ರಾಜ್ಯದಲ್ಲಿ ನಡೆದ 2 ಉಪಚುನಾವಣೆಗಳ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಸಮಬಲ ಹೋರಾಟ ನಡೆಸಿವೆ. ಮಧ್ಯಾಹ್ನ 12 ಗಂಟೆ ವೇಳೆಗ ಕಂಆಗ್ರೆಸ್ ಪಕ್ಷದ ಸಮರ್ಥ ಶಾಮನೂರು ಮುನ್ನಡೆಯಲಿದ್ದು, ಬಿಜೆಪಿಯ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರು ಹಿನ್ನೆಡೆಯಲ್ಲಿದ್ದರು. ಬಾಗಲಕೋಟೆ ಮತ ಕ್ಷೇತ್ರದಲ್ಲಿ ಮೊದಲನೇ ಸುತ್ತಿನ ಮತಎಣಿಕೆಯಿಂದಲೂ ಕಾಂಗ್ರೆಸ್ ಪಕ್ಷದ ಉಮೇಶ್ಮೇಟಿ ಮುನ್ನಡೆ ಸಾಧಿಸುತ್ತಾ ಬಂದಿದ್ದಾರೆ. ಮಧ್ಯಾಹ್ನ 19 ಸುತ್ತಿನ ಮತದಾನವಾದಾಗ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ಮೇಟಿ 13000ಗಳ ಹೆಚ್ಚು ಅಂತರದಿಂದ ಮುಂದಿದ್ದರು. ಬಿಜೆಪಿಯ ವೀರಣ್ಣ ಚರಂತಿಮಠ ಅವರು ಆರಂಭದಿAದಲೂ ಹಿನ್ನಡೆಯಲಿದ್ದಾರೆ.



