ಎಸ್.ಮಂಜು ಮಳವಳ್ಳಿ
ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯ ಬಸಾಪುರ ಗ್ರಾಮದಿಂದ ದೇವಿರಹಳ್ಳಿ ಗ್ರಾಮದ ವರೆಗೆ ವಾಹನದ ಸವಾರರು ಹಾಗೂ ರಸ್ತೆ ಬದಿಯಲ್ಲಿ ಸಂಚಾರ ನಡೆಸುವ ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಸಾಗಬೇಕಾಗಿದೆ. ಕಾರಣ ಅಪಘಾತಗಳ ಕೇಂದ್ರ ಬಿಂದು ಆಗುತ್ತಿರುವ ಕಾರಣದಿಂದ ಬಸಾಪುರ ಗೇಟ್ ಬಳಿ ಬೈಪಾಸ್ ಹಾಗೂ ಹಲಗೂರು ಪಟ್ಟಣದ ಒಳಗಡೆ ಹೋಗುವ ಸರ್ಕಲ್ ಇದಾಗಿದೆ ಮಳವಳ್ಳಿ ಇಂದ ಬರುವ ವಾಹನಗಳಿಗೆ ರಸ್ತೆಯ ದೀಬಾ ಹಾಕಿದ್ದಾರೆ ಆದರೆ ಕನಕಪುರ ದಿಂದ ಬರುವ ವಾಹನಗಳಿಗೆ ಯಾವುದೇ ದಿಬ್ಬವಿಲ್ಲದೆ ವಾಹನ ಸವಾರರು ಅತಿ ವೇಗದಿಂದ ಬಂದು ಬಸಾಪುರ ಗ್ರಾಮಕ್ಕೆ ಹೋಗುವ ಜನರಿಗೆ ಕನಕಪುರ ದಿಂದ ಬರುವ ವಾಹನ ಸವಾರರಿಗೆ ಸಾವಿನ ಭಯ ಕಾಡ ತೊಡಗುತ್ತದೆ. ಹಲಗೂರು ಪಟ್ಟಣದ ಒಳಗೆ ಹೋಗುವ ಸಂದರ್ಭದಲ್ಲಿ ಅಪಘಾತದ ಮೃತ್ಯು ಕಾಯುತ್ತಿರುತ್ತದೆ.
ಈ ಭಾಗದಲ್ಲಿ ಮೇಲ್ ಸೇತುವೆ ನಿರ್ಮಾಣ ಮಾಡಿ ಜನರ ಸುರಕ್ಷತೆಗೆ ಕ್ರಮ ವಹಿಸಬೇಕು ಎಂದು ಈ ಹಿಂದೆ ಪ್ರತಿಭಟನೆಗಳು ಸಹ ನಡೆದಿದ್ದವು ಆದರೆ ಯಾವ ಮೇಲ್ಕಾಸೇತುವೆ ಸಹ ನಿರ್ಮಾಣ ಮಾಡದೆ ಜನರ ಪ್ರಾಣಕ್ಕೆ ಸಂಚಕಾರ ಉಂಟಾಗಿದೆ.
ಬಸಾಪುರ ಗೇಟ್ ಮುಂದೆ ಸಾಗಿದರೆ ದೇವಿರಹಳ್ಳಿ ಮಧ್ಯೆ ಬರುವ ಗುಂಡಾಪುರ ಗೇಟ್ ಬಾಳೆಹೊನ್ನಿಗ ಗೇಟ್ ದಳವಾಯಿ ಕೋಡಿಹಳ್ಳಿ ಗೇಟ್ ಬಳಿಯಂತೂ ತುಂಬಾ ಅಪಘಾತಗಳು ಸಂಭವಿಸುತ್ತೇವೆ. ವಾಹನ ಸವಾರರು ಮೈಮೇಲೆ ದೆವ್ವ ಬಂದವರAತೆ ಅತಿ ವೇಗದಿಂದ ವಾಹನ ಚಲಾಯಿಸಿ ಜನರ ಜೀವನಕ್ಕೆ ಸಂಚಕಾರ ತರುತ್ತಿದ್ದಾರೆ.
ಗುಂಡಾಪುರ ಹಾಗೂ ಬಾಳೆ ಹೊನ್ನಿಗ ದೇವಿರಹಳ್ಳಿ ಗ್ರಾಮದ ಜನರು ದಳವಾಯಿ ಕೋಡಿಹಳ್ಳಿ ಪಂಚಾಯಿತಿ ಆಗಿರುವುದರಿಂದ ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಹಾಲಿನ ಡೈರಿ ಪ್ರಾರ್ಥಮಿಕ ಶಾಲೆ ಹಾಗೂ ಪ್ರೌಢಶಾಲೆ, ವಸತಿ ಶಾಲೆಗಳು ಇರುವುದರಿಂದ ಗ್ರಾಮದ ಜನರು ಹೆಚ್ಚು ಸಂಚಾರ ಮಾಡುವುದರಿಂದ ಈ ಗ್ರಾಮದ ಜನರಿಗೆ ಜೀವ ಭಯ ಕಾಡಲಾರಂಭಿಸಿದೆ.
ದಳವಾಯಿ ಕೋಡಿಹಳ್ಳಿ ಗ್ರಾಮದ ಜನರು ಸಹ ಹಾಲಿನ ಡೈರಿಗೆ ಪ್ರಾರ್ಥಮಿಕ ಶಾಲೆ ಹಾಗೂ ಪ್ರೌಢಶಾಲೆ, ವಸತಿ ಶಾಲೆಗಳು ಇರುವುದರಿಂದ ಗ್ರಾಮದ ಜನರು ಹೆಚ್ಚು ಸಂಚಾರ ಬೈಕು ಹಾಗೂ ರಸ್ತೆ ಬದಿಯಲ್ಲಿ ನಡೆದು ಸಂಚಾರ ಮಾಡುವ ಅವಶ್ಯಕತೆ ಜನರಿಗೆ ಎದುರಾಗಿದೆ.
ಹೊಲಕ್ಕೆ ರೈತರು ಹಾಗೂ ಖುಷಿ ಕಾರ್ಮಿಕರು ದನ ಕರು ಎಮ್ಮೆ ಕುರಿ ಮೇಕೆ ಸಾಗಣಿಕೆದಾರರು ತಮ್ಮ ಹೊಲಗದ್ದೆಗಳಿಗೆ ಹೋಗುವ ಸಂದರ್ಭದಲ್ಲಿ ರಸ್ತೆ ದಾಟಿ ಹೋಗಬೇಕಾಗಿರುವುದರಿಂದ ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟಬೇಕಾಗಿದೆ.
ಶಾಲಾ ವಿದ್ಯಾರ್ಥಿಗಳಿಗಂತೂ ರಸ್ತೆ ದಾಟಲು ಹರ ಸಾಹಸ ಪಡಬೇಕಾಗಿದೆ. ಮಳವಳ್ಳಿ ಕನಕಪುರ ರಸ್ತೆ ರಾಷ್ಟ್ರೀಯ ಹೆದ್ದಾರಿ 209 ಆಗಿರುವುದರಿಂದ ವಾಹನಗಳ ಸಂಖ್ಯೆ ಅಧಿಕವಾಗಿದೆ.
ಸಾತನೂರು ಬಳಿ ಕಬ್ಬಾಳಮ್ಮ ಪುಣ್ಯಕ್ಷೇತ್ರ ಇರುವುದರಿಂದ ಹಾಗೂ ಸಂಗಮ ಗಾಳಿ ಬೋರೆ ಫಿಶಿಂಗ್ ಕ್ಯಾಂಪ್ ಬಸವನಪುರದ ಹೆಬ್ಬಟ್ಟರಾಯ ದೇವಾಲಯ ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಮುತ್ತತರಾಯ ಪುಣ್ಯಕ್ಷೇತ್ರ ಹಾಗೂ ಕಾವೇರಿ ಫಿಶಿಂಗ್ ಕ್ಯಾಂಪ್ ಪ್ರೇಕ್ಷಣೀಯ ಸ್ಥಳಗಳು ಇರುವುದರಿಂದ ಪ್ರವಾಸಿಗರ ಸಂಖ್ಯೆಯೂ ಸಹ ಹೆಚ್ಚಾಗಿದೆ .
ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಅಪಘಾತಗಳ ಸ್ಥಳವನ್ನು ಗುರುತಿಸಿ ಅಂತಹ ಸ್ಥಳಗಳಲ್ಲಿ ಸೂಕ್ತ ರಕ್ಷಣೆ ಒದಗಿಸಿ ಜನರ ಅಮೂಲ್ಯವಾದ ಜೀವಗಳನ್ನು ಉಳಿಸಲು ಮುಂದಾಗ ಬೇಕಾಗಿದೆ.
ರಾಷ್ಟ್ರೀಯ ಹೆದ್ದಾರಿ 209ರ ಕನಕಪುರ-ಬೆಂಗಳೂರು ರಸ್ತೆಯಲ್ಲಿ ಬರುವ ಬಸಾಪುರ-ದೇವಿರಹಳ್ಳಿ ಗ್ರಾಮದ ವರೆಗೆ ಅಪಘಾತಗಳ ಕೇಂದ್ರವಾಗಿ ಮಾರ್ಪಾಡು



