಸುತ್ತೋ ಕಾದು ನೋಡಬೇಕು ಎಂದಿದ್ದಾರೆ.
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದ ಪ್ರಕರಣ ಸರ್ಕಾರಕ್ಕೆ ಜಿಲ್ಲಾಧಿಕಾರಿ ತನಿಖಾ ವರದಿ ಸಲ್ಲಿಕೆ



