ಮೈಸೂರು: ದಿನದಿಂದ ದಿನಕ್ಕೆ ಕಾಡಾನೆಗಳ ಉಪಟಳ ಹೆಚ್ಚಿದ್ದು, ಮತ್ತೋರ್ವ ರೈತ ಕಾಡಾನೆ ದಾಳಿಗೆ ಬಲಿಯಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಮುದಗನೂರು ತಾಲೂಕಿನ ಚಲುವಯ್ಯ(65) ಎಂಬ ರೈತ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾನೆ.
ತನ್ನ ಜಮೀನಿನಲ್ಲಿ ಕಟಾವು ಮಾಡಿದ್ದ ರಾಗಿ ಬೆಳೆಯನ್ನು ಕಂತೆ ಕಟ್ಟುವ ವೇಳೆ ಆನೆ ದಾಳಿ ಮಾಡಿದೆ.
ಆನೆ ನೋಡಿ ಗಾಬರಿಗೊಂಡ ಚಲುವಯ್ಯ ತೋಟದ ಮನೆಯವರೆಗೂ ಓಡಿದರೂ ಬಿಡದ ಆನೆ ಆತನ ಮೇಲೆ ದಾಳಿ ನಡೆಸಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.